News Karnataka Kannada
Sunday, April 14 2024
Cricket
ವಿದೇಶ

‘ಟೈಟಾನಿಕ್ʼ ನೋಡಲು ತೆರಳಿದ್ದ ಐವರು ಪ್ರವಾಸಿಗರು ಜಲಸಮಾಧಿ

titanic-submersible
Photo Credit : Twitter

ಅಟ್ಲಾಂಟಿಕ್ ಮಹಾಸಾಗರದಲ್ಲಿ ಮುಳುಗಿದ್ದ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ತೆರಳಿದ್ದ ಐವರು ಪ್ರವಾಸಿಗರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಓರ್ವ ಪೈಲಟ್, ನಾಲ್ವರು ಮಹಾಸಾಗರದಲ್ಲಿ ಜಲ ಸಮಾಧಿಯಾಗಿದ್ದಾರೆ. ಬ್ರಿಟನ್​ನ ಹಮೀಶ್ ಹಾರ್ಡಿಂಗ್, ಸ್ಟೋಕ್ಟನ್ ರಶ್, ಪಾಲ್ ಹೆನ್ರಿ, ಪಾಕಿಸ್ತಾನದ ಉದ್ಯಮಿ ಶಹಜಾದ್ ದಾವೂದ್ ಹಾಗೂ ಪುತ್ರ ಸುಲೇಮಾನ್ ಮೃತಪಟ್ಟಿದ್ದಾರೆ.

ಕಳೆದ 3-4 ದಿನಗಳಿಂದ ಅಮೆರಿಕ ಹಾಗೂ ಕೆನಡಾ ಕರಾವಳಿಯಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ಫಲ ಕೊಡಲಿಲ್ಲ, ಕೆನಡಾದ ನ್ಯೂಫೌಂಡ್​ಲ್ಯಾಂಡ್​ ಕರಾವಳಿಯ ಭಾಗದಿಂದ 400 ಮೈಲಿ ದೂರದಲ್ಲಿ ಹಡಗು ಟೈಟಾನಿಕ್​ನ ಅವಶೇಷಗಳು ಬಿದ್ದಿವೆ. ಇಲ್ಲಿನ ಅವಶೇಷಗಳನ್ನು ನೋಡಲು ಹೋಗಿದ್ದವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಇನ್ನು ಈ ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡುವುದಕ್ಕೆ ಹೋಗಲು ಎಲ್ಲರಿಗೂ ಸಾಧ್ಯವಿಲ್ಲ. ಜಗತ್ತಿನ ಶ್ರೀಮಂತರಷ್ಟೆ ಇದನ್ನು ನೋಡಲು ಸಾಧ್ಯ, ಏಕೆಂದರೆ ಒಮ್ಮೆ ನೀವು ಕಡಲಿನ ಆಳಕ್ಕೆ ಹೋಗಿ ಟೈಟಾನಿಕ್ ಅವಶೇಷ ನೋಡಿ ಬರಲು ಕೋಟ್ಯಂತರ ಹಣ ಖರ್ಚು ಮಾಡಬೇಕಾಗುತ್ತದೆ. ಹೌದು ಒಂದು ಟಿಕೆಟ್ ಬೆಲೆ 2.5 ಲಕ್ಷ ಅಮೆರಿಕನ್ ಡಾಲರ್, ಅಂದರೆ ಬರೊಬ್ಬರಿ 2 ಕೋಟಿ ರುಪಾಯಿ.

ಯುಎಸ್ ಕೋಸ್ಟ್ ಗಾರ್ಡ್ ಮತ್ತು ಕೆನಡಾ, ಯುಕೆ ಮತ್ತು ಫ್ರಾನ್ಸ್‌ನ ಆಳವಾದ ಸಮುದ್ರದ ನೀರಿನ ತಜ್ಞರು ಜಂಟಿಯಾಗಿ ಟೈಟಾನ್ ಸಬ್‌ಮರ್ಸಿಬಲ್‌ಗಾಗಿ ಭಾನುವಾರ ಜೂನ್ 18 ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು, ಆದರೂ ಐವರು ಪ್ರಯಾಣಿಕರನ್ನು ಉಳಿಸಲು ಸಾಧ್ಯವಾಗಿಲ್ಲ. ಉತ್ತರ ಅಟ್ಲಾಂಟಿಕ್‌ನಲ್ಲಿ ಸಮುದ್ರದ ಆಳದಲ್ಲಿ ಜಲಾಂತರ್ಗಾಮಿ ಸ್ಫೋಟಗೊಂಡಿದ್ದು ಯಾರೊಬ್ಬರೂ ಬದುಕುಳಿದಿಲ್ಲ ಎಂದು ಯುಎಸ್ ಕೋಸ್ಟ್‌ ಗಾರ್ಡ್ ಹೇಳಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು