News Karnataka Kannada
Tuesday, April 23 2024
Cricket
ವಿದೇಶ

ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಮುಳುಗಿದ್ದ P305 ಬೋಟ್​ನ 186 ಮಂದಿ ರಕ್ಷಣೆ

Photo Credit :

ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಮುಳುಗಿದ್ದ P305 ಬೋಟ್​ನ 186 ಮಂದಿ ರಕ್ಷಣೆ

ಮುಂಬೈ : ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಮುಳುಗಿದ್ದ P305 ಬೋಟ್​ನಲ್ಲಿದ್ದ 186 ಮಂದಿಯನ್ನು ಭಾರತೀಯ ನೌಕಾಪಡೆ ರಕ್ಷಿಸಿದ್ದು, ಅಪಾಯದಿಂದ ಪಾರಾಗಿ ಬದುಕುಳಿದ ಬಾರ್ಜ್​ ಸಿಬ್ಬಂದಿ ತಾವು ಎದುರಿಸಿದ ಕರಾಳ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
“ಬೋಟ್​ ಮುಳುಗುತ್ತಿತ್ತು, ಉಪಾಯವಿಲ್ಲದೆ ಸಮುದ್ರಕ್ಕೆ ಹಾರಬೇಕಾಯಿತು. ಭೀಕರ ಸಮುದ್ರದ ಅಲೆಗಳ ನಡುವೆ ಲೈಫ್​ ಜಾಕೆಟ್​ ಹಾಕ್ಕೊಂಡು 11 ಗಂಟೆ ಕಳೆದಿರುವೆ. ಸಮುದ್ರದಲ್ಲಿ ತೇಲುತ್ತಿದ್ದ ನನ್ನನ್ನು ರಕ್ಷಿಸಿದ ನೌಕಾಪಡೆ ಸಿಬ್ಬಂದಿಗೆ ಧನ್ಯವಾದಗಳು” ಎಂದು ಅಮಿತ್ ಕುಮಾರ್ ಕುಶ್ವಾಹ ತಮ್ಮ ಅನುಭವ ಹಂಚಿಕೊಂಡಿದ್ದಾರೆ.ಸಮುದ್ರದಿಂದ ರಕ್ಷಿಸುವ ಮೊದಲು ತೀವ್ರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಬೋಟ್​ ಸಿಬ್ಬಂದಿ, ” ನೌಕಾಪಡೆಗೆ ಇಲ್ಲದಿದ್ದರೆ ತನ್ನ ಸಹೋದ್ಯೋಗಿಗಳು ಯಾರೂ ಜೀವಂತವಾಗಿರುತ್ತಿರಲಿಲ್ಲ. ನೌಕಾಪಡೆಯ ಸಿಬ್ಬಂದಿ ಕಾರಣದಿಂದಾಗಿ ನಾನೂ ಜೀವಂತವಾಗಿದ್ದೇನೆ” ಎಂದು ಮಂಡಿಯೂರಿ ಕೃತಜ್ಞತೆ ಸಲ್ಲಿಸಿದ್ದಾರೆ. ಬೋಟ್​ ಮುಳುಗುತ್ತಿದ್ದಾಗ ನೀರಿಗೆ ಹಾರಲು ಹೋಗಿ ನನ್ನ ಕಾಲಿಗೆ ಬಲವಾದ ಗಾಯವಾಯಿತು. ನೌಕಾಪಡೆಗೆ ಇಲ್ಲದಿದ್ದರೆ ನಾನು ಸಾಯುತ್ತಿದ್ದೆ” ಎಂದು ಬೋಟ್​ ದುರಂತದಲ್ಲಿ ಬದುಕುಳಿದ ವಿಕಾಸ್ ಕುಮಾರ್ ಹೇಳುತ್ತಾರೆ.
ಮೂರು ದಿನಗಳ ಹಿಂದೆ ತೌಕ್ತೆ ಚಂಡಮಾರುತದ ಆರ್ಭಟದಿಂದಾಗಿ ಮುಂಬೈ ತಟದ ಅರಬ್ಬಿ ಸಮುದ್ರದಲ್ಲಿ 410 ಜನರಿದ್ದ ಮಾನವ-ಸರಕು ಸಾಗಣೆಯ ಎರಡು ಬೋಟ್​ಗಳು ಕೊಚ್ಚಿ ಹೋಗಿತ್ತು. P305 ಬೋಟ್​ನಲ್ಲಿ 261ಜನರ ಪೈಕಿ 186 ಮಂದಿಯನ್ನು ರಕ್ಷಿಸಲಾಗಿದ್ದು, ಈವರೆಗೆ 37 ಜನರ ಮೃತದೇಹ ಸಿಕ್ಕಿದೆ. ಉಳಿದ 38 ಮಂದಿಗಾಗಿ ನೌಕಾಪಡೆ ರಕ್ಷಣಾ-ಶೋಧ ಕಾರ್ಯಾಚರಣೆ ಮುಂದುವರೆಸಿದೆ. ಹವಾಮಾನ ವೈಪರೀತ್ಯದ ನಡುವೆಯೂ ರಕ್ಷಣಾ ಸಿಬ್ಬಂದಿ ಸಮುದ್ರದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
. ಕೆಲ ಮೃತದೇಹಗಳ ಕಾನೂನು ಕಾರ್ಯಗಳನ್ನು ಮುಗಿಸಿರುವ ಯೆಲ್ಲೋ ಗೇಟ್ ಠಾಣೆ ಪೊಲೀಸರು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ನೌಕಾ ಹಡಗುಗಳಾದ ಐಎನ್‌ಎಸ್ ಕೊಚ್ಚಿ ಬೆಳಗ್ಗೆ ಮತ್ತು ಐಎನ್‌ಎಸ್ ಕೊಲ್ಕತ್ತಾ ಬುಧವಾರ ತಡರಾತ್ರಿ ಮೃತಪಟ್ಟವರ ದೇಹಗಳನ್ನು ಮುಂಬೈಗೆ ತಂದಿದೆ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ. ಇನ್ನೂ ಹಲವು ಮಂದಿಯನ್ನು ಜೀವಂತವಾಗಿ ಕರೆತರುವ ಭರವಸೆ ಇದೆ, ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ತೌಕ್ತೆ ಚಂಡಮಾರುತದ ಬಗ್ಗೆ ಮುನ್ನೆಚ್ಚರಿಕೆ ನೀಡಿದ್ದರೂ, ಯಾಕೆ ನಿರ್ಲಕ್ಷ್ಯ ವಹಿಸಿದ್ದು ಎಂಬುವುದರ ಬಗ್ಗೆ ತನಿಖೆ ನಡೆಸುವುದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ. ಬಾರ್ಜ್‌ನಲ್ಲಿದ್ದ ಸಿಬ್ಬಂದಿಯ ಸಾವಿಗೆ ಸಂಬಂಧಿಸಿದಂತೆ ಪೊಲೀಸರು ಬುಧವಾರ ಆಕಸ್ಮಿಕ ಸಾವಿನ ವರದಿ (ಎಡಿಆರ್) ದಾಖಲಿಸಿದ್ದಾರೆ.ಒಟ್ಟಿನಲ್ಲಿ ನೌಕಾಪಡೆಯ ಹುಡುಕಾಟ ಕಾರ್ಯಾಚರಣೆ ಇಂದಿಗೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ನೌಕಾ ಹಡಗುಗಳು ಮತ್ತು ವಿಮಾನಗಳು ಪ್ರಸ್ತುತ ಮುಂಬೈನಿಂದ 35 ನಾಟಿಕಲ್ ಮೈಲಿ ದೂರದಲ್ಲಿ ಕಾಣೆಯಾದವರ ಹುಡುಕಾಟ ನಡೆಸುತ್ತಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು