News Karnataka Kannada
Sunday, April 14 2024
Cricket
ವಿದೇಶ

ಜಪಾನ್‌ನಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ

Photo Credit :

ಜಪಾನ್‌ನಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ

ಟೋಕ್ಯೋ, : ಜಪಾನ್‌ನಲ್ಲಿ 6.8 ತೀವ್ರತೆಯ ಭೂಕಂಪವಾಗಿದ್ದು, ಯಾವುದೇ ಸುನಾಮಿ ಎಚ್ಚರಿಕೆ ಇಲ್ಲ ಎಂದು ಹೇಳಲಾಗಿದೆ.ಜಪಾನ್‌ನ ಈಶಾನ್ಯ ಕರಾವಳಿಯಲ್ಲಿ ಭೂಕಂಪ ಸಂಭವಿಸಿದೆ, ಯಾವುದೇ ಆಸ್ತಿಪಾಸ್ತಿ ನಷ್ಟ ಉಂಟಾಗಿಲ್ಲ.ಭೂಕಂಪ ಇಶಿನೊಮಾಕಿಯಲ್ಲಿ 47 ಕಿ.ಮೀ ಆಳದಲ್ಲಿ ಸಂಭವಿಸಿದೆ. ಮಿಯಾಗಿ ಬಳಿ ಭೂಕಂಪದ ಕೇಂದ್ರ ಬಿಂದು ಇದೆ ಎನ್ನಲಾಗಿದೆ, 2011ರಲ್ಲಿ ಇದೇ ಪ್ರದೇಶದಲ್ಲಿ ಸಂಭವಿಸಿದ ಸುನಾಮಿಯಲ್ಲಿ 18 ಸಾವಿರಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದರು ಎಂದು ಯುನೈಟೆಡ್ ಸ್ಟೇಟ್ಸ್ ಜಿಯಾಲಾಜಿಕಲ್ ಸರ್ವೇ ತಿಳಿಸಿದೆ.
ಯುಎಸ್‌ಜಿಎಸ್ ಹಾಗೂ ಜಪಾನ್ ಹವಾಮಾನ ಸಂಸ್ಥೆ ಭೂಕಂಪದ ಬಳಿಕ ಯಾವುದೇ ಸುನಾಮಿ ಅಪಾಯವಿಲ್ಲ ಎಂದು ಹೇಳಿದೆ. ಪೂರ್ವ ಕರಾವಳಿಯ ಕೆಲವು ಭಾಗಗಳಲ್ಲಿ ಬಲವಾಗಿ ಭೂಮಿ ನಡುಗುವ ಅನುಭವವಾಗಿದೆ, ಟೋಕಿಯೋದಲ್ಲಿಯೂ ಈ ಅನುಭವವಾಗಿದೆ ಎಂದು ಹೇಳಲಾಗಿದೆ.ದೇಶದಲ್ಲಿ ಪದೇ ಪದೇ ಭೂಕಂಪ ಸಂಭವಿಸಿರುತ್ತದೆ ಹೀಗಾಗಿ ಅಲ್ಲಿನ ಕಟ್ಟಡಗಳ ನಿರ್ಮಾಣ ಸಮಯದಲ್ಲೇ ಇದೆಲ್ಲಕ್ಕೂ ಸಿದ್ಧವಿರುವಂತಹ ಕಟ್ಟಡಗಳನ್ನೇ ನಿರ್ಮಿಸಲಾಗುತ್ತದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು