News Karnataka Kannada
Thursday, April 18 2024
Cricket
ವಿದೇಶ

ತಿರುಪತಿಯಲ್ಲಿ ಭಿಕ್ಷುಕನ ಮನೆಯಲ್ಲಿ ಸಿಕ್ಕ ಹಣ ಎಷ್ಟು ಗೊತ್ತಾ ?

Photo Credit :

ತಿರುಪತಿಯಲ್ಲಿ ಭಿಕ್ಷುಕನ ಮನೆಯಲ್ಲಿ ಸಿಕ್ಕ ಹಣ ಎಷ್ಟು ಗೊತ್ತಾ ?

ತಿರುಪತಿ ; ಶ್ರೀಮಂತ ದೇವರೆಂದೇ ಖ್ಯಾತಿಯಾಗಿರುವ ತಿಮ್ಮಪ್ಪನ ಸನ್ನಿಧಿ ಇರುವ ತಿರುಪತಿಯಲ್ಲಿ ಭಿಕ್ಷುಕನೊಬ್ಬನ ಮನೆಯಲ್ಲಿ ಬರೋಬ್ಬರಿ 6 ಲಕ್ಷ ರೂಪಾಯಿ ಹಣ ಪತ್ತೆಯಾಗಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಭಿಕ್ಷುಕನನ್ನು ಶ್ರೀನಿವಾಸ್​ ಎಂದು ಗುರುತಿಸಲಾಗಿದೆ. ಈತ ತಿರುಪತಿಯ ಶೇಷಾಚಲ ನಗರದ ನಿವಾಸಿ. ತಿರುಪತಿಗೆ ಬರುತ್ತಿದ್ದ ವಿಐಪಿಗಳ ಬಳಿ ಭಿಕ್ಷೆ ಬೇಡುತ್ತಿದ್ದ. ಈತನಿಗೆ ತಿರುಪತಿ ವಲಸಿಗ ಕ್ಯಾಟಗರಿ ಅಡಿಯಲ್ಲಿ ಶೇಷಾಚಲ ನಗರದಲ್ಲಿ ಮನೆಯನ್ನು ಮಂಜೂರು ಮಾಡಲಾಗಿತ್ತು.
ಆದಾಗ್ಯೂ ಶ್ರೀನಿವಾಸನ್​ ಅನಾರೋಗ್ಯದಿಂದಾಗಿ ಕಳೆದ ವರ್ಷ ಮೃತಪಟ್ಟಿದ್ದಾರೆ. ಆತನ ಯಾವುದೇ ಕುಟುಂಬ ಸದಸ್ಯರು ಇಲ್ಲದಿರುವುದಿಂದ ಟಿಟಿಡಿ ಅಧಿಕಾರಿಗಳು ನಿನ್ನೆ ಭಿಕ್ಷುಕನ ಮನೆಯ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದಾಗ ಎರಡು ಟ್ರಕ್​ ಬಾಕ್ಸ್​ ಪತ್ತೆಯಾಗಿದೆ. ಅವುಗಳನ್ನು ತೆರೆದು ನೋಡಿದಾಗ ಕಂತೆ ಕಂತೆ ನೋಟುಗಳು ಸಹ ಪತ್ತೆಯಾಗಿವೆ.ಕಂತೆ ನೋಟುಗಳನ್ನು ಎಣಿಸಿದಾಗ ಅದರಲ್ಲಿ ಬರೋಬ್ಬರಿ 6 ಲಕ್ಷ ರೂಪಾಯಿ ಹಣವಿತ್ತು. ಹಣವನ್ನು ಟಿಟಿಡಿ 5 ಸಿಬ್ಬಂದಿ ಎಣಿಸಿದರು. ಅಂದಹಾಗೆ ಭಿಕ್ಷುಕ ಶ್ರೀನಿವಾಸನ್​, ಅನೇಕ ವರ್ಷಗಳವರೆಗೆ ತಿರುಮಲ ಬೆಟ್ಟದಲ್ಲಿ ವಾಸವಿದ್ದ. ಆದರೆ, ಟಿಟಿಡಿಯ ಯೋಜನೆಯಂತೆ ಭಿಕ್ಷುಕನನ್ನು ಬಲವಂತವಾಗಿ ಹೊರದೂಡಲಾಗಿತ್ತು. ಅಲ್ಲದೆ, ಆತನನ್ನು ತಿರುಪತಿ ವಲಸಿಗ ಎಂದು ಶೇಷಾಚಲ ಕಾಲನಿಯಲ್ಲಿ ಮನೆಯೊಂದನ್ನು ಕೊಡಲಾಗಿತ್ತು. ಅಲ್ಲಿಯೇ ಉಳಿದಿದ್ದ ಶ್ರೀನಿವಾಸ್​ ಅನಾರೋಗ್ಯಕ್ಕೀಡಾಗಿ ಕಳೆದ ವರ್ಷವೇ ಮೃತಪಟ್ಟಿದ್ದಾನೆ.
ಯಾತ್ರಿಯಾಗಿ ತಿರುಮಲ ಬೆಟ್ಟಕ್ಕೆ ಬಂದಿದ್ದ ಶ್ರೀನಿವಾಸನ್​ ಭಿಕ್ಷುಕನಾಗಿ ಇಲ್ಲಿಯೇ ಉಳಿದುಕೊಂಡಿದ್ದ. ಆತನ ಮನೆಯಲ್ಲಿ ಕೆಲ 500 ಮತ್ತು 1000 ಮುಖಬೆಲೆಯ ರದ್ದಾದ ನೋಟುಗಳು ಸಹ ಇವೆ. ಅಲ್ಲದೆ, 2000 ರೂಪಾಯಿ ನೋಟುಗಳು ಸಹ ಸಾಕಷ್ಟಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು