News Karnataka Kannada
Saturday, April 20 2024
Cricket
ವಿದೇಶ

ತೆಲಂಗಾಣ ಆರೋಗ್ಯ ಸಚಿವ ಎಟಲಾ ರಾಜೇಂದ್ರ ಸಚಿವ ಸ್ಥಾನದಿಂದ ವಜಾ

Photo Credit :

ತೆಲಂಗಾಣ ಆರೋಗ್ಯ ಸಚಿವ ಎಟಲಾ ರಾಜೇಂದ್ರ  ಸಚಿವ ಸ್ಥಾನದಿಂದ ವಜಾ

ಹೈದರಾಬಾದ್ : ಮಹತ್ವದ ಬೆಳವಣಿಗೆಯೊಂದರಲ್ಲಿ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ತಮ್ಮ ಸಚಿವ ಸಂಪುಟದಿಂದ ಆರೋಗ್ಯ ಸಚಿವ ಎಟಲಾ ರಾಜೇಂದ್ರ ಅವರನ್ನು ವಜಾ ಮಾಡಿದ್ದಾರೆ . ಹಾಗೇಯೇ ಆರೋಗ್ಯ ಸಚಿವರ ವಜಾಕ್ಕೂ ಕೊರೋನಾ ಪರಿಸ್ಥಿತಿಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಲಾಗುತ್ತಿದೆ .

 

ಮೇದಕ್ ಜಿಲ್ಲೆಯಲ್ಲಿನ ಭೂ ಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಆದೇಶ ನೀಡಿದ್ದಾರೆ. ಮೇದಕ್ ನ ಮಸಾಯಿಪೆಟ್ ಮಂಡಲ್ ನ ಅಚಾಂಪೆಟ್ ಹೊರವಲಯದಲ್ಲಿನ ಭೂ ಕಬಳಿಕೆ ಆರೋಪದ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಮುಖ್ಯಮಂತ್ರಿ ರಾವ್ ಅವರು ಮುಖ್ಯಕಾರ್ಯದರ್ಶಿಗೆ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.

 

ಅಧಿಕೃತ ಪ್ರಕಟಣೆ ಪ್ರಕಾರ, ತೆಲಂಗಾಣ ಮುಖ್ಯಮಂತ್ರಿ ಅವರ ಸಲಹೆ ಮೇರೆಗೆ, ತಕ್ಷಣಕ್ಕೆ ಜಾರಿಗೆ ಬರುವಂತೆ ಎಟಾಲಾ ರಾಜೇಂದ್ರ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸ್ಥಾನದಿಂದ ವಜಾಗೊಳಿಸುವ ಶಿಫಾರಸ್ಸಿಗೆ ರಾಜ್ಯಪಾಲರು ಅಂಕಿತ ಹಾಕಿರುವುದಾಗಿ ವಿವರಿಸಿದೆ.

 

ಇದೊಂದು ಪೂರ್ವಯೋಜಿತ ಕೆಲಸವಾಗಿದೆ ಎಂದು ರಾಜೇಂದ್ರ ಆರೋಪಿಸಿದ್ದು, ತನ್ನ ಬೆಂಬಲಿಗರೊಂದಿಗೆ ಚರ್ಚಿಸಿದ ನಂತರ ಮುಂದಿನ ನಿರ್ಧಾರದ ಬಗ್ಗೆ ಘೋಷಿಸುವುದಾಗಿ ತಿಳಿಸಿದ್ದಾರೆ. 

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು