News Karnataka Kannada
Monday, April 22 2024
Cricket
ವಿದೇಶ

ದಾವೂದ್ ಇಬ್ರಾಹಿಂಗೆ ಪಾಕಿಸ್ತಾನ ನಟಿಯ ಹೊಸ ಸ್ನೇಹ!

Photo Credit :

ದಾವೂದ್ ಇಬ್ರಾಹಿಂಗೆ ಪಾಕಿಸ್ತಾನ ನಟಿಯ ಹೊಸ ಸ್ನೇಹ!

ನವದೆಹಲಿ: 1993ರ ಮುಂಬಯಿ ಸರಣಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ದಾವೂದ್ ಇಬ್ರಾಹಿಂ ಕರಾಚಿಯಲ್ಲಿ ಇರುವುದಾಗಿ ಈಗಾಗಲೇ ಪಾಕಿಸ್ತಾನ ಸರ್ಕಾರ ಒಪ್ಪಿಕೊಂಡಿದ್ದು. ಈಗ ಆತನ ಗೆಳತಿ ಬಗ್ಗೆ ವರದಿಯು ಬಹಿರಂಗವಾಗಿದೆ.

ದಾವೂದ್ ಗೆ ಹಿಂದಿನಿಂದಲೂ ಬಾಲಿವುಡ್ ನಲ್ಲಿ ಚಿತ್ರನಟಿಯರ ಜತೆಗೆ ನಂಟು ಇದದ್ದು ತಿಳಿದೇ ಇದೆ. ಆತ ಹಲವಾರು ಸಿನಿಮಾಗಳಿಗೆ ಹಣ ತೊಡಗಿಸುತ್ತಿದ್ದ ಮತ್ತು ನಟಿಯರು ಆತನ ಮನೆಯಲ್ಲಿ ನಡೆಯುತ್ತಿದ್ದ ಪಾರ್ಟಿಗಳಲ್ಲೂ ಭಾಗಿಯಾಗುತ್ತಿದ್ದರು. ಆದರೆ ಈ ಮೋಹವು ಪಾಕಿಸ್ತಾನಕ್ಕೆ ಪಲಾಯಗೈದ ಬಳಿಕವೂ ಹಾಗೆ ಉಳಿದಿದೆ.

ಇಳಿ ಪ್ರಾಯದಲ್ಲೂ ಆತ 37ರ ಹರೆಯದ ಮೆಹವಿಶ್ ಹಯಾತ್ ಎಂಬ ನಟಿಯೊಂದಿಗೆ ಸಂಬಂದವಿಟ್ಟುಕೊಂಡಿದ್ದಾನೆ ಎಂದು ಡಿಎನ್ ಎ ಪತ್ರಿಕೆಯು ವರದಿ ಮಾಡಿದೆ. ಕೆಲವು ವರ್ಷಗಳಿಂದ ಯಾರಿಗೂ ತಿಳಿಯದೆ ಇದ್ದ ಮೆಹವಿಶ್ ಈಗ ಪಾಕಿಸ್ತಾನದಲ್ಲಿ ಭಾರೀ ಜನಪ್ರಿಯ ನಟಿ ಹಾಗೂ ರೂಪದರ್ಶಿ.

ಪಾಕಿಸ್ತಾನದ ಸರ್ಕಾರವು ಪ್ರತಿಷ್ಠಿತ ತಮಗ-ಎ-ಇಮ್ತಿಯಾಜ್ ಎನ್ನುವ ಪ್ರಶಸ್ತಿಯನ್ನು ಮೆಹವಿಶ್ ಗೆ ನೀಡಲು ನಿರ್ಧರಿಸಿದ್ದರು. ಇದರಿಂದ ಅಲ್ಲಿನ ಸಿನಿಮಾ ರಂಗವು ದಂಗಾಗಿದೆ. ಇನ್ನು ಕೆಲವರು ಪಾಕ್ ಸರ್ಕಾರದ ನಿರ್ಧಾರವನ್ನು ಟೀಕಿಸಿರುವರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು