News Karnataka Kannada
Tuesday, April 16 2024
Cricket
ವಿದೇಶ

ದೇಶದಲ್ಲಿ ಕೊರೋನಾದಿಂದ ಚೇತರಿಸಿದವರ ಸಂಖ್ಯೆ 26 ಲಕ್ಷ: ಡಾ. ಹರ್ಷವರ್ಧನ್

Photo Credit :

ದೇಶದಲ್ಲಿ ಕೊರೋನಾದಿಂದ ಚೇತರಿಸಿದವರ ಸಂಖ್ಯೆ 26 ಲಕ್ಷ: ಡಾ. ಹರ್ಷವರ್ಧನ್

ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕನ್ನು ನಿಯಂತ್ರಿಸುವಲ್ಲಿ ಪ್ರಚಂಡವಾಗಿ ದಾಪುಗಾಲಿಟ್ಟಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಶನಿವಾರ(ಆ.29) ತಿಳಿಸಿದರು.

ಈಗಾಗಲೇ ದೇಶದಲ್ಲಿ ಇದುವರೆಗೆ ಸುಮಾರು 26 ಲಕ್ಷದಷ್ಟು ಕೊರೋನಾ ಸೋಂಕಿತರು ಗುಣಮುಖರಾಗಿರುವರು ಎಂದು ಅವರು ಸಚಿವರ ಸಭೆಯಲ್ಲಿ ಮಾಹಿತಿ ನೀಡಿದರು.

ಕೇಂದ್ರ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಅದ್ಭುತವಾಗಿ ಜತೆಯಾಗಿ ಕೆಲಸ ಮಾಡಿವೆ ಎಂದರು.

ಜುಲೈ 31ರಂದು ನಡೆದ ಈ ಮೊದಲಿನ ಸಚಿವರ ಸಭೆಯ ಬಳಿಕ ದೇಶದಲ್ಲಿ ಕೊರೋನಾದಿಂದ ಸಾವನ್ನಪ್ಪುತ್ತಿರುವವರ ಪ್ರಮಾಣವು  ಶೇ.1.81ಕ್ಕೆ ಇಳಿಕೆಯಾಗಿದೆ ಮತ್ತು ಚೇತರಿಕೆ ಪ್ರಮಾಣವು 76.47ರಷ್ಟಾಗಿದೆ ಎಂದು ಮಾಹಿತಿ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು