News Karnataka Kannada
Sunday, April 21 2024
Cricket
ವಿದೇಶ

ಚಾಮರಾಜನಗರ: 348 ಹೊಸ ಪ್ರಕರಣ, 331 ಮಂದಿ ಸೋಂಕು ಮುಕ್ತ

Photo Credit :

ಚಾಮರಾಜನಗರ: 348 ಹೊಸ ಪ್ರಕರಣ, 331 ಮಂದಿ ಸೋಂಕು ಮುಕ್ತ

ಚಾಮರಾಜನಗರ: ಜಿಲ್ಲೆಯಲ್ಲಿ ಗುರುವಾರ 348 ಪ್ರಕರಣಗಳು ದೃಢಪಟ್ಟಿವೆ. 331 ಮಂದಿ ಗುಣಮುಖರಾಗಿದ್ದಾರೆ.ಬುಧವಾರ ಸಂಜೆ 6ಗಂಟೆಯಿಂದ ಗುರುವಾರ ಸಂಜೆ 6 ಗಂಟೆಯವರೆಗೆ ಎಂಟು ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಐವರು ಕೋವಿಡ್‌ನಿಂದ ಹಾಗೂ ಮೂವರು ಕೋವಿಡ್‌ಯೇತರ ಕಾರಣದಿಂದ ಕೊನೆಯುಸಿರೆಳೆದಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ 27,412 ಪ್ರಕರಣಗಳು ವರದಿಯಾಗಿವೆ. ಗುಣಮುಖರಾದವರ ಸಂಖ್ಯೆ 24 ಸಾವಿರ ದಾಟಿದೆ. ಈವರೆಗೆ 24,119 ಮಂದಿ ಸೋಂಕುಮುಕ್ತರಾಗಿದ್ದಾರೆ. ಸದ್ಯ 2,840 ಸಕ್ರಿಯ ಪ್ರಕರಣಗಳಿವೆ. ಸೋಂಕಿತರಲ್ಲಿ 56 ಮಂದಿ ಐಸಿಯುನಲ್ಲಿದ್ದಾರೆ. 299 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. ಉಳಿದವರು ಕೋವಿಡ್‌ ಕೇರ್‌ ಕೇಂದ್ರ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುರುವಾರ 1,468 ಮಂದಿಯ ಗಂಟಲು ದ್ರವದ ಮಾದರಿಗಳ ಪರೀಕ್ಷಾ ವರದಿ ಬಂದಿದ್ದು, 1,138 ವರದಿಗಳು ನೆಗೆಟಿವ್‌ ಬಂದು, 330 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. ಹಳೆಯ 18 ಪ್ರಕರಣಗಳನ್ನು ಗುರುವಾರದ ಪ್ರಕರಣಗಳೊಂದಿಗೆ ಸೇರಿಸಲಾಗಿದೆ.
ವರದಿಯಾದ ಪ್ರಕರಣಗಳಲ್ಲಿ ಅತಿ ಹೆಚ್ಚು ಅಂದರೆ 146 ಪ್ರಕರಣಗಳು ಚಾಮರಾಜನಗರ ತಾಲ್ಲೂಕಿಗೆ ಸೇರಿವೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 65, ಕೊಳ್ಳೇಗಾಲದಲ್ಲಿ 49, ಹನೂರಿನಲ್ಲಿ 66, ಯಳಂದೂರು ತಾಲ್ಲೂಕಿನಲ್ಲಿ 20 ಮಂದಿಗೆ ಸೋಂಕು ದೃಢಪಟ್ಟಿದೆ. ಎರಡು ಪ್ರಕರಣಗಳು ಹೊರ ಜಿಲ್ಲೆಗೆ ಸೇರಿವೆ.ಗುಣಮುಖರಾದ 331 ಜನರಲ್ಲಿ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರು. ಕೋವಿಡ್‌ ಕೇರ್‌ ಸೆಂಟರ್‌ನಲ್ಲಿದ್ದ 80 ಹಾಗೂ ಮನೆಯಲ್ಲೇ ಆರೈಕೆಯಲ್ಲಿದ್ದ 248 ಮಂದಿ ಕೋವಿಡ್‌ ಗೆದ್ದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು