News Karnataka Kannada
Monday, April 15 2024
Cricket
ವಿದೇಶ

ದೈರ್ಯವಾಗಿರಿ, ನಮ್ಮ ಪ್ರಾರ್ಥನೆ ನಿಮ್ಮೊಂದಿಗಿದೆ ಎಂದು ಭಾರತಕ್ಕೆ ಸಂದೇಶ ನೀಡಿದ ಬಿಟಿಎಸ್

Photo Credit :

ದೈರ್ಯವಾಗಿರಿ, ನಮ್ಮ ಪ್ರಾರ್ಥನೆ ನಿಮ್ಮೊಂದಿಗಿದೆ ಎಂದು ಭಾರತಕ್ಕೆ ಸಂದೇಶ ನೀಡಿದ ಬಿಟಿಎಸ್

ನವದೆಹಲಿ : ‘ಲೆಟ್ಸ್​​ ನೆವರ್ ಲೂಸ್​ ಹೋಪ್’, ‘ಸ್ಟೇ ಸ್ಟ್ರಾಂಗ್​’ – ಎಂಬುದು ದಕ್ಷಿಣ ಕೊರಿಯಾದ ಪ್ರಖ್ಯಾತ ಮ್ಯೂಸಿಕ್ ಬ್ಯಾಂಡ್​ ‘ಬಿಟಿಎಸ್’​, ಭಾರತದಲ್ಲಿರುವ ತನ್ನ ‘ಆರ್ಮಿ’ಗೆ ಸಂದೇಶ ನೀಡಿದೆ.

ಕೊರೋನಾ ಸನ್ನಿವೇಶದಲ್ಲಿ ತಮ್ಮ ಭಾರತೀಯ ಅಭಿಮಾನಿಗಳಿಗೆ ಏನು ಸಂದೇಶ ಕೊಡುತ್ತೀರಿ ಎಂಬ ಪ್ರಶ್ನೆಗೆ ಬಿಟಿಎಸ್​​ ತಂಡದ ಸದಸ್ಯ ವಿ, ‘ನಮ್ಮ ಪ್ರಾರ್ಥನೆ ಭಾರತದೊಂದಿಗಿದೆ. ಧೈರ್ಯವಾಗಿರಿ ಆರ್ಮಿ. ನಾವು ಎಂದಿಗೂ ಭರವಸೆಯನ್ನು ಕಳೆದುಕೊಳ್ಳಬಾರದು’ ಎಂದು ಪ್ರತಿಕ್ರಿಯಿಸಿದ್ದಾರೆ.

ಜಗತ್ತಿನ ವಿವಿಧೆಡೆ ಮಕ್ಕಳು ಮತ್ತು ಯುವಜನರನ್ನೇ ಹೆಚ್ಚಾಗಿ ತಮ್ಮ ಅಭಿಮಾನಿಗಳಾಗಿ ಹೊಂದಿರುವ ಈ ಸಂಗೀತ ತಂಡ, ಇತ್ತೀಚೆಗಷ್ಟೆ ತಮ್ಮ ಎರಡನೇ ಆಂಗ್ಲಭಾಷೆಯ ಹಾಡು ‘ಬಟರ್​’ಅನ್ನು ಬಿಡುಗಡೆ ಮಾಡಿದೆ.

ಭಾರತದಲ್ಲಿ ಭಾರೀ ಫ್ಯಾನ್​ ಫಾಲೋಯಿಂಗ್ ಇರುವ ಈ ಏಳು ಯುವ ಸಂಗೀತಗಾರರ ತಂಡ, ಇನ್ನೂ ಭಾರತದ ಟೂರ್​ ಮಾಡುವುದು ಬಾಕಿ ಇದೆ.

ಬ್ಯಾಂಗ್​ಟನ್ ಸಾನ್ಯೋನ್​ಡಾನ್ (ಬುಲೆಟ್​ಪ್ರೂಫ್​ ಬಾಯ್ ಸ್ಕೌಟ್ಸ್​) ಎಂಬ ಕೊರಿಯನ್ ನಾಮಧೇಯ ಮತ್ತು ಬಿಯಾಂಡ್ ದ ಸೀನ್​ ಎಂಬ ಇಂಗ್ಲೀಷ್​ ಬ್ರ್ಯಾಂಡಿಂಗ್​ ಹೊಂದಿರುವ ಈ ತಂಡದ ಸದಸ್ಯರೆಂದರೆ ಆರ್​ಎಂ, ಜಿನ್, ಶುಗಾ, ಜೆ-ಹೋಪ್​, ಜಿಮಿನ್, ವಿ ಮತ್ತು ಜಂಗ್​ಕೂಕ್. ತಮ್ಮ ಅಭಿಮಾನಿಗಳನ್ನು ‘ಆರ್ಮಿ’ ಎಂಬ ವಿಶಿಷ್ಟ ಹೆಸರಿನಿಂದ ಕರೆಯುತ್ತದೆ, ಈ ತಂಡ.

ಕೊರಿಯನ್​ ಭಾಷೆಯಲ್ಲೇ ಹೆಚ್ಚು ಆಲ್ಬಮ್​ಗಳನ್ನು ಮಾಡಿರುವ ಈ ತಂಡ ತಮ್ಮ ಚೊಚ್ಚಲ ಇಂಗ್ಲೀಷ್​ ಗೀತೆ ಡೈನಮೈಟ್​ಅನ್ನು 2020 ರಲ್ಲಿ ಬಿಡುಗಡೆ ಮಾಡಿತ್ತು.

ಇದೀಗ ಎರಡನೆಯ ಡಿಸ್ಕೊ-ಪಾಪ್ ಇಂಗ್ಲೀಷ್​ ಗೀತೆಯಾಗಿ ಬಟರ್​ ಎಂಬ ಸಿಂಗಲ್​ಅನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಬಿಡುಗಡೆಯಾದ 24 ಗಂಟೆಗಳಲ್ಲೇ ಈ ಗೀತೆಗೆ ಯೂಟ್ಯೂಬ್​ನಲ್ಲಿ 113 ಮಿಲಿಯನ್​ಗೂ ಹೆಚ್ಚು ವೀಕ್ಷಣೆಗಳು ಲಭಿಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು