News Karnataka Kannada
Thursday, April 18 2024
Cricket
ವಿದೇಶ

ಗಾಜಾ ಕದನ ವಿರಾಮ ; ಇದು ನಮ್ಮ ಜಯ ಎಂದ ಹಾಮಾಸ್‌

Photo Credit :

ಗಾಜಾ ಕದನ ವಿರಾಮ ; ಇದು ನಮ್ಮ ಜಯ ಎಂದ ಹಾಮಾಸ್‌

ಗಾಜಾ: ಇಸ್ರೇಲ್‌ ಘೋಷಿಸಿದ ಕದನ ವಿರಾಮವು ನಮಗೆ ದೊರೆತ ಗೆಲುವೆಂದು ಹಮಸ್‌ನ ಹಿರಿಯ ಮುಖಂಡರೊಬ್ಬರು ಹೇಳಿಕೆ ನೀಡಿದ್ದಾರೆ.ಇಸ್ರೇಲ್‌ ಮತ್ತು ಹಮಸ್‌ ನಡುವೆ ಕದನ ವಿರಾಮ ಜಾರಿಗೆ ಬಂದ ನಂತರ ಗಾಜಾ ನಗರದಲ್ಲಿ ಸಾವಿರಾರು ಜನರು ವಿಜಯೋತ್ಸವ ಆಚರಿಸಿದ್ದಾರೆ. ಆ ವೇಳೆ ಭಾಷಣ ಮಾಡಿರುವ ಗಾಜಾ ಪ್ರದೇಶದ ಇಸ್ಲಾಮಿಸ್ಟ್‌ ಚಳುವಳಿಯ ಹಿರಿಯ ಮುಖಂಡ ಖಲೀಲ್‌ ಅಲ್‌-ಹಯಾ, ‘ಇಸ್ರೇಲ್‌ನೊಂದಿಗೆ ನಾವು ಜಯ ಸಾಧಿಸಿದ್ದೇವೆ’ ಎಂದು ತಿಳಿಸಿದ್ದಾರೆ.
‘ಕದನ ವಿರಾಮವು ನಮಗೆ ದೊರೆತ ಗೆಲುವಾಗಿದೆ. ಇಸ್ರೇಲ್‌ ನಡೆಸಿದ ವಾಯುದಾಳಿಯಲ್ಲಿ ನಾಶವಾದ ಮನೆಗಳನ್ನು ಮತ್ತೆ ನಿರ್ಮಿಸಲಿದ್ದೇವೆ’ ಎಂದು ಅವರು ಜನರಿಗೆ ಭರವಸೆ ನೀಡಿದ್ದಾರೆ.ಗಾಜಾ ಪಟ್ಟಿಯಲ್ಲಿ 11 ದಿನಗಳ ಕಾಲ ನಡೆದ ಸಶಸ್ತ್ರ ಸಂಘರ್ಷವನ್ನು ಕೊನೆಗೊಳಿಸುವ ಉದ್ದೇಶದಿಂದ ಕದನ ವಿರಾಮವನ್ನು ಘೋಷಿಸಲು ಇಸ್ರೇಲ್ ಮತ್ತು ಹಮಸ್ ಒಪ್ಪಿಕೊಂಡಿವೆ.ಈ ವಿಚಾರವಾಗಿ ಹೇಳಿಕೆ ನೀಡಿರುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿಯು, ‘ಇಸ್ರೇಲ್‌ನ ಭದ್ರತಾ ಸಚಿವಾಲಯವು ಬೇಷರತ್ತಾದ ಕದನ ವಿರಾಮವನ್ನು ಒಪ್ಪಿಕೊಂಡಿದೆ. ಇದಕ್ಕಾಗಿ ಈಜಿಪ್ಟ್ ದೇಶವು ಮಾಡಿರುವ ಎಲ್ಲ ಶಿಫಾರಸುಗಳನ್ನು ಸರ್ವಾನುಮತದಿಂದ ಇಸ್ರೇಲ್‌ ಸ್ವೀಕರಿಸಿದೆ’ ಎಂದು ಹೇಳಿದೆ.
ಹಮಸ್ ಸಂಘಟನೆಯು ಕದನ ವಿರಾಮವನ್ನು ದೃಢಪಡಿಸಿದ್ದು, ಇದು ಶುಕ್ರವಾರ ಬೆಳಿಗ್ಗೆ 2:00 ಗಂಟೆಗೆ ಜಾರಿಗೆ ಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು