News Karnataka Kannada
Friday, April 19 2024
Cricket
ವಿದೇಶ

ಟೈಮ್ಸ್ ಸಮೂಹದ ಅಧ್ಯಕ್ಷೆ ಇಂದೂ ಜೈನ್‌ ನಿಧನ: ಪ್ರಧಾನಿ ಸೇರಿ ಹಲವು ಗಣ್ಯರ ಸಂತಾಪ

Photo Credit :

ಟೈಮ್ಸ್ ಸಮೂಹದ ಅಧ್ಯಕ್ಷೆ ಇಂದೂ ಜೈನ್‌ ನಿಧನ: ಪ್ರಧಾನಿ ಸೇರಿ ಹಲವು ಗಣ್ಯರ ಸಂತಾಪ

ನವದೆಹಲಿ: ಟೈಮ್ಸ್ ಗ್ರೂಪ್ ಅಧ್ಯಕ್ಷೆ ಇಂದೂ ಜೈನ್ ಅವರು ತಮ್ಮ 84 ನೇ ವಯಸ್ಸಿನಲ್ಲಿ ಗುರುವಾರ ನಿಧನರಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಜಕೀಯ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.ಟೈಮ್ಸ್ ಗ್ರೂಪ್ ಅಧ್ಯಕ್ಷರಾದ ಶ್ರೀಮತಿ ಇಂದೂ ಜೈನ್​ ಅವರ ನಿಧನದಿಂದ ನನಗೆ ತೀವ್ರ ಬೇಸರವಾಗಿದೆ. ಅವರ ಸಮುದಾಯದ ಸೇವಾ ಉಪಕ್ರಮಗಳು, ಭಾರತದ ಪ್ರಗತಿಯ ಬಗೆಗಿನ ಉತ್ಸಾಹ ಮತ್ತು ನಮ್ಮ ಸಂಸ್ಕೃತಿಯ ಬಗ್ಗೆ ಆಳವಾದ ನಂಬಿಕೆ ಇರಿಸಿಕೊಂಡಿದ್ದರಿಂದ ಸದಾ ಸ್ಮರಣೆಯಲ್ಲಿ ಇರುತ್ತಾರೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಸರಿಸಾಟಿಯಿಲ್ಲದ ಸಹಾನುಭೂತಿ, ಕಠಿಣ ಪರಿಶ್ರಮ ಮತ್ತು ಲೋಕೋಪಕಾರಿ ಕಾರ್ಯಗಳಿಗಾಗಿ ಇಂದೂ ಜೈನ್ ಅವರನ್ನು ಸದಾ ಸ್ಮರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಟೈಮ್ಸ್ ಗ್ರೂಪ್ನ ಅಧ್ಯಕ್ಷರಾದ ಶ್ರೀಮತಿ ಇಂದೂ ಜೈನ್ ಅವರ ನಿಧನವು ತುಂಬಾ ದುಃಖಕರವಾಗಿದೆ. ಸಾಟಿಯಿಲ್ಲದ ಸಹಾನುಭೂತಿ, ಕಠಿಣ ಪರಿಶ್ರಮ ಮತ್ತು ಲೋಕೋಪಕಾರಿ ಕಾರ್ಯಗಳಿಗಾಗಿ ರಾಷ್ಟ್ರವು ಯಾವಾಗಲೂ ಅವರನ್ನು ನೆನಪಿಸಿಕೊಳ್ಳುತ್ತದೆ. ಇಂತಹ ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಇಡೀ ಟೈಮ್ಸ್ ಗ್ರೂಪ್​ಗೆ ನನ್ನ ಸಂತಾಪ. ಓಂ ಶಾಂತಿ ಎಂದು ಟ್ವೀಟ್ ಮಾಡಿದ್ದಾರೆ.
ಅವರ ನಿಧನದ ಬಗ್ಗೆ ದೇಶಾದ್ಯಂತ ಹಲವು ರಾಜಕಾರಣಿಗಳು ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ.ಟೈಮ್ಸ್ ಗ್ರೂಪ್​ನ ಅಧ್ಯಕ್ಷೆ ಇಂದೂ ಜೈನ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಸಾಮಾಜಿಕ ಕಾರ್ಯಗಳಿಗೆ ಅವರು ನೀಡಿದ ಕೊಡುಗೆ, ಭಾರತೀಯ ಸಂಸ್ಕೃತಿಯ ಬಗ್ಗೆ ಅವರ ಉತ್ಸಾಹಕ್ಕಾಗಿ ಅವರನ್ನು ಯಾವಾಗಲೂ ಸ್ಮರಿಸಲಾಗುವುದು. ಅಗಲಿದ ಆತ್ಮಕ್ಕೆ ದೇವರು ಶಾಂತಿ ನೀಡಲಿ. ಓಂ ಶಾಂತಿ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಅಸ್ಸೋಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಕೇಂದ್ರ ಸಚಿವ ಪಿಯೂಷ್ ಗೋಯಲ್, ಸಚಿನ್ ಪೈಲೆಟ್​ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು