News Karnataka Kannada
Saturday, April 13 2024
Cricket
ವಿದೇಶ

ಗುಜುರಿ ಸೇರುತ್ತಿರುವ ‘ಐಎನ್‍ಎಸ್ ವಿರಾಟ್’ ರಕ್ಷಣೆಗೆ ಮುಂದಾಗಿ: ರಾಜೀವ್ ಚಂದ್ರಶೆಖರ್ ಮನವಿ

Photo Credit :

ಗುಜುರಿ ಸೇರುತ್ತಿರುವ ‘ಐಎನ್‍ಎಸ್ ವಿರಾಟ್’ ರಕ್ಷಣೆಗೆ ಮುಂದಾಗಿ: ರಾಜೀವ್ ಚಂದ್ರಶೆಖರ್ ಮನವಿ

ಹೊಸದಿಲ್ಲಿ: ದೇಶದ ನೌಕಾಸೇನೆಯ ಹೆಮ್ಮೆಯ ನೌಕೆಯಾಗಿದ್ದ ಯುದ್ಧ ನೌಕೆ ಐಎನ್‍ಎಸ್ ವಿರಾಟ್ ನುಚ್ಚುನೂರಾಗಿ ಗುಜುರಿ ಸೇರುವುದನ್ನು ತಪ್ಪಿಸಲು ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಅವರು ಅವಿರತ ಪ್ರಯತ್ನ ನಡೆಸುತ್ತಿದ್ದಾರೆ.

ಭಾರತೀಯ ನೌಕಾಪಡೆಯಲ್ಲಿ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಈ ಯುದ್ಧ ನೌಕೆಯನ್ನು ಮಾದರಿ ಹೋಟೆಲ್ ಆಗಿಯೋ ಅಥವಾ ವಸ್ತು ಸಂಗ್ರಹಾಲಯ ಆಗಿಯೋ ಪರಿವರ್ತನೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಈ ನೌಕೆಯನ್ನು ಈಗಾಗಲೇ ಗುಜುರಿ ಅಂಗಡಿಗೆ ಹಸ್ತಾಂತರಿಸಿದ್ದು, ಇದನ್ನು ಕೆಡವಲು ಈಗಾಗಲೇ ಸಮಯ ನಿಗದಿಪಡಿಸಲಾಗಿದೆ.

ಇದೀಗ ಮತ್ತೊಮ್ಮೆ ಕೊನೆಯ ಪ್ರಯತ್ನ ಎಂಬಂತೆ ಐಎನ್‍ಎಸ್ ವಿರಾಟ್‍ನ ರಕ್ಷಣೆಗೆ ಸಂಸದರು ಹೋರಾಟ ನಡೆಸುತ್ತಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ್ದು ಅನೇಕ ಕಾರ್ಪೊರೇಟ್ ಕಂಪನಿಗಳು ನಮ್ಮ ಇತಿಹಾಸದ ರಕ್ಷಣೆಗೆ ಮುಂದೆ ಬರುವಂತೆ ಕೋರಿದ್ದಾರೆ.

ದೇಶದ ಉನ್ನತ ಅಧಿಕಾರಿಗಳು, ಧುರೀಣರು, ನಾಗರಿಕರು ತಮ್ಮ ಒಂದು ದಿನದ ಸಂಬಳವನ್ನು ಇದಕ್ಕಾಗಿ ಮೀಸಲಿಡಬೇಕು. ದೇಶದ ಪ್ರಮುಖ ಕಾರ್ಪೊರೇಟ್ ಕಂಪನಿಗಳಾದ ರಿಲಯನ್ಸ್, ಟಾಟಾ, ಅದಾನಿ, ವಿಪ್ರೊ, ಎಚ್‍ಸಿಎಲ್,ಮಹಿಂದ್ರಾ, ಉದಯ್ ಕೊಟಕ್, ಪೂನಾವಾಲಾ, ಇನ್ಫೋಸಿಸ್ ಕಂಪೆನಿಗಳೆಲ್ಲಾ ಸೇರಿ ದೇಶದ ಇತಿಹಾಸವನ್ನು ಸಂಗ್ರಹಿಸುವ ಟ್ರಸ್ಟ್ ರೂಪಿಸಬೇಕು ಎಂದು ವಿನಂತಿಸಿದ್ದಾರೆ.

1987 ಮೇ. 12ರಂದು ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದ್ದ ವಿರಾಟ್, 2017ರ ಮಾರ್ಚ್‍ನಲ್ಲಿ ಸೇವೆಯಿಂದ ನಿವೃತ್ತಗೊಳಿಸಲಾಗಿತ್ತು. ಭಾರತೀಯ ನೌಕಾಪಡೆಯಲ್ಲಿ 27 ವರ್ಷ ಸೇರಿ ಒಟ್ಟು 55 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಹೆಮ್ಮೆ ಐಎನ್‍ಎಸ್ ವಿರಾಟ್‍ಗೆ ಸಲ್ಲುತ್ತದೆ. ಆಪರೇಶನ್ ಪವನ್ ಮತ್ತು ಪರಾಕ್ರಮ್, ಆಪರೇಶನ್ ಜುಪಿಟರ್, ಆಪರೇಶನ್ ವಿಜಯ್ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಐಎನ್‍ಎಸ್ ವಿರಾಟ್ ಯುದ್ಧ ನೌಕೆ ಸೇವೆಯಲ್ಲಿ ವಿಶ್ವದ ಅತ್ಯಂತ ಹಳೆಯ ಯುದ್ಧ ನೌಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಈ ಹಡಗನ್ನು ಮುಂಬೈನಿಂದ ಗುಜರಾತ್‍ಗೆ ಸ್ಥಳಾಂತರಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
196
Keerthana Bhat

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು