News Karnataka Kannada
Wednesday, April 24 2024
Cricket
ವಿದೇಶ

ನಾನು ಸಚಿವ ಸಂಪುಟದ ಆಕಾಂಕ್ಷಿ ;ಅಪ್ಪಚ್ಚು ರಂಜನ್

Photo Credit :

ನಾನು ಸಚಿವ ಸಂಪುಟದ ಆಕಾಂಕ್ಷಿ ;ಅಪ್ಪಚ್ಚು ರಂಜನ್

ಮಡಿಕೇರಿ: ನಾಯಕತ್ವ ಬದಲಾವಣೆ ವಿಚಾರ ಚರ್ಚೆ ಆಗುತ್ತಿರುವ ಬೆನ್ನಲ್ಲೇ ಕೊಡಗಿನ ಶಾಸಕ ಅಪ್ಪಚ್ಚು ರಂಜನ್ ಸಿಎಂ ಬದಲಾದರೆ ಸಚಿವ ಸಂಪುಟ ಬದಲಾವಣೆ ಆಗಲೇಬೇಕಲ್ಲ. ನಾನು ಸಚಿವ ಸಂಪುಟದ ಆಕಾಂಕ್ಷಿ ಎಂದು ಹೇಳಿಕೆ ನೀಡಿದ್ದಾರೆ.
ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅಪ್ಪಚ್ಚು ರಂಜನ್ ಅವರು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಇಲ್ಲ. ನಾಯಕತ್ವ ಬದಲಾವಣೆ ಚರ್ಚೆಯಿಂದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಬೇಸರವಾಗಿದೆ. ಸಿಎಂ ಬದಲಾದರೆ ಸಚಿವ ಸಂಪುಟ ಬದಲಾಗಬೇಕಲ್ಲ. ಹಾಗಾದಲ್ಲಿ ನಾನು ಸಚಿವ ಸಂಪುಟದ ಆಕಾಂಕ್ಷಿ ಎಂದಿದ್ದಾರೆ. ಯಡಿಯೂರಪ್ಪ ಈಗಲೂ ನಮ್ಮ ನಾಯಕರೇ ಅದರೆ ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಗೊತ್ತಿಲ್ಲ. ಸಿಎಂ ಬದಲಾದರೆ ಮತ್ತೆ ಸಚಿವ ಸಂಪುಟ ವಿಸ್ತರಣೆ ಅಗುತ್ತದೆ. ವಿಸ್ತರಣೆ ಅದರೆ ನಾನು ಸಚಿವ ಆಕಾಂಕ್ಷಿನೇ ನಾನು ಐದು ಬಾರಿ ಶಾಸಕನಾಗಿ ಗೆದ್ದಿದ್ದೇನೆ ಎಂದು ಅಭಿಪ್ರಾಯ ಹಂಚಿಕೊಂಡರು.
ಯಡಿಯೂರಪ್ಪ ಅವರು ರಾಜೀನಾಮೆ ಕೊಡುತ್ತೇನೆ ಎಂದು ಹೇಳಿ ತಮ್ಮ ಮಗನಿಗೆ ಪಟ್ಟ ಕಟ್ಟಬೇಕೆಂದು ಹೇಳಿದ್ದು ಗೊತ್ತಿಲ್ಲ. ನಾನು ಮಾಧ್ಯಮದಲ್ಲಿ ನೋಡಿ ತಿಳಿದುಕೊಂಡಿದ್ದೇನೆ. ನಮ್ಮ ಪಕ್ಷದಲ್ಲಿ ಹೈಕಮಾಂಡ್ ಏನು ಸೂಚನೆ ಕೊಡುತ್ತದೋ ಅದು ಅಂತಿಮ. ಅವರ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ. ನಾನು 80ರ ದಶಕದಿಂದಲೂ ಬಿಜೆಪಿಯಲ್ಲಿ ಇದ್ದೇನೆ. ಈ ಹಿಂದಿನಿಂದಲೂ ಸಚಿವ ಆಕಾಂಕ್ಷಿಯಾಗಿದ್ದೇನೆ. ಸಿಎಂ ಬದಲಾದರೆ ಸಚಿವ ಸಂಪುಟ ಬದಲಾಗಬೇಕು ಹೀಗಾಗಿ ನನಗೆ ಸಚಿವ ಸ್ಥಾನ ಕೊಡಲೇ ಬೇಕು ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು