News Karnataka Kannada
Tuesday, April 16 2024
Cricket
ವಿದೇಶ

ಗಾಲ್ವಾನ್ ಗಡಿಯಲ್ಲಿನ ದಾಳಿಯಲ್ಲಿ ಸಾವನ್ನಪ್ಪಿದ ಚೀನಾ ಯೋಧರ ಕುರಿತು ವರದಿ ನೀಡಿದ ಪತ್ರಕರ್ತನನ್ನು ಬಂಧಿಸಿದ ಚೀನಾ ಸರ್ಕಾರ

Photo Credit :

ಗಾಲ್ವಾನ್ ಗಡಿಯಲ್ಲಿನ ದಾಳಿಯಲ್ಲಿ ಸಾವನ್ನಪ್ಪಿದ ಚೀನಾ ಯೋಧರ ಕುರಿತು ವರದಿ ನೀಡಿದ ಪತ್ರಕರ್ತನನ್ನು ಬಂಧಿಸಿದ ಚೀನಾ ಸರ್ಕಾರ

ಬೀಜಿಂಗ್ : ಕೆಲ ತಿಂಗಳ ಹಿಂದೆ ಭಾರತದ ಗಡಿ ಉಲ್ಲಂಘಿಸಿ ಯೋಧರ ಜತೆ ಜಗಳಕ್ಕೆ ಬಂದ ಚೀನಾ ಯೋಧರಿಗೆ ಭಾರತ ಗಾಲ್ವಾನ್ ಗಡಿಯಲ್ಲಿ ತಕ್ಕ ಪಾಠ ಕಲಿಸಿತ್ತು . ಈ ಮೂಲಕ ಭಾರತದ ಯೋಧರು ಚೀನಾದ ಯೋಜನೆಯನ್ನು ವಿಫಲಗೊಳಿಸಿದರು .

 

 ಈ ಸಂಘರ್ಷದಲ್ಲಿ ಚೀನಾ ಯೋಧರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣ ಕಳೆದುಕೊಂಡಿದ್ದರು . ಆದರೆ ಅಲ್ಲಿನ ಸರ್ಕಾರ ಇದನ್ನು ನಿರಾಕರಿಸುತ್ತಲೆ ಬಂದಿತ್ತು . ಈ ಕುರಿತು ಮೊದಲು ವರದಿ ಮಾಡಿದ್ದ ಚೀನಾದ ಬ್ಲಾಗರ್ ಕ್ವಿಜಿಮಿಂಗ್ , ಚೀನಾ ಕಡೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾವು ನೋವು ಸಂಭವಿಸಿದೆ ಎಂದು ಖಚಿತಪಡಿಸಿದ್ದರು . 

 

ಈ ವರದಿಯನ್ನು ತಮ್ಮ ಬ್ಲಾಗ್ ನಲ್ಲಿ ಪ್ರಕಟಿಸಿದ್ದರು . ಇದು ದೇಶ ವಿರೋಧಿ ಕೃತ್ಯ ಎಂದು ಪರಿಗಣಿಸಿರುವ ಚೀನಾ ಸರ್ಕಾರ , ಬ್ಲಾಗರ್ ಕ್ವಿಜಿಮಿಂಗ್ ಗೆ ಎಂಟು ತಿಂಗಳ ಜೈಲು ಶಿಕ್ಷೆ ವಿಧಿಸಿದೆ . ಕ್ವಿಜಿಮಿಂಗ್ ಚೀನಾದಲ್ಲಿ ಜನಪ್ರಿಯರಾಗಿದ್ದು , 25 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ ಎಂದು ವರದಿಗಳು ತಿಳಿಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು