News Karnataka Kannada
Thursday, April 18 2024
Cricket
ವಿದೇಶ

ಪೊಲೀಸ್ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದು ರಾಜಕೀಯದತ್ತ ಬಿಹಾರದ ಡಿಜಿಪಿ ಗುಪ್ತೇಶ್ವರ ಪಾಂಡೆ

Photo Credit :

ಪೊಲೀಸ್ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದು ರಾಜಕೀಯದತ್ತ ಬಿಹಾರದ ಡಿಜಿಪಿ ಗುಪ್ತೇಶ್ವರ ಪಾಂಡೆ

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದ ತನಿಖೆಯಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿದ್ದ ಬಿಹಾರ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಗುಪ್ತೇಶ್ವರ ಪಾಂಡೆ ಅವರು ಪೊಲೀಸ್ ಸೇವೆಗಳಿಂದ ಸ್ವಯಂ ನಿವೃತ್ತಿ ಪಡೆದಿದ್ದಾರೆ.

1987 ರ ಬಿಹಾರ ಕೇಡರ್‌ನ ಐಪಿಎಸ್ ಅಧಿಕಾರಿ ಗುಪ್ತೇಶ್ವರ ಪಾಂಡೆ ಮುಂಚಿತ ನಿವೃತ್ತಿಯನ್ನು ಕೋರಿದ್ದರು ಮತ್ತು ರಾಜ್ಯಪಾಲ ಫಾಗು ಚೌಹಾನ್ ಅವರ ರಾಜೀನಾಮೆಯನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ದಿವಂಗತ ನಟನ ಸಾವಿನ ಪ್ರಕರಣದಲ್ಲಿ ಪಾಂಡೆ ಮುಂಬೈ ಪೊಲೀಸರನ್ನು ಬಹಿರಂಗವಾಗಿ ಟೀಕಿಸಿದ್ದರು. ಮುಖ್ಯಮಂತ್ರಿ ನಿತೀಶ್ ಕುಮಾರ್ ಬಗ್ಗೆ ಪ್ರತಿಕ್ರಿಯಿಸಲು ನಟ ರಿಯಾ ಚಕ್ರವರ್ತಿ ಅವರಿಗೆ ನಿಲುವು ಇಲ್ಲ ಎಂದು ಅವರು ಹೇಳಿದ ಮಾತುಗಳು ವಿವಾದಕ್ಕೆ ನಾಂದಿ ಹಾಡಿದ್ದರು.

ಇದಕ್ಕೂ ಮುನ್ನ 2014 ರಲ್ಲಿ ರಾಜಕೀಯಕ್ಕೆ ಧುಮುಕುವ ಆಲೋಚನೆಯಿಂದ ಮತ್ತು ಬಿಜೆಪಿಯಲ್ಲಿ ಟಿಕೆಟ್ ಪಡೆಯುವ ಆಶಯ ಹೊಂದಿಂದ ಪಾಂಡೆ ಅವರು ಸ್ವಯಂಪ್ರೇರಿತ ನಿವೃತ್ತಿಯನ್ನು ಕೋರಿದ್ದರು.

ಆದರೆ, ಅವರು ಟಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ ಮತ್ತು ವಿಆರ್ ಎಸ್ ತೆಗೆದುಕೊಂಡ ಒಂಬತ್ತು ತಿಂಗಳ ನಂತರ, ತಮ್ಮ ರಾಜೀನಾಮೆಯನ್ನು ಹಿಂಪಡೆಯಲು ಅವಕಾಶ ನೀಡುವಂತೆ ಬಿಹಾರ ಸರ್ಕಾರವನ್ನು ಕೋರಿದರು. ಅವರ ಮನವಿಯನ್ನು ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಅಂಗೀಕರಿಸಿದ್ದರಿಂದ ಪಾಂಡೆ ಮತ್ತೆ ಕೆಲಸಕ್ಕೆ ಸೇರಿದರು. ಅವರು 2019 ರ ಲೋಕಸಭಾ ಚುನಾವಣೆಗೆ ಸ್ವಲ್ಪ ಮೊದಲು ಬಿಹಾರ ಪೊಲೀಸರ ಡಿಜಿಪಿ ಆಗಿ ನೇಮಕಗೊಂಡಿದ್ದರು.

ಇಂದಿನ ಈ ಬೆಳವಣಿಗೆಗೂ ಅಕ್ಟೋಬರ್ –ನವೆಂಬರ್ ನಲ್ಲಿ ಬಿಹಾರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಶಯವೇ ಕಾರಣ ಎಂಬ ಮಾತುಗಳು ಕೇಳಿಬರುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು