News Karnataka Kannada
Wednesday, April 24 2024
Cricket
ವಿದೇಶ

ದೇಶದಲ್ಲಿ 49 ಲಕ್ಷ ದಾಟಿದ ಕೊರೋನಾ ಸೊಂಕಿತರ ಸಂಖ್ಯೆ

Photo Credit :

ದೇಶದಲ್ಲಿ 49 ಲಕ್ಷ ದಾಟಿದ ಕೊರೋನಾ ಸೊಂಕಿತರ ಸಂಖ್ಯೆ

ನವದೆಹಲಿ: ಕಳೆದ 24 ಗಂಟೆಯಲ್ಲಿ 83,803 ಕೊರೋನಾ ಪಾಸಿಟಿವ್ ಪ್ರಕರಣಗಳು ಸೇರಿ ಭಾರತದಲ್ಲಿ ಒಟ್ಟು ಕೊರೋನಾ ಪ್ರಕರಣಗಳು 49 ಲಕ್ಷ ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ವರದಿ ಮಾಡಿದೆ.

9,90,061 ಸಕ್ರಿಯ ಪ್ರಕರಣಗಳು, 38,59,400 ಗುಣಮುಖರಾದವರು ಮತ್ತು 80,776 ಮರಣಹೊಂದಿದವರನ್ನು ಸೇರಿ ಒಟ್ಟು ದೇಶದಲ್ಲಿ 49,30,237 ಪ್ರಕರಣಗಳು ದಾಖಲಾಗಿದೆ.

ಮಹಾರಾಷ್ಟ್ರವು 2,91,630 ಸಕ್ರಿಯ ಪ್ರಕರಣಗಳನ್ನು ಹೊಂದುವ ಮೂಲಕ ದೇಶದಲ್ಲಿ ಸಂಕ್ರಾಮಿಕದಿಂದ ಅತೀ ಹೆಚ್ಚು ಪರಿಣಾಮ ಹೊಂದಿದ ರಾಜ್ಯವಾಗಿದೆ. ಕರ್ನಾಟಕದಲ್ಲಿ 98,482, ಆಂಧ್ರಪ್ರದೇಶದಲ್ಲಿ 93,204, ತಮಿಳುನಾಡಿನಲ್ಲಿ 46,912 ಸಕ್ರಿಯ ಪ್ರಕರಣಗಳಿವೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಪ್ರಕಾರ ಸೆಪ್ಟೆಂಬರ್ 14ರ ವರೆಗೆ  5,83,12,273 ಕೊರೋನಾ ಮಾದರಿ ಪರೀಕ್ಷೆಯನ್ನು ನಡೆಸಲಾಗಿದೆ. ನಿನ್ನೆ ಒಂದೇ ದಿನ 10,72,845 ಮಾದರಿ ಪರೀಕ್ಷೆ ನಡೆಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
196
Keerthana Bhat

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು