News Karnataka Kannada
Tuesday, April 23 2024
Cricket
ವಿದೇಶ

ಗುಪ್ತಚರ ಇಲಾಖೆ ಮತ್ತು ರಾ ಮುಖ್ಯಸ್ಥರ ಅಧಿಕಾರವಧಿ ವಿಸ್ತರಣೆ

Photo Credit :

ಗುಪ್ತಚರ ಇಲಾಖೆ ಮತ್ತು ರಾ ಮುಖ್ಯಸ್ಥರ ಅಧಿಕಾರವಧಿ ವಿಸ್ತರಣೆ

ನವದೆಹಲಿ, : ಭಾರತದ ಗುಪ್ತಚರ ಇಲಾಖೆ ನಿರ್ದೇಶಕ ಅರವಿಂದ್ ಕುಮಾರ್ ಹಾಗೂ ರಿಸರ್ಚ್ ಆಂಡ್ ಅನಾಲಿಸಸ್ ವಿಂಗ್ (RAW) ಕಾರ್ಯದರ್ಶಿ ಸಮಂತ್ ಕುಮಾರ್ ಗೋಯೆಲ್ ಅಧಿಕಾರವಧಿಯನ್ನು ಮುಂದಿನ ಒಂದು ವರ್ಷದವರೆಗೂ ವಿಸ್ತರಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಬ್ಬರು ಅಧಿಕಾರಿಗಳ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಿದೆ. 1984 ರ ಬ್ಯಾಚ್‌ನ ಇಬ್ಬರು ಐಪಿಎಸ್ ಅಧಿಕಾರಿಗಳು ಕ್ರಮವಾಗಿ ಪಂಜಾಬ್ ಮತ್ತು ಅಸ್ಸಾಂ-ಮೇಘಾಲಯದವರಾಗಿದ್ದು, 2022ರ ಜೂನ್ 30 ರಂದು ನಿವೃತ್ತರಾಗುತ್ತಾರೆ. ಎರಡು ಗುಪ್ತಚರ ಇಲಾಖೆಯಲ್ಲಿ ಇಬ್ಬರು ಅಧಿಕಾರಿಗಳ ಕಾರ್ಯವೈಖರಿ ಮತ್ತು ಇಲಾಖೆಯ ಭವಿಷ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಅಧಿಕಾರ ವಿಸ್ತರಿಸಲಾಗಿದೆ. ಸಮಂತ್ ಕುಮಾರ್ ಗೋಯೆಲ್ ಶ್ರಮ ಹಾಗೂ ಸಹಕಾರ ಕಾರ್ಯಾಚರಣೆ ಮನೋಭಾವ ಹೊಂದಿರುವ ವ್ಯಕ್ತಿಯಾಗಿದ್ದು, ಅರವಿಂದ್ ಕುಮಾರ್ ರಾಜಕಾರಣದಲ್ಲಿ ಆಂತರಿಕ ಪರಿಸ್ಥಿತಿಗಳ ಸೂಕ್ಷ್ಮತೆಗಳನ್ನು ಅರಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ.
ಗುಪ್ತಚರ ಇಲಾಖೆ (ಐಬಿ) ಮತ್ತು RAW ಸಂಸ್ಥೆಯ ಮುಖ್ಯಸ್ಥರು ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವೆಲ್ ನಿರ್ದೇಶನದ ಅಡಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. RAW ಕಾರ್ಯ ಚಟುವಟಿಕೆಗಳ ಬಗ್ಗೆ ಕೇಂದ್ರ ಸರ್ಕಾರಿ ಬಿಗಿ ನಿಲುವು ಹೊಂದಿದ್ದು, ಗುಪ್ತಚರ ಇಲಾಖೆಯು ರಾಜಕೀಯ ಪ್ರತಿಭಟನೆ, ನಕ್ಸಲರು ಮತ್ತು ಉಗ್ರ ಚಟುವಟಿಕೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು