News Karnataka Kannada
Wednesday, April 17 2024
Cricket
ವಿದೇಶ

ತಭವನಕ್ಕೆ ಮತ್ತೊಬ್ಬ ಭಾರತೀಯ ಮೂಲದ ಮಹಿಳೆ ಎಂಟ್ರಿ

Photo Credit :

ತಭವನಕ್ಕೆ ಮತ್ತೊಬ್ಬ ಭಾರತೀಯ ಮೂಲದ ಮಹಿಳೆ ಎಂಟ್ರಿ

ವಾಷಿಂಗ್ಟನ್: ಭಾರತೀಯ ಮೂಲದವರಿಗೆ ಅಮೆರಿಕದ ಅಧ್ಯಕ್ಷ ಜೋ ಬೈಡನ್​ ಮತ್ತೊಮ್ಮೆ ಮಣೆ ಹಾಕಿದ್ದಾರೆ. ಭಾರತೀಯ ಮೂಲದ ಮಹಿಳೆಯೊಬ್ಬರು ಶ್ವೇತಭವನಕ್ಕೆ ಎಂಟ್ರಿ ಕೊಟ್ಟಿದ್ದಾರೆ. ನೀರಾ ಟಂಡನ್ ಅವರನ್ನು ತಮ್ಮ ಹಿರಿಯ ಸಲಹೆಗಾರ್ತಿಯನ್ನಾಗಿ ಅಧ್ಯಕ್ಷ ಜೋ ಬೈಡನ್​ ನೇಮಿಸಿಕೊಂಡಿದ್ದಾರೆ.ಭಾರತೀಯ ಮೂಲದ ನೀರಾ ಟಂಡನ್ (Indian-American Neera Tanden) ಅವರು ಶ್ವೇತಭವನದಲ್ಲಿ ಮ್ಯಾನೇಜ್ಮೆಂಟ್​ ಅಂಡ್​ ಬಡ್ಜೆಟ್​ ಆಫೀಸ್​ (Office of Management and Budget -OMB) ಅಧ್ಯಕ್ಷ ಸ್ಥಾನಕ್ಕೆ ಸಲ್ಲಿಸಿದ್ದ ಉಮೇದುವಾರಿಕೆಯನ್ನು ವಾಪಸ್​ ಪಡದ ಬಳಿಕ ಅಧ್ಯಕ್ಷ ಜೋ ಬೈಡನ್​ ಅಧಿಕೃತವಾಗಿ ಹೊಸ ನೇಮಕ ಘೋಷಣೆ ಮಾಡಿದ್ದಾರೆ.
ಮೆಸಾಚ್ಯುಸೆಟ್ಸ್​​ನಲ್ಲಿ ಜನಿಸಿದ ನೀರಾ ಟಂಡನ್ (50 ವರ್ಷ) OMB ವಿಭಾಗದಲ್ಲಿ ಅಮೆರಿಕದ ಅಧ್ಯಕ್ಷರಿಗೆ ಸಲಹೆಗಾರ್ತಿಯಾಗಿ ನೇಮಕವಾದ ಮೊದಲ ದಕ್ಷಿಣ ಏಷ್ಯಾ ಮಹಿಳೆ ಎನಿಸಿದ್ದಾರೆ. ನೀರಾ ಪತಿ ಬೆಂಜಮಿನ್ ಎಡ್ವರ್ಡ್ಸ್​ ಚಿತ್ರ ಕಲಾವಿದರಾಗಿದ್ದಾರೆ. ಒಬಾಮಾ-ಬೈಡನ್ ಅಧ್ಯಕ್ಷೀಯ ಚುನಾವಣಾ ಪ್ರಚಾರ ವೇಳೆ ದೇಶೀಯ ನೀತಿನಿರೂಪಣೆ ಹೊಣೆ ಹೊತ್ತಿದ್ದರು. ಹಿಲರಿ ಕ್ಲಿಂಟನ್​ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ಇನ್ನು 2016ರಲ್ಲಿ ಡೊನಾಲ್ಡ್​ ಟ್ರಂಪ್​ ವಿರುದ್ಧ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.
ನೀರಾ ಟಂಡನ್ ಅವರ ಬುದ್ಧಿಮತ್ತೆ, ಚಾತುರ್ಯ ಮತ್ತು ರಾಜಕೀಯ ಜ್ಞಾನ ಅವರನ್ನುಈ ಹುದ್ದೆಯ ವರೆಗೂ ತಂದಿದೆ. ಅಧ್ಯಕ್ಷ ಜೋ ಬೈಡನ್​ ಅವರಿಗೆ ಹಿರಿಯ ಸಲಹೆಗಾರ್ತಿಯಾಗುವ ಮೂಲಕ ಅಮೆರಿಕದ ಅಧ್ಯಕ್ಷರಿಗೆ ಬಲ ತುಂಬಲಿದ್ದಾರೆ. ಅವರ ಅನುಭವದಿಂದ ಅಮೆರಿಕಕ್ಕೆ ಉತ್ತಮ ಸೇವೆ ಲಭಿಸಲಿದೆ ಎಂದು ಫೌಂಡರ್​ ಫಾರ್​ ದಿ ಅಮರಿಕನ್​ ಪ್ರೋಗ್ರೆಸ್​ (CAP) ಜಾನ್ ಪೊಡೆಸ್ತಾ ಪ್ರಕಟಣೆಯಲ್ಲಿ ಆಶಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು