News Karnataka Kannada
Saturday, April 13 2024
Cricket
ವಿದೇಶ

ಪರಮ್ ವೀರ್ ಸಿಂಗ್ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ಗವಾಯಿ

Photo Credit :

ಪರಮ್ ವೀರ್ ಸಿಂಗ್ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ಗವಾಯಿ

ನವದೆಹಲಿ: ತಮ್ಮ ವಿರುದ್ಧದ ಎಲ್ಲ ವಿಚಾರಣೆಗಳನ್ನು ಮಹಾರಾಷ್ಟ್ರದ ಹೊರಗಡೆಯ ಸ್ವತಂತ್ರ ಸಂಸ್ಥೆಯೊಂದಕ್ಕೆ ವರ್ಗಾಯಿಸಬೇಕು ಎಂದು ಕೋರಿ ಮುಂಬೈನ ಮಾಜಿ ಪೊಲೀಸ್‌ ಕಮಿಷನರ್‌ ಪರಮ್ ವೀರ್‌ ಸಿಂಗ್‌ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯಿಂದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಮಂಗಳವಾರ ಹಿಂದೆ ಸರಿದರು.

ಪರಮ್‌ವೀರ್‌ ಸಿಂಗ್‌ ಅವರ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ವಿನೀತ್‌ ಸರನ್‌ ಹಾಗೂ ಬಿ.ಆರ್‌.ಗವಾಯಿ ಅವರಿರುವ ರಜಾಕಾಲದ ನ್ಯಾಯಪೀಠ ನಡೆಸಬೇಕಿತ್ತು. ನ್ಯಾಯಮೂರ್ತಿ ಸರನ್‌ ಅವರು, ‘ಈ ಅರ್ಜಿಯ ವಿಚಾರಣೆ ನಡೆಸಲು ನ್ಯಾಯಮೂರ್ತಿ ಗವಾಯಿ ಅವರಿಗೆ ಕೆಲವು ಅಡಚಣೆಗಳಿವೆ. ಬೇರೆ ಪೀಠದ ಮುಂದೆ ಈ ಅರ್ಜಿಯನ್ನು ಮಂಡಿಸಿ ಎಂದಷ್ಟೇ ನಾವು ಹೇಳಬಲ್ಲೆವು’ ಎಂದು ಹೇಳಿದರು.

ನ್ಯಾಯಮೂರ್ತಿ ಗವಾಯಿ ಅವರೂ ಮಾತನಾಡಿ, ‘ನಾನು ಈ ಅರ್ಜಿಯ ವಿಚಾರಣೆ ಮಾಡುವುದಿಲ್ಲ. ನಾವಿಬ್ಬರೂ ಸದಸ್ಯರಾಗಿರದ ಬೇರೆ ಪೀಠಕ್ಕೆ ಈ ಅರ್ಜಿಯನ್ನು ಸಲ್ಲಿಸಿ ‘ ಎಂದು ಹೇಳಿದರು.

ಪರಮ್‌ವೀರ್‌ ಸಿಂಗ್‌ ಅವರು ತಾವು ಮುಂಬೈ ಪೊಲೀಸ್‌ ಕಮಿಷನರ್‌ ಆಗಿದ್ದ ವೇಳೆ, ಗೃಹ ಸಚಿವರಾಗಿದ್ದ ಅನಿಲ್‌ ದೇಶಮುಖ್‌ ಅವರು ಹಣ ವಸೂಲಿಗೆ ಸೂಚಿಸಿದ್ದರು ಹಾಗೂ ಭ್ರಷ್ಟಾಚಾರ ಎಸಗಿದ್ದರು ಎಂದು ಆರೋಪ ಮಾಡಿದ್ದರು. ನಂತರ ಮಾರ್ಚ್‌ 17ರಂದು ಸಿಂಗ್‌ ಅವರನ್ನು ಕಮಿಷನರ್‌ ಹುದ್ದೆಯಿಂದ ತೆಗೆದು ಹಾಕಿದ್ದ ಮಹಾರಾಷ್ಟ್ರ ಸರ್ಕಾರ, ಅವರನ್ನು ಗೃಹರಕ್ಷಕ ದಳದ ಜನರಲ್‌ ಕಮಾಂಡರ್‌ ಹುದ್ದೆಗೆ ವರ್ಗಾಯಿಸಿತ್ತು.

ಅನಿಲ್‌ ದೇಶಮುಖ್‌ ವಿರುದ್ಧ ಸಿಂಗ್‌ ಮಾಡಿದ ಆರೋಪಗಳ ಕುರಿತು ಸಿಬಿಐ ತನಿಖೆ ನಡೆಸುವಂತೆ ಬಾಂಬೆ ಹೈಕೋರ್ಟ್‌ ಆದೇಶಿಸಿದ ಕಾರಣ, ದೇಶಮುಖ್‌ ಅವರು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು