News Karnataka Kannada
Thursday, April 18 2024
Cricket
ವಿದೇಶ

ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಚಹಾ ವ್ಯಾಪಾರಿಗೆ 18 ತಿಂಗಳು ಜೈಲು ಶಿಕ್ಷೆ

Photo Credit :

ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಚಹಾ ವ್ಯಾಪಾರಿಗೆ 18 ತಿಂಗಳು ಜೈಲು ಶಿಕ್ಷೆ

ಅಹಮದಾಬಾದ್: 2012 ರಲ್ಲಿ ಹೈಕೋರ್ಟ್ ನ್ಯಾಯಾಧೀಶರೊಬ್ಬರತ್ತ ಚಪ್ಪಲಿ ಎಸೆದಿದ್ದ ಗುಜರಾತ್‌ನ ರಾಜ್‌ಕೋಟ್ ಜಿಲ್ಲೆಯ ಚಹಾ ಮಾರಾಟಗಾರನಿಗೆ 18 ತಿಂಗಳ ಜೈಲು ಶಿಕ್ಷೆ ಆಗಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್ ಈ ಶಿಕ್ಷೆ ವಿಧಿಸಿದೆ.

ಮಿರ್ಜಾಪುರ ಗ್ರಾಮೀಣ ನ್ಯಾಯಾಲಯದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ವಿ ಎ ಧಧಲ್ ಗುರುವಾರ ಐಪಿಸಿ ಸೆಕ್ಷನ್ 353 (ಸರ್ಕಾರಿ ನೌಕರನ ಮೇಲೆ ಕರ್ತವ್ಯ ನಿರ್ವಹಿಸದಂತೆ ತಡೆಯಲು ಹಲ್ಲೆ) ಅಡಿಯಲ್ಲಿ ಆರೋಪಕ್ಕೆ ಭವಾನಿ ದಾಸ್ ಬಾವಾಜಿಯನ್ನು ತಪ್ಪಿತಸ್ಥರೆಂದು ಪರಿಗಣಿಸಿ ಶಿಕ್ಷೆ ವಿಧಿಸಿದ್ದಾರೆ.

ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ, ಬಾವಾಜಿ ತಮ್ಮ ಪ್ರಕರಣ ದೀರ್ಘಾವಧಿಯಿಂದ ಇತ್ಯರ್ಥವಾಗದೆ ಇರುವ ಬಗ್ಗೆ ಹತಾಶೆಗೊಂಡು ನ್ಯಾಯಾಧೀಶರತ್ತ ತನ್ನ ಚಪ್ಪಲಿ ಎಸೆದಿದ್ದೆ ಎಂದು ಹೇಳೊಕೊಂಡಿದ್ದನು.

ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆಯುವ ಕ್ರಿಯೆ “ಅತ್ಯಂತ ಖಂಡನೀಯ” ಎಂದು ಗಮನಿಸಿದ ಮ್ಯಾಜಿಸ್ಟ್ರೇಟ್ ಬಾವಾಜಿಗೆ ಉತ್ತಮ ನಡವಳಿಕೆಗಾಗಿ ತಿದ್ದಿಕೊಳ್ಳಲು ಅವಕಾಶ ನೀಡಲು ನಿರಾಕರಿಸಿದರು.

ರಾಜ್‌ಕೋಟ್‌ನ ಭಯವದರ್ ಪಟ್ಟಣದ ನಿವಾಸಿ ಬಾವಾಜಿಗೆ 18 ತಿಂಗಳ ಸರಳ ಜೈಲು ಶಿಕ್ಷೆಯನ್ನು ಮ್ಯಾಜಿಸ್ಟ್ರೇಟ್ ವಿಧಿಸಿದ್ದು, ಅವನ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ಆತನ ಮೇಲೆ ಯಾವುದೇ ದಂಡ ವಿಧಿಸಿಲ್ಲ.

ಪ್ರಕರಣದ ವಿವರದಂತೆ ಆರೋಪಿ 2012 ರ ಏಪ್ರಿಲ್ 11 ರಂದು ವಿಚಾರಣೆಯ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ಕೆ ಎಸ್. ಝವೇರಿ ಅವರತ್ತ ತನ್ನ ಚಪ್ಪಲಿ ಎಸೆದಿದ್ದ. ಅದೃಷ್ಟವಶಾತ್, ನ್ಯಾಯಮೂರ್ತಿಗಳಿಗೆ ಆ ಚಪ್ಪಲಿ ತಾಕಲಿಲ್ಲ. ನ್ಯಾಯಾಧೀಶರು ಈ ಕೃತ್ಯದ ಕಾರಣವನ್ನು ಕೇಳಿದಾಗ, ಬಾವಾಜಿ ಹತಾಶೆಯಿಂದ ಇದನ್ನು ಮಾಡಿದ್ದಾಗಿ ಹೇಳಿದ್ದಾನೆ. ಏಕೆಂದರೆ ಅವನ ಪ್ರಕರಣವು ಬಹಳ ಹಿಂದಿನಿಂದಲೂ ವಿಚಾರಣೆಗೆ ಬರಲಿಲ್ಲ. ನಂತರ ಬಾವಾಜಿಯನ್ನು ಸೋಲಾ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು, ಅಲ್ಲಿ ಪಿಸಿಯ ಸೆಕ್ಷನ್ 186 ಮತ್ತು 353 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ಬಾವಾಜಿ ಭಯವದರ್‌ನಲ್ಲಿ ರಸ್ತೆ ಬದಿಯ ಚಹಾ ಅಂಗಡಿಯೊಂದನ್ನು ನಡೆಸುತ್ತಿದ್ದು ಭಯವದರ್ ಪುರಸಭೆಯು ಸ್ಟಾಲ್ ಅನ್ನು ಅಲ್ಲಿಂದ ತೆರವುಗೊಳಿಸುವಂತೆ ಕೇಳಲು ಬಾವಾಜಿ ಗೊಂಡಾಲ್ ಸೆಷನ್ಸ್ ನ್ಯಾಯಾಲಯದಿಂದ ನಾಗರಿಕ ಸಂಸ್ಥೆಯ ವಿರುದ್ಧ ತಡೆ ಆದೇಶವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು, ಅದರ ನಂತರ ಪುರಸಭೆಯು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತು. ಆ ಮನವಿಯ ಆಧಾರದ ಮೇಲೆ ಪುರಸಭೆಯು ತನ್ನ ಚಹಾ ಅಂಗಡಿಯನ್ನು ತೆಗೆದುಹಾಕಿ, ಅವನನ್ನು ನಿರುದ್ಯೋಗಿಯನ್ನಾಗಿ ಮಾಡಿದೆ ಎಂದು ಬಾವಾಜಿ ಹೇಳಿಕೆಯಲ್ಲಿ ಹೇಳಿಕೊಂಡಿದ್ದಾನೆ.

ಯಾವುದೇ ಆದಾಯದ ಮೂಲವಿಲ್ಲದೆ, ವಿಚಾರಣೆಗೆ ಹಾಜರಾಗಲು ಅಹಮದಾಬಾದ್ ಗೆ ಪ್ರಯಾಣಿಸಲು ಇತರರಿಂದ ಸಾಲ ಅಥವಾ ಭಿಕ್ಷೆ ಬೇಡಬೇಕಾಗಿರುವುದರಿಂದ ಆರೋಪಿ ತನ್ನ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದೆನೆಂದು ಹೇಳಿದ್ದಾನೆ. ಬಾವಾಜಿ ತಮ್ಮ ಪ್ರಕರಣವನ್ನು ದೀರ್ಘಕಾಲದವರೆಗೆ ವಿಚಾರಣೆಗೆ ಒಳಪಡಿಸದ ಕಾರಣ ಮತ್ತು ಅವರು “ಹೈಕೋರ್ಟ್‌ಗೆ ಬರಲು ಕಷ್ಟವಾಗಿದ್ದರಿಂದ” ಅವನು ಹತಾಶೆಯಿಂದ ಚಪ್ಪಲಿ ಎಸೆದಿದ್ದಾನೆ.

ನ್ಯಾಯಾಧೀಶರು ತಮ್ಮ ಆದೇಶದಲ್ಲಿ, ಪ್ರಕರಣಗಳು ಬಾಕಿ ಇರುವುದರಿಂದ ಸಮಯಕ್ಕೆ ಸರಿಯಾಗಿ ವಿಲೇವಾರಿ ಆಗುತ್ತಿಲ್ಲ ಎಂಬ ಅಂಶವಿದ್ದರೂ, ಅದು ಹೈಕೋರ್ಟ್ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆಯಲು ಒಂದು ಕಾರಣವಲ್ಲ ಎಂದು ಅಭಿಪ್ರಾಯಪಟ್ಟರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು