News Karnataka Kannada
Sunday, April 14 2024
Cricket
ವಿದೇಶ

ದೇಶದಲ್ಲಿ ಬ್ಲ್ಯಾಕ್ ಫಂಗಸ್ ಗೆ 5424 ಮಂದಿ ತುತ್ತು

Photo Credit :

ದೇಶದಲ್ಲಿ ಬ್ಲ್ಯಾಕ್ ಫಂಗಸ್ ಗೆ 5424 ಮಂದಿ ತುತ್ತು

ನವದೆಹಲಿ : ಒಂದೆಡೆ ಕೊರೋಣ ಮಹಾಮಾರಿಯ ಕಾಟವಾದರೆ, ಇನ್ನೊಂದೆಡೆ ಹೊಸದಾಗಿ ಹುಟ್ಟಿಕೊಳ್ಳುತ್ತಿರುವ ಫಂಗಸ್ ಗಳ ಆತಂಕವು ಹೆಚ್ಚಾಗಿದೆ. ಹೌದು, ಕೇಂದ್ರ ಸರ್ಕಾರ ಬಹಿರಂಗಪಡಿಸಿರುವ ಮಾಹಿತಿಯ ಪ್ರಕಾರ ದೇಶದಲ್ಲಿ ಇದುವರೆಗೆ 5424 ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆಯಾಗಿದೆ ಎಂದು ಹೇಳಲಾಗಿದೆ. 

 

ಕೇಂದ್ರ ಆರೋಗ್ಯ ಸಚಿವ ಡಾ . ಹರ್ಷವರ್ಧನ್ ಅವರು ಈ ಮಾಹಿತಿ ನೀಡಿದ್ದು, ದೇಶದ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸೋಂಕು ಪತ್ತೆಯಾಗಿದೆ . 5424ಮಂದಿಯಲ್ಲಿ ಈ ಫಂಗಸ್ ಪತ್ತೆ ಪ್ರಕರಣದಲ್ಲಿ 4556 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಅದರಲ್ಲಿಯೂ, ಶೇಕಡ55 ರೋಗಿಗಳು ಮಧುಮೇಹದಿಂದ ಬಳಲುತ್ತಿದ್ದರು ಎಂಬ ಆಘಾತಕಾರಿ ಅಂಶವನ್ನು ಹರ್ಷವರ್ಧನ್ ಅವರು ಬಹಿರಂಗಪಡಿಸಿದ್ದಾರೆ . 

 

 ಇದೇ ವೇಳೆ ಬ್ಲ್ಯಾಕ್ ಫಂಗಸ್ ಸೋಂಕಿಗೆ ತುತ್ತಾದವರಿಗೆ ರಾಜ್ಯದಲ್ಲಿ ಅಗತ್ಯ ಔಷಧಿಯ ತೀವ್ರ ಕೊರತೆ ಎದುರಾಗಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲಾ ಆಸ್ಪತ್ರೆಗಳಲ್ಲಿ ಸೋಂಕಿತರು ದಾಖಲಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು