News Karnataka Kannada
Sunday, April 21 2024
Cricket
ವಿದೇಶ

ತಿಂಗಳಲ್ಲಿ 3 ಕರು, 2 ಮೇಕೆ ತಿಂದಿದ್ದ ಚಿರತೆ ಕೊನೆಗೂ ಸೆರೆ

Photo Credit :

ತಿಂಗಳಲ್ಲಿ 3 ಕರು, 2 ಮೇಕೆ ತಿಂದಿದ್ದ ಚಿರತೆ ಕೊನೆಗೂ ಸೆರೆ

ಹಾಸನ: ಕೇವಲ ಒಂದು ತಿಂಗಳಲ್ಲಿ ಕರು, ಮೇಕೆ, ನಾಯಿಯನ್ನು ತಿಂದು ಭೀತಿ ಹುಟ್ಟಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕೊನೆಗೂ ಸೆರೆ ಹಿಡಿದಿದ್ದಾರೆ.
ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ, ದಿಂಡಗೂರು ಗ್ರಾಮದ ಹೊರವಲಯದಲ್ಲಿ ಚಿರತೆಯನ್ನು ಸೆರೆ ಹಿಡಿಯಲಾಗಿದ್ದು, ದಿಂಡಗೂರು ಗ್ರಾಮದ ರೈತ ಮುರಳಿ ಅವರ ಜಮೀನಿನ ಸಮೀಪ ಚಿರತೆ ಬೋನಿಗೆ ಬಿದ್ದಿದೆ. ಕಳೆದ ಒಂದು ತಿಂಗಳಿಂದ ಮೂರು ಕರು, ಎರಡು ಮೇಕೆ, ಒಂದು ನಾಯಿಯನ್ನು ತಿಂದು ಚಿರತೆ ಭೀತಿ ಮೂಡಿಸಿತ್ತು. ಐದು ದಿನಗಳ ಹಿಂದೆ ಚಿರತೆ ಸೆರೆಗೆ ಬೋನ್ ಇಡಲಾಗಿತ್ತು. ಸೋಮವಾರ ರಾತ್ರಿ ಚಿರತೆ ಬೋನಿಗೆ ಬಿದ್ದಿದೆ.
ಚಿರತೆಯನ್ನು ವಶಕ್ಕೆ ಪಡೆಯಲು ಬಂದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಭಾಗದಲ್ಲಿ ಇನ್ನೂ ನಾಲ್ಕು ಚಿರತೆಗಳು ಓಡಾಡಿಕೊಂಡು ಭೀತಿ ಮೂಡಿಸಿವೆ. ಅವುಗಳನ್ನೂ ಹಿಡಿದು ನಂತರ ಈ ಚಿರತೆ ಕೊಂಡೊಯ್ಯಿರಿ ಎಂದು ಆಕ್ರೋಶಗೊಂಡರು. ಬಳಿಕ ಎಲ್ಲ ಚಿರತೆ ಹಿಡಿಯುವ ಭರವಸೆ ನೀಡಿ, ಅರಣ್ಯಾಧಿಕಾರಿಗಳು ಚಿರತೆ ತೆಗೆದುಕೊಂಡು ಹೋದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು