News Karnataka Kannada
Thursday, April 18 2024
Cricket
ವಿದೇಶ

ನವೆಂಬರ್ 1ರಿಂದ ಕಾಲೇಜುಗಳು ಪ್ರಾರಂಭ

Photo Credit :

ನವೆಂಬರ್ 1ರಿಂದ ಕಾಲೇಜುಗಳು ಪ್ರಾರಂಭ

ನವದೆಹಲಿ: ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಶೈಕ್ಷಣಿಕ ವರ್ಷದ ಕಾಲೇಜು ತರಗತಿ ನವಂಬರ್ 1ರಿಂದ ಪ್ರಾರಂಭವಾಗಲಿದೆ. ಈ ಸಂಬಂಧ ಯೂನಿವರ್ಸಿಟಿ ಗ್ರಾಟ್ಸ್ ಕಮಿಷನ್ ಮಾರ್ಗಸೂಚಿ ಪ್ರಕಟಿಸಿದೆ.

ಇದರ ಸೂಚನೆಯಂತೆ ಅಕ್ಟೋಬರ್ 31ರ ಒಳಗೆ ಪ್ರಥಮ ವರ್ಷದ ಪದವಿ ಮತ್ತು ಸ್ನಾತ್ತಕೋತ್ತರ ಪದವಿ ತರಗತಿಗಳ ದಾಖಲಾತಿ ಪೂರ್ಣಗೊಳ್ಳಲಿದೆ.

ನವೆಂಬರ್ 1ರಿಂದ ತರಗತಿಗಳು ಆರಂಭವಾಗಲಿದ್ದು, ಮೊದಲ ಸೆಮಿಸ್ಟರ್ ಪರೀಕ್ಷೆಗಳು ಮಾರ್ಚ್ 8 ರಿಂದ 23ರ ಒಳಗೆ ನಡೆಯಲಿದೆ. ಏಪ್ರಿಲ್ 5 ರಿಂದ ಎರಡನೇ ಸೆಮಿಸ್ಟರ್ ಪ್ರಾರಂಭವಾಲಿದ್ದು, ಪರೀಕ್ಷೆಗಳು ಅಗಸ್ಟ್ ನಲ್ಲಿ ನಡೆಯಲಿವೆ ಎಂದು ಯುಜಿಸಿ ತಿಳಿಸಿದೆ.

ಕೊರೊನಾ ಕಾರಣದಿಂದ ಹಣಕಾಸು ತೊಂದರೆ ಅನುಭವಿಸುತ್ತಿರುವ ಪಾಲಕರ ಅನುಕೂಲಕ್ಕಾಗಿ, ವಿದ್ಯಾರ್ಥಿಗಳ ದಾಖಲಾತಿ ರದ್ದು ಮಾಡಿದರೆ ಅಥವಾ ಬೇರೆ ಕಾಲೇಜು ಸೇರಲು ಬಯಸಿದರೆ, ಅವರು ಕಟ್ಟಿರುವ ಪೂರ್ಣಶುಲ್ಕವನ್ನು ಕಾಲೇಜು ಆಡಳಿತ ಮಂಡಳಿ ಹಿಂತಿರುಗಿಸಬೇಕು. ಈ ವಿನಾಯಿತ ನವೆಂಬರ್ 30ರ ವರೆಗೆ ಮಾತ್ರ ಲಭ್ಯ ಎಂದು ಮಾರ್ಗಸೂಚಿ ತಿಳಿಸಿದೆ. ಇದನ್ನು ಕೇಂದ್ರ ಶಿಕ್ಷಣ ಸಚಿವ ಡಾ. ರಮೇಶ್ ಪೋಖ್ರಿಯಾಲ್ ನಿಶಂಕ್ ಅವರು ಟ್ಟೀಟ್ ಮೂಲಕ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
196
Keerthana Bhat

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು