News Karnataka Kannada
Monday, April 15 2024
Cricket
ವಿದೇಶ

ದೇಶದಲ್ಲಿ 28 ದಿನದಲ್ಲಿ 52 ಪತ್ರಕರ್ತರು ಕೊರೋನಾಗೆ ಬಲಿ

Photo Credit :

ದೇಶದಲ್ಲಿ 28 ದಿನದಲ್ಲಿ 52 ಪತ್ರಕರ್ತರು ಕೊರೋನಾಗೆ ಬಲಿ

ನವದೆಹಲಿ : ಕೊರೋನದಿಂದಾಗಿ ದೇಶಾದ್ಯಂತ ಹಲವು ಮಂದಿ ಸಾವನ್ನಪ್ಪಿದ್ದು ಇದಕ್ಕೆ ಪತ್ರಕರ್ತರು ಹೊರತಾಗಿಲ್ಲ. ಹೌದು, ಪತ್ರಕರ್ತರ ಮೇಲೆ ತೀವ್ರ ದಾಳಿ ನಡೆಸಿರುವ ಕೋವಿಡ್ ಕಳೆದ 28 ದಿನಗಳಲ್ಲಿ ದೇಶದಲ್ಲಿ 52 ಪತ್ರಕರ್ತರು ಬಲಿಪಡೆದುಕೊಂಡಿದೆ. 

 

 ದೆಹಲಿ ಮೂಲದ ಸಂಸ್ಥೆಯೊಂದು ಕಲೆಹಾಕಿರುವ ಮಾಹಿತಿಯ ಪ್ರಕಾರ ಈ ಅಂಶ ಬೆಳಕಿಗೆ ಬಂದಿದ್ದು, ಅತೀ ಹೆಚ್ಚು ಪತ್ರಕರ್ತರು ಉತ್ತರಪ್ರದೇಶದಲ್ಲಿ ಮೃತಪಟ್ಟಿದ್ದಾರೆ . ತೆಲಂಗಾಣ ಎರಡನೆ ಸ್ಥಾನದಲ್ಲಿದೆ . ಮಹಾರಾಷ್ಟ್ರ ಮೂರನೆ ಸ್ಥಾನದಲ್ಲಿ ಗುರುತಿಸಿಕೊಂಡಿದೆ . 

 

ಇನ್ನು ಕೋವಿಡ್ ದಾಳಿ ಪ್ರಾರಂಭವಾದ ದಿನಗಳಿಂದ ಅಂದರೆ 2020- ಏಪ್ರಿಲ್ 1 ರಿಂದ 2021 ಏಪ್ರಿಲ್ 1 ರ ತನಕ ದೇಶದಲ್ಲಿ 101 ಪತ್ರಕರ್ತರು ಕೊರೋನಾಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ . ಕೊರೋನಾ ಹಬ್ಬಿರುವ ಪ್ರದೇಶಕ್ಕೆ ವರದಿಗೆ ತೆರಳಿದ್ದು ಹಾಗೂ ಇನ್ನಿತರ ಕಾರಣಗಳಿಂದ ಈ ಪತ್ರಕರ್ತರು ಕೊರೋನಾಕ್ಕೆ ಬಲಿಯಾಗಿದ್ದಾರೆ ಎಂದು ವರದಿ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು