News Karnataka Kannada
Wednesday, April 24 2024
Cricket
ವಿದೇಶ

ಪಶ್ಚಿಮ ಬಂಗಾಳ ಚುನಾವಣೆ: ವಿಪಕ್ಷಗಳ ಚಿಂತೆಗೆ ಕಾರಣವಾದ ಬಿಜೆಪಿ ಪ್ರಾಬಲ್ಯ

Photo Credit :

 ಪಶ್ಚಿಮ ಬಂಗಾಳ   ಚುನಾವಣೆ: ವಿಪಕ್ಷಗಳ  ಚಿಂತೆಗೆ ಕಾರಣವಾದ ಬಿಜೆಪಿ ಪ್ರಾಬಲ್ಯ

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಎಂಟನೇ ಹಂತದಲ್ಲಿ ಗುರುವಾರ ಮತದಾನ ನಡೆಯಲಿರುವ 35 ವಿಧಾನಸಭಾ ಕ್ಷೇತ್ರಗಳಲ್ಲಿ, ಬಿಜೆಪಿಯ ಮತಪಾಲು ಮೂರು ಪಟ್ಟು ಹೆಚ್ಚಾಗಿರುವುದು ಟಿಎಂಸಿ ಹಾಗೂ ಎಡಪಕ್ಷ– ಕಾಂಗ್ರೆಸ್‌ ಮೈತ್ರಿಕೂಟಕ್ಕೆ ಸವಾಲಾಗಿದೆ.2016ರ ಚುನಾವಣೆಯಲ್ಲಿ ಈ 35 ಕ್ಷೇತ್ರಗಳಲ್ಲಿ ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಗೆದ್ದಿತ್ತು. 2019ರ ಲೋಕಸಭಾ ಚುನಾ ವಣೆಯ ಸಂದರ್ಭದಲ್ಲಿ ಇಲ್ಲಿ ಬಿಜೆಪಿಯ ಮತಪಾಲು ಶೇ 11.48 ರಿಂದ ಶೇ 30.77ಕ್ಕೆ ಹೆಚ್ಚಿದೆ.
ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಈ 35 ಕ್ಷೇತ್ರಗಳ ಪೈಕಿ 17ರಲ್ಲಿ ಕಳೆದ ಬಾರಿ ಟಿಎಂಸಿ ಗೆದ್ದಿತ್ತು. ಕಾಂಗ್ರೆಸ್‌ 13 ಹಾಗೂ ಮೂರು ಕ್ಷೇತ್ರಗಳನ್ನು ಎಡ ಪಕ್ಷಗಳು ಗೆದ್ದಿದ್ದವು.ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್–ಎಡಪಕ್ಷ ಬೆಂಬಲಿತ ಪಕ್ಷೇತರ ಅಭ್ಯರ್ಥಿಯೊಬ್ಬರು ಗೆದ್ದಿದ್ದರು. ಕಳೆದ ಲೋಕಸಭಾ ಚುನಾವ ಣೆಯಲ್ಲಿ ಬಿಜೆಪಿಯು 11, ಟಿಎಂಸಿ 19 ಹಾಗೂ ಕಾಂಗ್ರೆಸ್‌ 5 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದವು. ಆದರೆ ಆ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಎಡಪಕ್ಷಗಳ ಮೈತ್ರಿ ಇರಲಿಲ್ಲ. ಎಡಪಕ್ಷಗಳು ಶೇ 5.15ರಷ್ಟು ಹಾಗೂ ಕಾಂಗ್ರೆಸ್‌ ಶೇ 19.45ರಷ್ಟು ಮತಗಳನ್ನು ಪಡೆದಿದ್ದವು.2016ರ ವಿಧಾನಸಭಾ ಚುನಾವಣೆ ಯಲ್ಲಿ ಮಾಲ್ಡಾ ಜಿಲ್ಲೆಯ ಆರರಲ್ಲಿ ನಾಲ್ಕು ಸ್ಥಾನಗಳನ್ನು ಕಾಂಗ್ರೆಸ್‌, ಒಂದು ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಇನ್ನೊಂದರಲ್ಲಿ ಪಕ್ಷೇತರ ಅಭ್ಯರ್ಥಿ ಗೆದ್ದಿದ್ದರು. ಟಿಎಂಸಿ ಇಲ್ಲಿ ಶೂನ್ಯ ಸಾಧನೆ ಮಾಡಿತ್ತು.ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ನಾಲ್ಕರಲ್ಲಿ ಹಾಗೂ ಕಾಂಗ್ರೆಸ್‌ ಎರಡು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದವು.
2016ರಲ್ಲಿ, ಟಿಎಂಸಿಯ ಭದ್ರಕೋಟೆ ಎಂದು ಭಾವಿಸಲಾಗಿರುವ ಬಿರ್‌ಭೂಮ್‌ ಜಿಲ್ಲೆಯ 11 ಕ್ಷೇತ್ರಗಳಲ್ಲಿ 9ರಲ್ಲಿ ಟಿಎಂಸಿ ಗೆಲುವು ಪಡೆದಿತ್ತು. ಕಾಂಗ್ರೆಸ್‌ ಹಾಗೂ ಸಿಪಿಎಂ ತಲಾ ಒಂದು ಕ್ಷೇತ್ರ ಗೆದ್ದಿದ್ದವು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಐದರಲ್ಲಿ ಹಾಗೂ ಟಿಎಂಸಿ 6 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದವು.ಹಿಂದಿನ ವಿಧಾನಸಭಾ ಚುನಾವ ಣೆಯಲ್ಲಿ ಕೋಲ್ಕತ್ತದ ಎಲ್ಲಾ 7 ಕ್ಷೇತ್ರಗಳಲ್ಲಿ ಟಿಎಂಸಿ ಗೆಲುವು ದಾಖಲಿಸಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಇವುಗಳಲ್ಲಿ 2 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಲು ಬಿಜೆಪಿಗೆ ಸಾಧ್ಯವಾಗಿತ್ತು.
ಉಳಿದ ಐದು ಕ್ಷೇತ್ರಗಳಲ್ಲಿ ಟಿಎಂಸಿ ತನ್ನ ಪ್ರಾಬಲ್ಯ ಉಳಿಸಿಕೊಂಡಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು