News Karnataka Kannada
Sunday, April 21 2024
Cricket
ವಿದೇಶ

ಗ್ಯಾಂಗ್‍ರೇಪ್ ಪ್ರಕರಣ – ಕೇರಳದಿಂದ ಯುವತಿಯನ್ನು ಕರೆತಂದ ಪೊಲೀಸರು

Photo Credit :

ಗ್ಯಾಂಗ್‍ರೇಪ್ ಪ್ರಕರಣ – ಕೇರಳದಿಂದ ಯುವತಿಯನ್ನು   ಕರೆತಂದ ಪೊಲೀಸರು

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಡೆದಿದ್ದ ಗ್ಯಾಂಗ್‍ರೇಪ್ ಕೃತ್ಯದ ಹಿಂದೆ ಹಣ ಮತ್ತು ದ್ವೇಷವೇ ಕಾರಣ ಎಂದು ತಿಳಿದು ಬಂದಿದೆ.ಗ್ಯಾಂಗ್‍ರೇಪ್ ದುರುಳರಿಗೆ ಪೊಲೀಸರು ಸರಿಯಾಗಿ ಬುದ್ಧಿ ಕಲಿಸಿದ್ದಾರೆ.
ರಾಮಮೂರ್ತಿನಗರದ ಎನ್‍ಆರ್‍ಐ ಲೇಔಟ್‍ನಲ್ಲಿ ಹಣಕಾಸಿನ ವಿಚಾರ ಕೊನೆಗೆ ದ್ವೇಷಕ್ಕೆ ತಿರುಗಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ನಾಲ್ವರು ಯುವಕರು ಮತ್ತು ಇಬ್ಬರು ಯುವತಿಯರು ಸಂತ್ರಸ್ತೆಗೆ ಚಿತ್ರಹಿಂಸೆ ನೀಡಿದ್ದಾರೆ. ನಂತರ ಅತ್ಯಾಚಾರ ಎಸಗಿದ್ದು, ಇದೆಲ್ಲವನ್ನು ವೀಡಿಯೋ ಮಾಡಿ ವೈರಲ್ ಮಾಡಿದ್ರು. ಇದೀಗ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಮಾನ ಹರಾಜು ಹಾಕಿದ್ದ ಗ್ಯಾಂಗ್ ರೆಪಿಸ್ಟ್ ಗಳ ಕಾಲಿಗೆ ಪೊಲೀಸ್ರು ಗುಂಡು ಹೊಡೆದಿದ್ದಾರೆ. ಯುವತಿಯ ಮೇಲೆ ರಾಕ್ಷಸರಂತೆ ಎರಗಿದ್ದ ಕೀಚಕರನ್ನು ಕೃತ್ಯ ನಡೆದ ಬಿ.ಚನ್ನಸಂದ್ರ ಕನಕ ನಗರದ ಮನೆಗೆ ಕರೆದುಕೊಂಡು ಹೋಗಲಾಗ್ತಿತ್ತು. ಸ್ಥಳದ ಪಂಚನಾಮೆ ಮಾಡುತ್ತಿದ್ದಾಗ ಪ್ರಕರಣದ ಎ1 ಆರೋಪಿ ರಕಿಬುಲ್ಲಾ ಇಸ್ಲಾಂ ಸಾಗರ್ ಹಾಗೂ ಹೃದಯ್ ಬೊಬು ಎಸಿಪಿ ಸಕ್ರಿ ಹಾಗೂ ಪೇದೆ ರವಿ ಕುಮಾರ್ ಮೇಲೆ ಕಲ್ಲಿನಿಂದ ದಾಳಿ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಆಗ ಪೊಲೀಸರು ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.
ಎ3 ಆರೋಪಿಗೆ ಕೊರೊನಾ ಪಾಸಿಟಿವ್ ಆಗಿದ್ದು, ಉಳಿದವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ 14 ದಿನ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ. ಈ ಪ್ರಕರಣ ಬಗ್ಗೆ ಸಿಎಂ ಯಡಿಯೂರಪ್ಪ ಹಾಗೂ ಗೃಹಸಚಿವ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಇದೊಂದು ಅಮಾನುಷ ಕೃತ್ಯ. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸ್ತೇವೆ ಅಂದಿದ್ದಾರೆ.ಘಟನೆ ಬಳಿಕ ಸಂತ್ರಸ್ತೆ ಕೇರಳದ ಕ್ಯಾಲಿಕಟ್‍ಗೆ ಹೋಗಿದ್ರು. ಬಂಧಿತ ಆರೋಪಿಗಳಿಂದ ಸಂತ್ರಸ್ತೆಯ ಮಾಹಿತಿ ಪಡೆದು ಕೇರಳಕ್ಕೆ ಹೋಗಿದ್ದ ಒಂದು ಟೀಂ ಸಂತ್ರಸ್ತೆಯನ್ನ ಬೆಂಗಳೂರಿಗೆ ಕರೆ ತಂದಿದ್ದಾರೆ. ಆಕೆಯ ವಿಚಾರಣೆ ಬಳಿಕ ದುಷ್ಕೃತ್ಯದ ಬಗ್ಗೆ ಮತ್ತಷ್ಟು ವಿಚಾರಗಳು ಬೆಳಕಿಗೆ ಬರೋ ಸಾಧ್ಯತೆ ಇದೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು