News Karnataka Kannada
Saturday, April 20 2024
Cricket
ವಿದೇಶ

ನ್ಯೂಕ್ಲಿಯರ್ ಗಿಂತಲೂ ಕೋರೋನಾ ದಾಳಿ ಭೀಕರ; ಆನಂದ್ ಮಹೀಂದ್ರಾ

Photo Credit :

ನ್ಯೂಕ್ಲಿಯರ್ ಗಿಂತಲೂ ಕೋರೋನಾ ದಾಳಿ ಭೀಕರ; ಆನಂದ್ ಮಹೀಂದ್ರಾ

ನವದೆಹಲಿ: ಕೊರೋನಾ ಚೀನಾ ಸೃಷ್ಟಿಸಿದ ವೈರಸ್ ಅನ್ನೋದಕ್ಕೆ ಹಲವು ದಾಖಲೆಗಳಿವೆ. ಆದರೆ ವುಹಾನ್ ಲ್ಯಾಬ್‌ನಿಂದ ವೈರಸ್ ವಿಶ್ವಕ್ಕೆ ಹರಡಿದೆ ಎಂದು ಖಚಿತವಾಗಿ ಹೇಳಲು ತನಿಖೆಗಳು ಪ್ರಗತಿಯಲ್ಲಿದೆ.

ಇದು ಚೀನಾ ಕುತಂತ್ರ ಎಂದು ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಈಗಾಗಲೇ ಆರೋಪಿಸಿದೆ. ಇದೀಗ ಮತ್ತೆ ವೈರಸ್ ಹಿಂದೆ ಚೀನಾ ಕೈವಾಡ ಮತ್ತೆ ಚರ್ಚೆಯಾಗುತ್ತಿದೆ. ಈ ಚರ್ಚೆ ಬೆನ್ನಲ್ಲೇ ಉದ್ಯಮಿ ಆನಂದ್ ಮಹೀಂದ್ರ ಹೇಳಿಕೆ ವಿಶ್ವವನ್ನೇ ಹೊಸದಿಕ್ಕಿನಲ್ಲಿ ಚಿಂತಿಸುವಂತೆ ಮಾಡಿದೆ.

ಕೊರೋನಾ ವೈರಸ್ ಹುಟ್ಟಿನ ಹಿಂದಿನ ಸತ್ಯ ನಾವು ಎಂದಿಗೂ ತಿಳಿದುಕೊಳ್ಳದೇ ಇರಬಹುದು. ಆದರೆ ಜೈವಿಕ ಶಸ್ತ್ರಾಸ್ತ್ರ ಬಳಸಿ ನ್ಯೂಕ್ಲೀಯರ್ ದಾಳಿಗಿಂತ ಬಹುದೊಡ್ಡ ಅನಾಹುತವನ್ನು ಕೊರೋನಾ ಸೃಷ್ಟಿಸಿದೆ.

ಹೀಗಾಗಿ ಪರಮಾಣು ಬಳಕೆಗೆ ಹಲವು ನಿರ್ಬಂಧ ಹಾಗೂ ಒಪ್ಪಂದ ಇರುವಂತೆ ಜಗತ್ತಿಗೆ ಈಗ ಜೈವಿಕ ಶಸ್ತ್ರಾಸ್ತ್ರಗಳು ಮತ್ತು ಅಪಾಯಕಾರಿ ಸಂಶೋಧನಾ ಪ್ರಸರಣ ನಿರ್ಬಂಧ ಒಪ್ಪಂದದ ಅಗತ್ಯವಿದೆ ಎಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು