News Karnataka Kannada
Monday, April 22 2024
Cricket
ವಿದೇಶ

ಚಿತೆಯೇರಿದ ಮೇಲೆ ಒಮ್ಮೆಲೆ ಎದ್ದು ಕೂತು ಎಲ್ಲರನ್ನೂ ಬೆಚ್ಚಿಬೀಳಿಸಿದ ಅಜ್ಜ

Photo Credit :

ಚಿತೆಯೇರಿದ ಮೇಲೆ  ಒಮ್ಮೆಲೆ ಎದ್ದು ಕೂತು ಎಲ್ಲರನ್ನೂ ಬೆಚ್ಚಿಬೀಳಿಸಿದ ಅಜ್ಜ

ಬಾರಮತಿ: ಅದೆಷ್ಟೋ ಮಂದಿ ಕೊರೋನಾ ಸೋಂಕಿಗೆ ಬಲಿಯಾಗುತ್ತಿದ್ದು, ದಿನಬೆಳಗಾದರೆ ಸಾವು-ನೋವುಗಳ ಕುರಿತು ಕೇಳುವಂತಾಗಿದೆ. ಹೀಗಿರುವ ಸಂದರ್ಭದಲ್ಲಿ ಚಿತೆಯ ಮೇಲೆ ಮಲಗಿದ್ದವರು ಎದ್ದು ಬಂದ ಘಟನೆ ಇನ್ನೊಂದು ಕಡೆ ನಡೆದಿದೆ. 

 

ಬಾರಮತಿಯ ಮುಧಾಲೆ ಗ್ರಾಮದ 76 ವರ್ಷದ ಶಕುಂತಲಾ ಗಾಯಕ್ವಾಡ್‌ಗೆ ಎನ್ನುವವರು ಕೊರೋನಕ್ಕೆ ತುತ್ತಾಗಿದ್ದು, ಆರೋಗ್ಯ ಸ್ಥಿತಿ ಸ್ಥಿಮಿತ ತಪ್ಪಿದ ಕಾರಣ ಬಾರಮತಿಯಲ್ಲಿರುವ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದಾರೆ. ಅದರ ಬೆಡ್ ಸಿಗದ ಕಾರಣ ತೀವ್ರ ಅಸ್ವಸ್ಥಗೊಂಡ ಅಜ್ಜಿಯ ಮಾತು , ಚಲನವಲನ ನಿಂತುಹೋಗಿದೆ. ಇತ್ತ ಉಸಿರಾಟ ಇದೆ ಅನ್ನೋದೇ ತಿಳಿಯದ ಪರಿಸ್ಥಿತಿಗೆ ಬಂದಿದೆ. ಕುಟುಂಬಸ್ಥರು ಪರಿಶೀಲಿಸಿ ಅಜ್ಜಿಯ ಉಸಿರು ನಿಂತುಹೋಗಿದೆ ಎಂದಿದ್ದಾರೆ.

 

ಹೀಗಾಗಿ ಅಜ್ಜಿಯನ್ನು ಮನೆಗೆ ಕರೆದುಕೊಂಡು ಬಂದ ಕುಟುಂಬಸ್ಥರು, ಅಜ್ಜಿ ನಿಧನ ವಾರ್ತೆಯನ್ನು ಎಲ್ಲರಿಗೂ ತಿಳಿಸಿ, ಅಂತ್ಯಸಂಸ್ಕಾರಕ್ಕೆ ಮುಂದಾಗಿದ್ದಾರೆ.ವಿಧಿ ವಿಧಾನ ಮಾಡಿದ ಬಳಿಕ ಅಜ್ಜಿಯನ್ನು ಚಿತೆ ಮೇಲಿರಿಸಿದ್ದಾರೆ. ಈ ವೇಳೆ ಅಜ್ಜಿ ಕೊಂಚ ಸುಧಾರಿಸಿಕೊಂಡು ಎದ್ದು ಕುಳಿತು ಗಳಗಳನೆ ಅತ್ತಿದ್ದಾರೆ.

 

ನೋವಿನಲ್ಲಿದ್ದ ಕುಟುಂಬಕ್ಕೆ ಆಘಾತವಾಗಿದೆ. ಇದು ನಿಜವೇ ಎಂಬ ಅನುಮಾನವೂ ಮೂಡಿದೆ. ತಕ್ಷಣವೇ ಅಜ್ಜಿಯನ್ನು ಸಿಲ್ವರ್ ಜುಬಿಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅಜ್ಜಿ ಆರೋಗ್ಯ ಚೇತರಿಕೆ ಕಂಡಿದೆ.

 

 

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು