News Karnataka Kannada
Thursday, April 18 2024
Cricket
ವಿದೇಶ

ದೇಶದಲ್ಲಿ 5,500 ದಾಟಿದ ಬ್ಲ್ಯಾಕ್ ಫಂಗಸ್ ಪ್ರಕರಣ, 126 ಜನ ಬಲಿ

Photo Credit :

ದೇಶದಲ್ಲಿ 5,500 ದಾಟಿದ ಬ್ಲ್ಯಾಕ್ ಫಂಗಸ್ ಪ್ರಕರಣ, 126 ಜನ ಬಲಿ

ನವದೆಹಲಿ, : ಕೊರೊನಾ ವೈರಸ್‌ನಿಂದ ಗುಣಮುಖರಾದವರಲ್ಲಿ ಕಾಣಿಸಿಕೊಳ್ಳುತ್ತಿರುವ ಭಯಾನಕ ಶಿಲೀಂದ್ರ ಬ್ಲ್ಯಾಕ್ ಫಂಗಸ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬುಧವಾರದವರೆಗಿನ ಅಧಿಕೃತ ಮಾಹಿತಿ ಲಭ್ಯವಾಗಿದ್ದು 5,500 ಜನರು ಬ್ಲ್ಯಾಕ್ ಫಂಗಸ್‌ಗೆ ತುತ್ತಾಗಿದ್ದಾರೆ. ಒಟ್ಟು 126 ಜನ ಇದಕ್ಕೆ ಪ್ರಾಣ ಕಳೆದುಕೊಂಡಿದ್ದು ಮಹಾರಾಷ್ಟ್ರವೊಂದರಲ್ಲೇ 90 ಸಾವಿನ ಪ್ರಕರಣಗಳು ದೃಢಪಟ್ಟಿದೆ. ಬ್ಲ್ಯಾಕ್ ಫಂಗಸ್ ಪ್ರಕರಣಗಳ ಚಿಕಿತ್ಸೆಗೆ ಕೂಡ ಈಗ ಔಷಧಿಗಳ ಕೊರತೆ ಎದುರಾಗುತ್ತಿದೆ. ಲಿಪೊಸೋಮಲ್ ಆಂಪೋಟೇರಿಸಿನ್ ಬಿ ಎಂಬ ಆ್ಯಾಂಟಿ ಫಂಗಲ್ ಡ್ರಗ್ ಇದಕ್ಕೆ ಅಗತ್ಯವಿರುವ ಔಷಧಿಯಾಗಿದೆ. ಇದರ ಕೊರತೆ ಕೂಡ ಈಗ ಚಿಕಿತ್ಸೆಯ ದೃಷ್ಟಿಯಿಂದ ಸವಾಲಾಗುತ್ತಿದೆ.
ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ ರಾಜ್ಯಕ್ಕೆ 1.50 ‘ಲಿಪೊಸೋಮಲ್ ಆಂಪೋಟೇರಿಸಿನ್ ಬಿ’ ವಯಲ್ಸ್‌ಗಳ ಅಗತ್ಯವಿದ್ದು 16,000 ವಯಲ್ಸ್‌ಗಳನ್ನು ಮಾತ್ರವೇ ಸ್ವೀಕರಿಸಿದೆ ಎಂದಿದ್ದಾರೆ. ಮಹಾರಾಷ್ಟ್ರ ಸರ್ಕಾರವು ಔಷಧವನ್ನು ಆಮದು ಮಾಡಿಕೊಳ್ಳಲು ಜಾಗತಿಕ ಟೆಂಡರ್ ಕರೆದಿದೆ. ಒಡಿಶಾ ಸರ್ಕಾರ ಈ ಔ‍ಷಧಿ ಸಂಪೂರ್ಣ ಕೊರತೆಯನ್ನು ಅನುಭವಿಸುತ್ತಿದ್ದು ಕೇಂದ್ರ ಸರ್ಕಾರ ಶುಕ್ರವಾರ ಕಳುಹಿಸುವ ವಯಲ್ಸ್‌ಗಳಿಗಾಗಿ ಕಾಯುತ್ತಿರುವುದಾಗಿ ತಿಳಿಸಿದೆ.
ಕರ್ನಾಟಕದ ಆರೋಗ್ಯ ಸಚಿವ ಕೆ ಸುಧಾಕರ್ ಪ್ರತಿಕ್ರಿಯಿಸಿದ್ದು ರಾಜ್ಯದಲ್ಲಿ ‘ಲಿಪೊಸೋಮಲ್ ಆಂಪೋಟೇರಿಸಿನ್ ಬಿ’ಯ ಸಾವಿರದ ಆಸುಪಾಸಿನಲ್ಲಿದ್ದು 20,000 ವಯಲ್ಸ್‌ಗಳಿಗಾಗಿ ಆರ್ಡರ್ ಮಾಡಲಾಗಿದೆ ಎಂದಿದ್ದಾರೆ. ದೆಹಲಿ, ತೆಲಂಗಾಣ, ಒಡಿಶಾ, ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಗೋವಾ, ಗುಜರಾತ್, ಕರ್ನಾಟಕ ಮತ್ತು ಕೇರಳ ಈ ಹತ್ತು ರಾಜ್ಯಗಳು ಲಿಪೊಸೋಮಲ್ ಆಂಪೋಟೇರಿಸಿನ್ ಬಿ ಔಷಧಿಯ ಕೊರತೆಯನ್ನು ಅನಿಭವಿಸುತ್ತಿವೆ.
ಬ್ಲ್ಯಾಕ್ ಫಂಗಸ್ ಪ್ರಕರಣಗಳಿಂದ ಸಾವನ್ನಪ್ಪುತ್ತಿರುವ ರಾಜ್ಯಗಳಲ್ಲಿ ಹರ್ಯಾಣ ಈಗ ಎರಡನೇ ಸ್ಥಾನದಲ್ಲಿದ್ದು ಈವರೆಗೆ 14 ಜನರು ಇಲ್ಲಿ ಪ್ರಾಣಕಳೆದುಕೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ 8 ಜನರು ಬ್ಲ್ಯಾಕ್ ಫಂಗಸ್‌ನಿಂದ ಸಾವನ್ನಪ್ಪಿದ್ದು ಎಲ್ಲಾ ಪ್ರಕರಣಗಳು ಕೂಡ ಲಕ್ನೋದಲ್ಲಿ ವರದಿಯಾಗಿದೆ.
ರಾಜಸ್ಥಾನ ಬ್ಲ್ಯಾಕ್ ಫಂಗಸ್ ಅನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿದ ನಂತರ ಉಳಿದ ಕೆಲ ರಾಜ್ಯಗಳು ಕೂಡ ಈಗ ಇದೇ ಹಾದಿ ಹಿಡಿದಿದೆ. ಕೇಂದ್ರ ಆರೋಗ್ಯ ಸಚಿವಾಲಯದಿಂದ ಈ ಬಗ್ಗೆ ಸೂಚನೆಯನ್ನು ಕಳುಹಿಸಿದ ನಂತರ ಕರ್ನಾಟಕ ಸಹಿತ ಪಂಜಾಬ್, ಹರ್ಯಾಣ, ತಮಿಳುನಾಡು ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಕೂಡ ಬ್ಲ್ಯಾಕ್ ಫಂಗಸ್‌ಅನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಲಾಗಿದ್ದು ಸಾಂಕ್ರಾಮಿಕ ರೋಗಗಳ ಕಾಯ್ದೆಯ ಅಡಿಯಲ್ಲಿ ಸೇರಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು