News Karnataka Kannada
Friday, April 19 2024
Cricket
ವಿದೇಶ

ಪ್ರಧಾನಿ ಮೋದಿ ನನ್ನ ಮಗನಿದ್ದಂತೆ: ಟೈಮ್ಸ್ ಪತ್ರಿಕೆಯ ಪ್ರಭಾವಿ ಮಹಿಳೆ ಬಿಲ್ಕೀಸ್ ಬಾನೊ

Photo Credit :

ಪ್ರಧಾನಿ ಮೋದಿ ನನ್ನ ಮಗನಿದ್ದಂತೆ: ಟೈಮ್ಸ್ ಪತ್ರಿಕೆಯ ಪ್ರಭಾವಿ ಮಹಿಳೆ ಬಿಲ್ಕೀಸ್ ಬಾನೊ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನನ್ನ ಮಗನಿದ್ದಂತೆ ಮತ್ತು ಅವರ ದೀರ್ಘಾಯುಷ್ಯ ಹಾಗೂ ಆರೋಗ್ಯಕ್ಕೆ ಪ್ರಾರ್ಥಿಸುತ್ತೇನೆ ಎಂದು ಶಹೀನ್ ಬಾಗ್ ಪ್ರತಿಭಟನೆ ವೇಳೆ ಗಮನ ಸೆಳೆದಿದ್ದ 82ರ ಹರೆಯದ ಬಿಲ್ಕೀಸ್ ಬಾನೊ ಅವರು ಹೇಳಿರುವರು.

ಟೈಮ್ಸ್ ಪತ್ರಿಕೆಯ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ `ದಾದಿ ಆಫ್ ಶಹೀನ್ ಬಾಗ್’ ಬಾನೋ ಅವರು, ನನಗೆ ಇದರಿಂದ ತುಂಬಾ ಸಂತೋಷವಾಗಿದೆ ಮತ್ತು ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದಿರುವರು.

ಸಿಎಎ ವಿರುದ್ಧದ ಪ್ರತಿಭಟನೆ ವೇಳೆ ಗಮನ ಸೆಳೆದಿದ್ದ ಬಿಲ್ಕಿಸ್ ಬಾನೊ ಅವರ ಜತೆಗೆ ಟೈಮ್ಸ್ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ನಟ ಆಯುಷ್ಮಾನ್ ಖುರಾನ, ವಿಜ್ಞಾನಿ ರವೀಂದ್ರ ಗುಪ್ತಾ, ಸುಂದರ್ ಪಿಚಾಯಿ ಮೊದಲಾದವರು ಸ್ಥಾನ ಪಡೆದಿರುವರು.

ನಾನು ಶಾಲೆಗೆ ಹೋದವಳಲ್ಲ, ಕೇವಲ ಖುರಾನ್ ಶರೀಫ್ ಓದಿದವಳು. ಇಂದು ನನಗೆ ತುಂಬಾ ಸಂತೋಷವಾಗಿದೆ. ನಾನು ಈ ಪಟ್ಟಿಯಲ್ಲಿ ಇರುವ ಪ್ರಧಾನಿ ಅವರನ್ನು ಅಭಿನಂದಿಸುತ್ತೇನೆ. ಅವರು ನನ್ನ ಮಗನಂತೆ. ನಾನು ಅವರಿಗೆ ಜನ್ಮ ನೀಡದೆ ಇದ್ದರೂ ನನ್ನ ಸೋದರಿ ಜನ್ಮ ನೀಡಿರುವಳು. ಅವರ ದೀರ್ಘಾಯುಷ್ಯ ಹಾಗೂ ಸಂತೋಷಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಬಿಲ್ಕೀಸ್ ಬಾನೋ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು