News Karnataka Kannada
Thursday, April 18 2024
Cricket
ವಿದೇಶ

ದೇಶೀಯ ವಿಮಾನಯಾನ ಇನ್ನು ಮುಂದೆ ದುಬಾರಿ!

Photo Credit :

ದೇಶೀಯ ವಿಮಾನಯಾನ ಇನ್ನು ಮುಂದೆ ದುಬಾರಿ!

ನವ ದೆಹಲಿ : ದೇಶೀಯ ವಿಮಾನಗಳ ಮೇಲಿನ ಕಡಿಮೆ ಅಂತರದ ಪ್ರಯಾಣ ದರದ ಮಿತಿಯನ್ನು ಶೇಕಡ 13 ರಿಂದ 16 ಕ್ಕೆ ಏರಿಸಲು ನಾಗರಿಕ ವಿಮಾನಯಾನ ಸಚಿವಾಲಯ ನಿರ್ಧರಿಸಿದೆ.

ದೇಶದೊಳಗಿನ ವಿಮಾನಯಾನ ದುಬಾರಿಯಾಗಲಿದೆ. ನೂತನ ನೀತಿ ಜೂನ್ 1 ರಿಂದ ಜಾರಿಗೆ ಬರಲಿರುವ ಕಾರಣ ವಿಮಾನಯಾನ ಸಚಿವಾಲಯ ಈ ನಿರ್ಧಾರಕ್ಕೆ ಬಂದಿದೆ.

40 ನಿಮಿಷಗಳಿಂತ ಕಡಿಮೆ ಅವಧಿ ಇರುವ ದೇಶದ ಒಳಗಿನ ವಿಮಾನಯಾನದ ವೆಚ್ಚ ದುಬಾರಿಯಾಗಲಿದ್ದು, 2,300 ರೂಪಾಯಿಗಳಿಂದ 2,600 ರೂಪಾಯಿಗಳಿಗೆ ಏರಿಸಲಾಗಿದೆ. ಈಗಿರುವ ದರದ ಶೇಕಡಾ 13 ರಷ್ಟು ಹೆಚ್ಚಾಗಿದೆ.

2,900 ರೂ ವೆಚ್ಚದಲ್ಲಿ 40 ನಿಮಿಷದಿಂದ ಒಂದು ಗಂಟೆಯ ನಡುವಿನ ವಿಮಾನಯಾನವನ್ನು 3,300 ರೂ.ಗೆ ಏರಿಸಲಾಗಿದೆ. ಇನ್ನು, 60 ರಿಂದ 90 ನಿಮಿಷಗಳ ನಡುವಿನ ವಿಮಾನಯಾನಕ್ಕೆ 4,000 ರೂ, 90 ರಿಂದ 120 ನಿಮಿಷಗಳ ವಿಮಾನಯಾನಕ್ಕೆ 4,700 ರೂ, 150 ರಿಂದ 180 ನಿಮಿಷಗಳ ವಿಮಾನ ಯಾನಕ್ಕೆ 6,100 ರೂ. ಹಾಗೂ 180 ರಿಂದ 210 ನಿಮಿಷಗಳ ವಿಮಾನಯಾನಕ್ಕೆ 7,400 ರೂ. ನಿಗದಿಪಡಿಸಲು ಸಚಿವಾಲಯ ನಿರ್ಧರಿಸಿದೆ.

ಈ ಬಗ್ಗೆ ಪ್ರತಿಕ್ರಿಯೆ ನಿಡಿದ ವಿಮಾನಯಾನ ಸಚಿವಾಲಯ, ಕೋವಿಡ್ ಸೋಂಕಿನ ಕಾರಣದಿಂದಾಗಿ ವಿಮಾನ ಮಾಡುವ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿರುವುದೇ ವಿಮಾನಯಾನ ದರದ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತಿಳಿಸಿದೆ.

‘ದೇಶಾದ್ಯಂತ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿನ ಹಠಾತ್ ಏರಿಕೆ, ಪ್ರಯಾಣಿಕರ ಸಂಖ್ಯೆ ಕುಸಿದಿರುವುದನ್ನು ಗಮನದಲ್ಲಿಟ್ಟುಕೊಂಡು, ಈಗಿರುವ ಶೇಕಡಾ .80 ರಷ್ಟು ಸಾಮರ್ಥ್ಯದ ಕ್ಯಾಪ್ ನನ್ನು ಶೇಕಡಾ 50 ರಷ್ಟು ಸಾಮರ್ಥ್ಯ ಎಂದು ಪರಿಗಣಿಸಬಹುದು’ ಎಂದು ಸಚಿವಾಲಯದ ಆದೇಶ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು