News Karnataka Kannada
Friday, April 19 2024
Cricket
ವಿದೇಶ

ಪುಲ್ವಾಮ ಹುತಾತ್ಮ ಪತಿಯ ಎದುರೇ ಪಣ ತೊಟ್ಟಿದ್ದ ಪತ್ನಿ ಇಂದು ಲೆಫ್ಟಿನೆಂಟ್‌

Photo Credit :

ಪುಲ್ವಾಮ  ಹುತಾತ್ಮ ಪತಿಯ ಎದುರೇ ಪಣ ತೊಟ್ಟಿದ್ದ ಪತ್ನಿ ಇಂದು ಲೆಫ್ಟಿನೆಂಟ್‌

ಹರಿಯಾಣ: 2019ರ ಫೆಬ್ರುವರಿ 14. ಇಡೀ ದೇಶ ಬೆಚ್ಚಿ ಬೀಳುವಂಥ ಘಟನೆ ಪುಲ್ವಾಮಾದಲ್ಲಿ ನಡೆಯಿತು. ಉಗ್ರರ ಅಟ್ಟಹಾಸಕ್ಕೆ ಭಾರತೀಯ ಯೋಧರು ಅರೆ ಕ್ಷಣದಲ್ಲಿ ಹುತಾತ್ಮರಾಗಿ ಹೋದರು. ಅಂಥ ಒಬ್ಬರು ಹುತಾತ್ಮರ ಪೈಕಿ ಹರಿಯಾಣದ ವಿಭೂತಿ ಶಂಕರ್‌ ಒಬ್ಬರು.
ಮದುವೆಯಾಗಿ ಇನ್ನೂ ಒಂಬತ್ತು ತಿಂಗಳು ತುಂಬಿರದ ವಿಭೂತಿ ಅವರು ದೇಶಕ್ಕಾಗಿ ಪ್ರಾಣ ಕೊಟ್ಟರು. ಇತ್ತ ಅವರ ಪತ್ನಿ ನಿಖಿತಾ ಡೊಂಡಿಯಾಲ ದಿಕ್ಕು ಕಾಣದೇ ಕೆಂಗೆಟ್ಟುಹೋದರು. ವರ್ಷ ತುಂಬುವುದರೊಳಗೇ ಪತಿಯನ್ನು ಕಳೆದುಕೊಂಡ ನಿಖಿತಾ ಸುಮ್ಮನೇ ಅಳುತ್ತಾ ಕುಳಿತುಕೊಳ್ಳಲಿಲ್ಲ. ಹುತಾತ್ಮ ಪತಿಯ ಶವದ ಎದುರೇ ಅಂದು ಪಣತೊಟ್ಟುಬಿಟ್ಟರು. ನನ್ನ ಈ ಜೀವವನ್ನೂ ದೇಶಕ್ಕಾಗಿಯೇ ಮೀಸಲು ಇಡುವೆ ಎಂದು.
ಆಗಲೇ ಸೇನೆ ಸೇರುವ ಸಿದ್ಧತೆ ನಡೆಸಿದರು ನಿಖಿತಾ. ಇದರ ಫಲವಾಗಿ ಇದೀಗ ಅವರು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ‌ ಹುದ್ದೆ ಏರುತ್ತಿದ್ದಾರೆ. ಇದೇ 29ರಂದು ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಪತಿ ಹುತಾತ್ಮರಾಗಿ ಆರು ತಿಂಗಳಲ್ಲಿಯೇ ನಿಖಿತಾ ಶಾರ್ಟ್​ ಸರ್ವೀಸ್​ ಕಮಿಷನ್​ ಅರ್ಜಿ ಸಲ್ಲಿಸಿದ್ದರು. ಪರೀಕ್ಷೆಗಾಗಿ ಸಕಲ ಸಿದ್ಧತೆ ನಡೆಸಿ ಉತ್ತೀರ್ಣರಾದರು. ನಂತರ ಎಸ್​ಎಸ್​ಬಿ ಸಂದರ್ಶನದಲ್ಲೂ ತೇರ್ಗಡೆ ಹೊಂದಿದರು. ಇಷ್ಟೇ ಅಲ್ಲದೇ, ಚೆನ್ನೈನಲ್ಲಿ ತರಬೇತಿಯನ್ನೂ ಪಡೆದರು. ಇವೆಲ್ಲಾ ಆದ ಮೇಲೆ ಇದೀಗ ಲೆಫ್ಟಿನೆಂಟ್​ ಹುದ್ದೆ ಅಲಂಕರಿಸಲಿದ್ದಾರೆ. ಪುಲ್ವಾಮಾ ದಾಳಿಯ ನಂತರ ಹುತಾತ್ಮರಾದ ವಿಭೂತಿ ಶಂಕರ್‌ ಅವರ ಮೃತದೇಹ ಮನೆ ತಲುಪಿದಾಗ ಅಲ್ಲಿನ ದೃಶ್ಯ ಹೇಗಿತ್ತು ಎಂಬುದನ್ನು ಅವರ ಸ್ನೇಹಿತರೊಬ್ಬರು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು