News Karnataka Kannada
Thursday, April 18 2024
Cricket
ವಿದೇಶ

ಗಾಲ್ವಾನ್‌ ನಲ್ಲಿ 40 ಚೀನೀ ಸೈನಿಕರ ಹತ್ಯೆ ಎಂದು ಪ್ರಕಟಿಸಿದವನಿಗೆ ಜೈಲು ಶಿಕ್ಷೆ

Photo Credit :

ಗಾಲ್ವಾನ್‌ ನಲ್ಲಿ 40 ಚೀನೀ ಸೈನಿಕರ ಹತ್ಯೆ ಎಂದು ಪ್ರಕಟಿಸಿದವನಿಗೆ ಜೈಲು ಶಿಕ್ಷೆ

ಬೀಜಿಂಗ್ : ಜೂನ್ 2020ರಲ್ಲಿ ಗಲ್ವಾನ್‌ ಕಣಿಬವೆಯಲ್ಲಿ ಭಾರತ ಹಾಗೂ ಚೀನಾ ಯೋಧರ ನಡುವೆ ನಡೆವಿನ ಹಿಂಸಾತ್ಮಕ ಸಂಘರ್ಷಕ್ಕೆ ಸಂಬಂಧಿಸೊದ ಸತ್ಯ ಹೊರ ಹಾಕಿದ ಚೀನಾದ ಫರ್ವ ಬ್ಲಾಗರ್‌ಗೆ ಎಂಟು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಚೀನಾ ಸರ್ಕಾರ ಈ ಬಗ್ಗೆ ಕ್ರಮ ವಹಿಸಿದ ಬಳಿಕ ಆತನಿಗೆ ಜೈಲು ಶಿಕ್ಷೆಯಾಗಿದೆ. ಈ ಬ್ಲಾಗರ್, ಉಭಯ ದೇಶಗಳ ನಡುವಿನ ಸಂಘರ್ಷದಲ್ಲಿ ಚೀನಾದ ಸುಮಾರು 40 ಸೈನಿಕರು ನಿಧನರಾಗಿದ್ದರೆಂಬ ವಿಚಾರ ಬಹಿರಂಗಪಡಿಸಿದ್ದರು. ಆದರೆ ಚೀನಾ ಇದನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಇನ್ನು ಈ ಬ್ಲಾಗರ್ ಚೀನಾದ ಸೈನಿಕರು ಹಾಗೂ ಹುತಾತ್ಮರ ಹೆಸರು ಹಾಳು ಮಾಡುವ ಯತ್ನ ನಡೆಸಿದ್ದಾರೆಂಬ ಆರೋಪದಡಿ ಜೈಲು ಶಿಕ್ಷೆ ವಿಧಿಸಲಾಗಿದೆ.
ಮಾರ್ಚ್ನಲ್ಲಿ ಚೀನಾ ನೂತನ ರಕ್ಷಣಾ ಕಾನೂನು ಜಾರಿಗೊಳಿಸಿತ್ತು. ಚೀನಾದ Sina Weibo ಮೈಕ್ರೋ ಬ್ಲಾಗಿಂಗ್‌ ಅಕೌಂಟ್‌ನ ಬ್ಲಾಗರ್ ಚಾವು ಜಿಮಿಂಗ್ ಈ ಕಾನೂನಿನಡಿ ಶಿಕ್ಷೆಗೀಡಾದ ಮೊದಲ ವ್ಯಕ್ತಿಯಾಗಿದ್ದಾರೆ. ಇವರು 25 ಲಕ್ಷಕ್ಕೂ ಅಧಿಕ ಮಂದಿ ಫಾಲೋವರ್‌ಗಳನ್ನು ಹೊಂದಿದ್ದಾರೆ. ನಾನ್‌ಜಿಂಗ್ ಜಿಯಾನಯೆ ಪೀಪಲ್ಸ್ ಕೋರ್ಟ್ 38 ವರ್ಷದ ಈ ಬ್ಲಾಗರ್‌ಗೆ ಶಿಕ್ಷೆ ವಿಧಿಸಿದೆ. ಅಲ್ಲದೇ ಈ ಅಪರಾಧಕ್ಕಾಗಿ ಆನ್‌ಲೈನ್ ಪ್ಲಾಟ್‌ಫಾರಂ ಹಾಗೂ ನ್ಯಾಷನಲ್ ಮಿಡಿಯಾದಲ್ಲಿ ಹತ್ತು ದಿನದೊಳಗೆ ಕ್ಷಮೆ ಯಾಚಿಸಬೇಕು ಎಂದೂ ಆದೇಶಿಸಿದೆ. ಇನ್ನು ಈ ಬ್ಲಾಗರ್‌ ಕಾನೂನು ವಿಭಾಗದ ಪದವೀಧರ ಕೂಡಾ ಹೌದು.
ಚೀನಾದ ಕಮ್ಯುನಿಸ್ಟ್ ಪಾರ್ಟಿಯ ಪೀಪಲ್ಸ್ ಡೈಲಿ ಪತ್ರಿಕೆ ಕೋರ್ಟ್‌ನ ವಿಚಾರಣೆ ಬಗ್ಗೆ ವರದಿ ಪ್ರಕಟಿಸಿದೆ. ಇದರ ಅನ್ವಯ ಫೆಬ್ರವರಿ 19 ರಂದು ಎರಡು ಪೋಸ್ಟ್ ಮಾಡೆಲಾಗಿತ್ತು. ಇದಕ್ಕಾಗಿ ಬ್ಲಾಗರ್‌ನ್ನು ದೋಷಿ ಎಂದು ಪರಿಗಣಿಸಲಾಗಿದೆ. ಚೀನಾ ಯೋಧರ ಸಾಮರ್ಥ್ಯದ ಬಗ್ಗೆ ಸವಾಲೆತ್ತಿದ್ದ ಚಾವೂ ಗಲ್ವಾನ್ ಕಣಿವೆ ಸಂಘರ್ಷದಲ್ಲಿ ನಾಲಗ್ಕಲ್ಲ, ನಲ್ವತ್ತು ಯೋಧರು ಮೃತಪಟ್ಟಿದ್ದಾರೆಂದಿದ್ದರು. ಅವರನ್ನು ಮಾರ್ಚ್ 1 ರಂದು ಬಂಧಿಸಲಾಗಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು