News Karnataka Kannada
Wednesday, April 24 2024
Cricket
ವಿದೇಶ

ಚೀನಾಗೆ ಗೌಪ್ಯ ಮಾಹಿತಿ: ಅಧಿಕೃತ ರಹಸ್ಯ ಕಾಯ್ದೆಯಡಿ ಪತ್ರಕರ್ತನ ಬಂಧನ

Photo Credit :

ಚೀನಾಗೆ ಗೌಪ್ಯ ಮಾಹಿತಿ: ಅಧಿಕೃತ ರಹಸ್ಯ ಕಾಯ್ದೆಯಡಿ ಪತ್ರಕರ್ತನ ಬಂಧನ

ನವದೆಹಲಿ: ಚೀನಾದ ಗುಪ್ತಚರ ಮಾಹಿತಿ ಸಂಗ್ರಹಕ್ಕೆ ದೇಶದ ಸೂಕ್ಷ್ಮ ಮಾಹಿತಿಯನ್ನು ರವಾನಿಸಿದ್ದಕ್ಕಾಗಿ ಸ್ವತಂತ್ರ ಪತ್ರಕರ್ತ ರಾಜೀವ್ ಶರ್ಮಾ ಅವರನ್ನು ಪೋಲಿಸರು ಬಂಧಿಸಿದೆ.

ಅದರೊಂದಿಗೆ ಶೆಲ್ ಕಂಪೆನಿಗಳ ಮೂಲಕ ಹೆಚ್ಚಿನ ಪ್ರಮಾಣದ ಹಣವನ್ನು ಪಾವತಿಸಿದ್ದಕ್ಕಾಗಿ ಒಬ್ಬ ಚೀನೀ ಮಹಿಳೆ ಮತ್ತು ಅವಳ ನೇಪಾಳದ ಸಹಚರನನ್ನು ಸಹ ಬಂಧಿಸಲಾಗಿದೆ. ದೊಡ್ಡ ಪ್ರಮಾಣದ ಹಣದ ಬದಲಾಗಿ ಸೂಕ್ಷ್ಮ ಮಾಹಿತಿ ಎಂದು ದೆಹಲಿ ಪೊಲೀಸರು ತಿಳಿಸಿದರು.

ಅಪಾರ ಸಂಖ್ಯೆಯ ಮೊಬೈಲ್ ಫೋನ್ ಗಳು, ಲ್ಯಾಪ್ ಟಾಪ್ ಗಳು ಮತ್ತು ಇತರ ಸೂಕ್ಷ್ಮ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣ ಅಧಿಕೃತ ರಹಸ್ಯ ಕಾಯ್ದೆಗೆ ಸಂಬಂಧಿಸಿದ್ದಾಗಿದ್ದು, ರಕ್ಷಣಾ ಸಂಬಂಧಿತ ವರ್ಗೀಕೃತ ದಾಖಲೆಗಳನ್ನು ಹೊಂದಿದ್ದ ಸ್ವತಂತ್ರ ಪತ್ರಕರ್ತ, ಪಿತಾಂಪುರ ನಿವಾಸಿ ರಾಜೀವ್ ಶರ್ಮಾನನ್ನು ದೆಹಲಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

`ಅವರು ಕೆಲವು ವರ್ಗೀಕೃತ ರಕ್ಷಣಾ ಸಂಬಂಧಿತ ದಾಖಲೆಗಳನ್ನು ಹೊಂದಿದ್ದಾರೆಂದು ಕಂಡುಬಂದಿದೆ. ತನಿಖೆ ಪ್ರಗತಿಯಲ್ಲಿದೆ ಮತ್ತು ಹೆಚ್ಚಿನ ವಿವರಗಳನ್ನು ಸರಿಯಾದ ಸಮಯದಲ್ಲಿ ಹಂಚಿಕೊಳ್ಳಲಾಗುವುದು’ ಎಂದು ಉಪ ಪೊಲೀಸ್ ಆಯುಕ್ತ ಸಂಜೀವ್ ಕುಮಾರ್ ಯಾದವ್ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು