News Karnataka Kannada
Thursday, April 18 2024
Cricket
ವಿದೇಶ

ನೀರಿಗೆ ಜಿಗಿದು ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ

Photo Credit :

ನೀರಿಗೆ ಜಿಗಿದು ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ

ವಿಜಯವಾಡ: ದಂಪತಿ ಮತ್ತು ಮಕ್ಕಳಿಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ಆಂಧ್ರ ಪ್ರದೇಶದ ಕಡಪ ಜಿಲ್ಲೆಯ ಬಿ. ಕುಡೂರು ವಲಯದಲ್ಲಿ ಬರುವ ಸಗಿಲೇರು ಜಲಾಶಯದಲ್ಲಿ ನಡೆದಿದೆ.
ಶುಕ್ರವಾರ ಬೆಳಗ್ಗೆ ಮೃತದೇಹಗಳು ಪತ್ತೆಯಾಗಿವೆ. ಹತ್ತಿರದ ಗ್ರಾಮಸ್ಥರು ಜಲಾಶಯದಲ್ಲಿ ಶವಗಳು ತೇಲುತ್ತಿದ್ದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ ಮೇಲೆ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ಸಹಾಯದಿಂದ ಮೃತದೇಹಗಳನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗಾಗಿ ಪೊರುಮಾಮಿಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಘಟನೆಯ ಬಳಿಕ ಮೃತರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅವರನ್ನು ಬಳ್ಳಾರಿ ರಾಮಕೃಷ್ಣ (43), ಪತ್ನಿ ಅನುಷಾ (35) ಮತ್ತು ಮಕ್ಕಳಾದ ನಿಖಿಲ್​ (4) ಹಾಗೂ ಕಲ್ಯಾಣ್​ (4 ತಿಂಗಳು) ಎಂದು ಗುರುತಿಸಲಾಗಿದೆ. ಮೃತರು ಪೊರುಮಾಮಿಲಾದ ಶ್ರೀರಾಮನಗರ ಕಾಲನಿಯ ನಿವಾಸಿಗಳು. ರಾಮಕೃಷ್ಣ, ಪಾಲಕರನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದಾಗ ಕೆಲ ಮಹತ್ವದ ಮಾಹಿತಿಗಳು ಬಯಲಾಗಿವೆ.ಗುರುವಾರ ಮಧ್ಯಾಹ್ನ ರಾಮಕೃಷ್ಣ ಮತ್ತು ಅನುಷಾ ಮಕ್ಕಳನ್ನು ಕರೆದುಕೊಂಡು ಮನೆ ಬಿಟ್ಟರು ಎಂದು ರಾಮಕೃಷ್ಣ ತಂದೆ ಹೇಳಿಕೆ ನೀಡಿದ್ದಾರೆ. ಅದಾದ ಬಳಿಕ ಅವರ ಬಗ್ಗೆ ಯಾವುದೇ ಮಾಹಿತಿ ದೊರಕಲಿಲ್ಲ. ಫೋಟೋ ನೋಡಿದ ಮೇಲೆಯೇ ಅವರ ಬಗ್ಗೆ ಗೊತ್ತಾಗಿದ್ದು ಎಂದು ತಿಳಿಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ ರಾಮಕೃಷ್ಣ ಫೈನಾನ್ಸ್​ ವ್ಯವಹಾರ ನಡೆಸುತ್ತಿದ್ದರು. ಅತ್ಯಧಿಕ ಸಾಲವಾಗಿದ್ದರಿಂದ ಹೆದರಿ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು