News Karnataka Kannada
Thursday, April 18 2024
Cricket
ವಿದೇಶ

ಚುನಾವಣೆ ಗೆಲುವಿನಲ್ಲೂ ಇತಿಹಾಸ ನಿರ್ಮಿಸಿದ ಕೆಕೆ ಶೈಲಜಾ

Photo Credit :

ಚುನಾವಣೆ ಗೆಲುವಿನಲ್ಲೂ ಇತಿಹಾಸ ನಿರ್ಮಿಸಿದ ಕೆಕೆ ಶೈಲಜಾ

ತಿರುವನಂತಪುರಂ, ; ಕೇರಳ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಎಲ್‌ಡಿಎಫ್ 94 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ಏರಲಿದ್ದು, ಇತಿಹಾಸ ನಿರ್ಮಾಣ ಮಾಡಿದೆ.ಕೇರಳದ ರಾಜ್ಯದಲ್ಲಿ ಕೋವಿಡ್ ನಿಯಂತ್ರಣದ ವಿಚಾರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದವರು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ. ವಿಧಾನಸಭಾ ಚುನಾವಣೆಯಲ್ಲಿಯೂ ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ಮೂಲಕ ಅವರು ಹೊಸ ದಾಖಲೆ ಬರೆದಿದ್ದಾರೆ.
ಕಣ್ಣೂರು ಜಿಲ್ಲೆಯ ಮಟ್ಟನ್ನೂರು ಕ್ಷೇತ್ರದಲ್ಲಿ ಶೈಲಜಾ ಟೀಚರ್ ಎಂದೇ ಕರೆಸಿಕೊಳ್ಳುವ ಕೆ. ಕೆ. ಶೈಲಜಾ 60,963 ಮತಗಳ ಅಂತರದಿಂದ ಗೆದ್ದಿದ್ದಾರೆ. ಕೇರಳದ 140 ವಿಧಾನಸಭಾ ಕ್ಷೇತ್ರಗಳಲ್ಲಿ ಇಷ್ಟು ಅಂತರದಿಂದ ಗೆದ್ದವರು ಇವರೊಬ್ಬರೆ.
64 ವರ್ಷದ ಶೈಲಜಾ ಅವರು ಕೋವಿಡ್ ಮತ್ತು ನಿಫಾ ವೈರಸ್ ಸಂದರ್ಭದಲ್ಲಿನ ಕಾರ್ಯ ನಿರ್ವಹಣೆ ವಿಚಾರದಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದಾರೆ.ಕೇರಳ ವಿಧಾನಸಭೆ ಚುನಾವಣೆ 2021ರಲ್ಲಿ ಶೈಲಜಾ ಅವರು ಎಲ್‌ಡಿಎಫ್‌ನ ಸ್ಟಾರ್ ಕ್ಯಾಂಪೇನರ್ ಆಗಿದ್ದರು. 23 ವರ್ಷಗಳ ಕಾಲ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡಿದ ಶೈಲಜಾ ಅವರು 2004ರಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದರು.
ಶೈಲಜಾ ಅವರು ಸಿಪಿಐ(ಎಂ)ನ ಯುವ ಘಟಕವಾದ ಡಿವೈಎಫ್‌ಐನ ನಿವೃತ್ತ ಸದಸ್ಯರಾಗಿದ್ದಾರೆ. 2016ರಲ್ಲಿ ಮೊದಲ ಬಾರಿಗೆ ಚುನಾವಣೆ ಗೆದ್ದ ಅವರು ಸಚಿವರಾದರು. ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಸರ್ಕಾರ ರಚನೆಗೊಂಡಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು