News Karnataka Kannada
Tuesday, April 23 2024
Cricket
ವಿದೇಶ

ನಿಮಿಷಗಳಲ್ಲಿ ಸೋಂಕು ಪತ್ತೆ; ಇಸ್ರೇಲ್​​ನಿಂದ ತಜ್ಞರನ್ನು ಕರೆಸಿಕೊಳ್ಳಲು ರಿಲಯನ್ಸ್​​ಗೆ ಅನುಮತಿ

Photo Credit :

ನಿಮಿಷಗಳಲ್ಲಿ ಸೋಂಕು ಪತ್ತೆ; ಇಸ್ರೇಲ್​​ನಿಂದ ತಜ್ಞರನ್ನು ಕರೆಸಿಕೊಳ್ಳಲು ರಿಲಯನ್ಸ್​​ಗೆ ಅನುಮತಿ

ನವದೆಹಲಿ: ಭಾರತ ಕೊರೋನಾ 2ನೇ ಅಲೆಯ ಭೀಕರತೆಯಿಂದ ಬಚಾವ್​ ಆಗಲು ಹಗಲಿರುಳು ಶ್ರಮಿಸುತ್ತಿದೆ. ದೇಶಕ್ಕೆ ಹಿಂದೆಂದಿಗಿಂತಲೂ ಈಗ ನೆರವಿನ ಅಗತ್ಯವಿರುವುದನ್ನು ಮನಗಂಡಿರುವ ಭಾರತದ ದೈತ್ಯ ಸಂಸ್ಥೆಗಳು ನೆರವಿಗೆ ಮುಂದಾಗಿವೆ. ರಿಲಯನ್ಸ್​ ಸಂಸ್ಥೆ ಕೂಡ ಕೊರೋನಾ ವಿರುದ್ಧದ ಯುದ್ಧದಲ್ಲಿ ಪ್ರಮುಖ ಪಾತ್ರವಹಿಸಿದೆ. ಈಗಾಗಲೇ ಲಸಿಕೆ ಅಭಿಯಾನ, ಕೋವಿಡ್​ ಕೇರ್​ ಸೆಂಟರ್​ ನಿರ್ಮಿಸಿರುವ ರಿಲಯನ್ಸ್​ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ದೇಶಕ್ಕೆ ನೆರವಾಗುತ್ತಿದೆ. ಕೆಲವೇ ನಿಮಿಷಗಳಲ್ಲಿ ಸೋಂಕನ್ನು ಪತ್ತೆ ಹಚ್ಚುವ ಬ್ರೀತ್​ ಆಫ್​ ಹೆಲ್ತ್​​ (BHO) ತಂತ್ರಜ್ಞಾನವನ್ನು ಭಾರತಕ್ಕೆ ಪರಿಚಯಿಸಲು ಮುಂದಾಗಿದೆ.
ಇದಕ್ಕಾಗಿ ಇಸ್ರೇಲ್​​ನಿಂದ ತಜ್ಞರ ತಂಡವನ್ನು ಭಾರತಕ್ಕೆ ಕರೆ ತರಲು ಅನುಮತಿಯನ್ನು ಪಡೆದುಕೊಂಡಿದೆ. ಭಾರತದಲ್ಲಿ ಕೋವಿಡ್​ ಪರಿಸ್ಥಿತಿ ತೀವ್ರಗೊಂಡಿರುವ ಹಿನ್ನೆಲೆ ವಿಶ್ಚದ ಹಲವು ರಾಷ್ಟ್ರಗಳು ತನ್ನ ನಾಗರಿಕರಿಗೆ ಭಾರತಕ್ಕೆ ತೆರಳದಂತೆ ನಿರ್ಬಂಧವೇರಿದೆ. ಇದರಾಚೆಗೂ ಇಸ್ರೇಲ್​ ತಂಡವನ್ನು ಭಾರತಕ್ಕೆ ಕರೆ ತರುವಲ್ಲಿ ರಿಲಯನ್ಸ್​ ಸಂಸ್ಥೆ ಯಶಸ್ವಿಯಾಗಿದೆ. ಹೀಗಾಗಲೇ BHOಗೆ ಬೇಕಾದ ಉಪಕರಣಗಳು ಭಾರತವನ್ನು ತಲುಪಿದೆ. ತಜ್ಞರ ತಂಡವೂ ಭಾರತಕ್ಕೆ ವಿಶೇಷ ನಿಯಮದಡಿ ಆಗಮಿಸಲಿದೆ.
ಇಸ್ರೇಲ್​ನ ​ಸಂಸ್ಥೆಯೂ ಈ ತಂತ್ರಜ್ಞಾನವನ್ನು ಭಾರತಕ್ಕೆ ನೀಡುತ್ತಿದೆ. ಈ ಬಗ್ಗೆ ಇಸ್ರೇಲ್​ನ ಆರೋಗ್ಯ ಸಚಿವರು ಕಂಪನಿಗೆ ಖುದ್ದು ಭೇಟಿ ನೀಡಿ ಭಾರತಕ್ಕೆ ಬರಲಿರುವ ಯಂತ್ರೋಪಕರಣಗಳನ್ನು ಪರಿಶೀಲಿಸಿದ್ದಾರೆ. ಇನ್ನು BHO ತಂತ್ರಜ್ಞಾನದಿಂದ ಆರಂಭಿಕ ಹಂತದಲ್ಲೇ ದೇಹದಲ್ಲಿ ಕೊರೋನಾ ವೈರಸ್​ ಇರುವುದನ್ನು ಪತ್ತೆ ಹಚ್ಚಬಹುದು. ಇದರಿಂದ ಸೋಂಕು ಹರಡುವಿಕೆಯನ್ನು ಅತ್ಯಂತ ತ್ವರಿತವಾಗಿ ತಡೆಬಹುದಾಗಿದೆ. ಕೋವಿಡ್​ ರಿಪೋರ್ಟ್​​ಗಾಗಿ ದಿನಗಟ್ಟಲೇ ಕಾಯುವ ಬದಲು ಕೆಲವೇ ನಿಮಿಷಗಳನ್ನು ರಿಪೋರ್ಟ್​​ ಸಿಗಲಿದೆ. ಹೀಗಾಗಲೇ ಇಸ್ರೇಲ್​ನಲ್ಲಿ ಈ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಲಾಗುತ್ತಿದೆ. ರಿಲಯನ್ಸ್​ ಸೇರಿದಂತೆ ಭಾರತದ ದೊಡ್ಡ ದೊಡ್ಡ ಉದ್ಯಮಗಳು ಈ ತಂತ್ರಜ್ಞಾನವನ್ನು ಖರೀದಿಸಲಿದ್ದಾರೆ.ಇಸ್ರೇಲ್​ನಿಂದ ಆಗಮಿಸುತ್ತಿರುವ ತಂಡ ಇಲ್ಲಿನವರಿಗೆ ತಂತ್ರಜ್ಞಾನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದಾರೆ. ಹೇಗೆ ಬಳಸಬೇಕೆಂದು ತರಬೇತಿ ನೀಡಲಿದ್ದಾರೆ. ಇದರಿಂದ ಕೊರೋನಾ ಸ್ಫೋಟವನ್ನು ತಡೆಗಟ್ಟುವಲ್ಲಿ ಭಾರತಕ್ಕೆ ನೆರವಾಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು