News Karnataka Kannada
Saturday, April 13 2024
Cricket
ವಿದೇಶ

ಡಿಎಂಕೆ ಗೆದ್ದಿದ್ದಕ್ಕೆ ನಾಲಿಗೆ ಕತ್ತರಿಸಿ ಹರಕೆ ತೀರಿಸಿದ ಮಹಿಳೆ

Photo Credit :

ಡಿಎಂಕೆ ಗೆದ್ದಿದ್ದಕ್ಕೆ ನಾಲಿಗೆ ಕತ್ತರಿಸಿ ಹರಕೆ ತೀರಿಸಿದ ಮಹಿಳೆ

ತಮಿಳುನಾಡಿನಲ್ಲಿ ಎಂ.ಕೆ.ಸ್ಟಾಲಿನ್​ ನೇತೃತ್ವದ ಡಿಎಂಕೆ (ದ್ರಾವಿಡ ಮುನ್ನೇತ್ರ ಕಳಗಂ) ಪಕ್ಷ ಈ ಬಾರಿ ಅಧಿಕಾರಕ್ಕೆ ಬಂದರೆ ನಾಲಿಗೆಯನ್ನು ಕತ್ತರಿಸಿಕೊಳ್ಳುತ್ತೇನೆ ಎಂದು ಮಹಿಳೆಯೊಬ್ಬರು ಹರಕೆ ಹೊತ್ತಿದ್ದರು. ಇದೀಗ ಡಿಎಂಕೆ ಪಕ್ಷವೇ ಗೆದ್ದ ಕಾರಣ ತಮ್ಮ ನಾಲಿಗೆಯನ್ನು ಕತ್ತರಿಸಿ, ದೇವರಿಗೆ ಅರ್ಪಿಸಿದ್ದಾರೆ.
ಹೀಗೊಂದು ಕಷ್ಟಕರವಾದ ಹರಕೆ ಹೊತ್ತಿದ್ದಲ್ಲದೆ, ಅದನ್ನು ತೀರಿಸಿದ ಮಹಿಳೆಯ ಹೆಸರು ವನಿತಾ. ಇವರಿಗೆ 32 ವರ್ಷ. 2021ರ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಅದರಲ್ಲಿ ಡಿಎಂಕೆಗೆ ಬಹುಮತ ಬಂದಿದೆ. ಹೀಗಾಗಿ ಫಲಿತಾಂಶ ಹೊರಬರುತ್ತಿದ್ದಂತೆ ವನಿತಾ ತಮ್ಮ ಹರಕೆ ಸಲ್ಲಿಸಿದ್ದಾರೆ.ಜನಾದೇಶ ಡಿಎಂಕೆ ಪರವಾಗಿ ಹೊರಬೀಳುತ್ತಿದ್ದಂತೆ ವನಿತಾ ಮುಥಾಲಮ್ಮನ ದೇವಾಲಯಕ್ಕೆ ಹೋಗಿ ತಮ್ಮ ನಾಲಿಗೆ ಕತ್ತರಿಸಿಕೊಂಡಿದ್ದಾರೆ. ಅದನ್ನು ಆ ದೇವರಿಗೆ ಅರ್ಪಿಸಲು ಪ್ರಯತ್ನಿಸಿದ್ದಾಳೆ. ಆದರೆ ಕೊವಿಡ್​ 19 ಇರುವ ಕಾರಣಕ್ಕೆ ಅಲ್ಲಿ ಯಾವುದೇ ಪೂಜೆ, ಹರಕೆ ಸಲ್ಲಿಸಲು ಅವಕಾಶ ಇಲ್ಲ. ಹಾಗಾಗಿ ನಾಲಿಗೆಯನ್ನು ದೇಗುಲದ ಬಾಗಿಲನಲ್ಲಿರುವ ಗೇಟ್​ ಬಳಿ ಇಟ್ಟಿದ್ದರು. ಅಷ್ಟರಲ್ಲಿ ಆಕೆಯೂ ಸಹ ಎಚ್ಚರವಿಲ್ಲದೆ ಬಿದ್ದಿದ್ದಾರೆ. ಸ್ಥಳದಲ್ಲಿದ್ದವರು ಅದನ್ನು ನೋಡಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದರು.ತಮಿಳುನಾಡಿನಲ್ಲಿ ದಶಕಗಳ ನಂತರ ಒಂದು ಹೊಸ ಆಡಳಿತ ಶುರುವಾಗುತ್ತಿದೆ. ಇಷ್ಟು ದಿನ ವಿರೋಧ ಪಕ್ಷವಾಗಿದ್ದ ಡಿಎಂಕೆ ಇನ್ನು ಮುಂದೆ ಆಡಳಿತ ಪಕ್ಷವಾಗಲಿದೆ. ಜಯಲಲತಾ ಅವರ ಎಐಡಿಎಂಕೆ ಪಕ್ಷದ ಆಡಳಿತ ನಿನ್ನೆಗೆ ಕೊನೆಗೊಂಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು