News Karnataka Kannada
Sunday, April 14 2024
Cricket
ವಿದೇಶ

ಗಾಳಿಯಲ್ಲಿಯೂ ಹರಡುವ ಕೊರೋನ ವೈರಾಣು

Photo Credit :

ಗಾಳಿಯಲ್ಲಿಯೂ ಹರಡುವ ಕೊರೋನ ವೈರಾಣು

ಬೆಂಗಳೂರು: ಕೊರೊನಾ ವೈರಾಣುಗಾಳಿಯಲ್ಲೂ ತೇಲುತ್ತವೆ ಎಂದು ಇತ್ತೀಚಿನ ವೈಜ್ಞಾನಿಕ ಸಂಶೋಧನೆಯೊಂದು ಪ್ರತಿಪಾದಿಸಿದೆ. ಇದರಿಂದಾಗಿ ಮನೆ, ಕಟ್ಟಡ, ಕೋವಿಡ್‌ ಆಸ್ಪತ್ರೆಗಳು, ಕೋವಿಡ್‌ ಆರೈಕೆ ಕೇಂದ್ರಗಳ ಸುರಕ್ಷತೆಯ ಬಗ್ಗೆಯೇ ಈಗ ಸಂದೇಹ ಮೂಡಲಾರಂಭಿಸಿದೆ.ವಿಶ್ವ ಆರೋಗ್ಯ ಸಂಸ್ಥೆ ಪ್ರಾಯೋಜಿತ ‘ಸಾರ್ಸ್‌ ಕೋವಿಡ್‌–2’ ವೈರಾಣು ಕುರಿತು ವೈಜ್ಞಾನಿಕ ಅಧ್ಯಯನ ನಡೆದಿದೆ. ಅಮೆರಿಕಾ, ಯುಕೆ, ಕೆನಡಾದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳು ಈ ಅಧ್ಯಯನದಲ್ಲಿ ಭಾಗಿಯಾಗಿದ್ದು, ದ ಲಾನ್ಸೆಟ್‌ ಸೇರಿ ವಿಶ್ವದ ಪ್ರತಿಷ್ಠಿತ ಮೆಡಿಕಲ್ ಜರ್ನಲ್‌ಗಳಲ್ಲಿ ಇದರ ವರದಿ ಪ್ರಕಟವಾಗಿದೆ.
ಅಧ್ಯಯನದ ಪ್ರಕಾರ, ‘ಆಸ್ಪತ್ರೆ, ಪ್ರಯೋಗಾಲಯಗಳು, ಸ್ಕ್ಯಾನಿಂಗ್‌ ಕೇಂದ್ರಗಳೂ ತೇಲುವ ವೈರಾಣು ಸೋಂಕಿನಿಂದ ಹೊರತಾಗಿಲ್ಲ. ಸಾರ್ವಜನಿಕ ಸ್ಥಳಗಳು, ಮನೆಗಳು, ಅಪಾರ್ಟ್‌ಮೆಂಟ್‌ಗಳಲ್ಲಿರುವ ಜನರೂ ಈ ವೈರಸ್‌ನಿಂದ ಬಚಾವಾಗುವುದು ಕಷ್ಟವಾಗಿದೆ’.ಸೋಂಕಿತ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಹೊರಬೀಳುವ ಹನಿಗಳಲ್ಲಿ ಈ ವೈರಾಣುಗಳು ಇರುತ್ತವೆ. ಅವು ಗಾಳಿಯಲ್ಲಿ ತೇಲುವುದಿಲ್ಲ ಎಂದೇ ಭಾವಿಸಲಾಗಿತ್ತು. ಆದರೆ, ಹೊಸ ಅಧ್ಯಯನ ಪ್ರಕಾರ, ಈ ವೈರಾಣುಗಳು ಗಾಳಿಯಲ್ಲೂ ತೇಲುತ್ತವೆ. ಸಕ್ರಿಯ ವೈರಾಣುಗಳ ಜೀವಿತಾವಧಿ 3 ಗಂಟೆಗಳು. ಸೋಂಕಿತ ವ್ಯಕ್ತಿ ಕೆಮ್ಮಿದರೆ, ಸೀನಿದರೆ ಮಾತ್ರವಲ್ಲ, ಮಾತನಾಡಿದರೆ, ಯಾರ ಮುಂದಾದರೂ ಕೂಗಾಡಿದರೆ ಅಥವಾ ಹಾಡಿದರೂ ವೈರಾಣುಗಳು ಹೊಮ್ಮುತ್ತವೆ ಎನ್ನುವುದು ಅಧ್ಯಯನದ ಸಾರಾಂಶ.
ವೈರಾಣುಗಳು ಈ ಮೊದಲು ಭಾವಿಸಿದ್ದಕ್ಕಿಂತಲೂ ಅತ್ಯಂತ ಸೂಕ್ಷ್ಮವಾಗಿದ್ದು, ಮಾಸ್ಕ್‌ ಧರಿಸಿದ್ದರೂ ಅದರ ಸಂದಿ ಮೂಲೆಯಿಂದಲೂ ಪ್ರವೇಶಿಸುವ ಚಾಕಚಕ್ಯತೆ ಹೊಂದಿವೆ. ಇವುಬಾಯಿ, ಮೂಗು, ಕಣ್ಣುಗಳ ಮೂಲಕದೇಹದೊಳಗೆ ಪ್ರವೇಶಿಸಬಲ್ಲವು. ಆದ್ದರಿಂದ, ಹೊರಗೆ ಹೋಗುವಾಗ ಮಾತ್ರವಲ್ಲ ಮನೆಯ ಒಳಗೆ ಇದ್ದಾಗಲೂ ಮಾಸ್ಕ್‌ ಧರಿಸಬೇಕು. ಹೊರಗೆ ಹೋಗುವಾಗ ಡಬ್ಬಲ್‌ ಮಾಸ್ಕ್‌ ಹಾಕಿಕೊಳ್ಳುವುದು ಸೂಕ್ತ ಎನ್ನುತ್ತಾರೆ ವಿಜ್ಞಾನಿಗಳಾದ ಹೆನಗನ್ ಸಿ ಮತ್ತು ಸ್ಪೆನ್ಸರ್‌.ಮನೆ, ಕಚೇರಿಗಳು ಅಥವಾ ಇತರ ಕಟ್ಟಡಗಳ ಒಳಗೆ ಸೋಂಕಿತ ವ್ಯಕ್ತಿಯಿಂದ ಹರಡುವ (ಗಾಳಿಯಲ್ಲಿ ತೇಲುವ) ವೈರಾಣುಗಳಿಂದ ರಕ್ಷಣೆ ಪಡೆಯಲು ಕಟ್ಟುನಿಟ್ಟಾದ ವ್ಯವಸ್ಥೆ ಮಾಡಿಕೊಳ್ಳಬೇಕು. ಮಾಸ್ಕ್‌ ಹಾಕಿಕೊಳ್ಳಬೇಕು, ಸ್ವಚ್ಛ ಗಾಳಿ ಸರಾಗವಾಗಿ ಹರಿದಾಡಬೇಕು (ಹವಾ ನಿಯಂತ್ರಿತವಲ್ಲ), ಏರ್‌ ಫಿಲ್ಟರ್‌ ಇಟ್ಟುಕೊಳ್ಳಬೇಕು. ವಿಶೇಷವಾಗಿ ಮುಂಚೂಣಿಯಲ್ಲಿರುವ ಆರೋಗ್ಯಕ್ಕೆ ಸಂಬಂಧಿಸಿದ ಕೋವಿಡ್‌ ವಾರಿಯರ್ಸ್‌ಗಳು ಉನ್ನತ ಗುಣಮಟ್ಟದ ಮಾಸ್ಕ್‌ಗಳನ್ನೇ ಧರಿಸಿಕೊಳ್ಳಬೇಕು.
ಸಾಮಾನ್ಯವಾಗಿ ದೊಡ್ಡ ಸಮಾವೇಶಗಳು, ಮದುವೆಗಳು, ಸಭೆಗಳು ಮಾತ್ರ ಅತಿಹೆಚ್ಚು ಸೋಂಕು ಹರಡುವ ಸ್ಥಳಗಳೆಂದು ಎಂದು ಭಾವಿಸಲಾಗಿತ್ತು. ಆದರೆ, ಕೊಠಡಿಗಳಲ್ಲಿ ಸಂಭಾಷಣೆ ನಡೆಸಿದಾಗ, ಸಂಗೀತ ಕಚೇರಿಗಳು, ಕ್ರೂಸ್‌ ಶಿಪ್‌, ಪ್ರಾಣಿ ವಧಾಗಾರ, ಹೋಂ ಕೇರ್‌ ಸೆಂಟರ್‌, ಕಚೇರಿಗಳಲ್ಲೂ ಸೂಪರ್‌ ಸ್ಪ್ರೆಡ್‌ ಆಗುತ್ತವೆ. ಆರು ಅಡಿಗಿಂತ ಹಲವುಪಟ್ಟು ದೂರ ಇದ್ದವರಿಗೂ ಸೋಂಕು ತಗುಲಿದೆ ಎನ್ನುತ್ತಾರೆ ಹೆನಗನ್.ಈ ಹೊಸ ಮಾಹಿತಿಯಿಂದ ಕೋವಿಡ್‌ ಆಸ್ಪತ್ರೆಗಳು, ಕೋವಿಡ್‌ ಕೇರ್‌ ಸೆಂಟರ್‌ಗಳು, ಪ್ರಯೋಗಾಲಯಗಳನ್ನು ಹೇಗೆ ಇನ್ನಷ್ಟು ಸುರಕ್ಷಿತಗೊಳಿಸಬೇಕು ಎಂಬ ಬಗ್ಗೆ ಕೋವಿಡ್‌ ತಜ್ಞರು ಚಿಂತನೆ ನಡೆಸಿದ್ದಾರೆ. ಏಕೆಂದರೆ ಈ ಅಧ್ಯಯನದ ಪ್ರಕಾರ, ಆಸ್ಪತ್ರೆಗಳ ಏರ್‌ಫಿಲ್ಟರ್‌ಗಳಲ್ಲಿ ಮತ್ತು ಕಟ್ಟಡಗಳ ಗಾಳಿ ಹೊರ ಹೋಗುವ ಕೊಳವೆಗಳಲ್ಲಿ ವೈರಸ್‌ಗಳು ಪತ್ತೆಯಾಗಿದ್ದವು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು