News Karnataka Kannada
Wednesday, April 17 2024
Cricket
ವಿದೇಶ

ಖಾಸಗಿ ಆಸ್ಪತ್ರೆಗಳ ಒತ್ತಾಯಕ್ಕೆ ಮಣಿದು ಸಿಟಿ ಸ್ಕ್ಯಾನ್ ದರ ಹೆಚ್ಚಿಸಿದ ಸರ್ಕಾರ

Photo Credit :

ಖಾಸಗಿ ಆಸ್ಪತ್ರೆಗಳ ಒತ್ತಾಯಕ್ಕೆ ಮಣಿದು ಸಿಟಿ ಸ್ಕ್ಯಾನ್ ದರ ಹೆಚ್ಚಿಸಿದ ಸರ್ಕಾರ

ಬೆಂಗಳೂರು, : ಖಾಸಗಿ ಆಸ್ಪತ್ರೆಗಳ ಒತ್ತಾಯಕ್ಕೆ ಮಣಿದು ರಾಜ್ಯ ಸರ್ಕಾರ ಸಿಟಿ ಸ್ಕ್ಯಾನ್ ದರವನ್ನು ಮತ್ತೆ ಹೆಚ್ಚಳ ಮಾಡಿದೆ.ಶುಕ್ರವಾರವಷ್ಟೇ ಖಾಸಗಿ ಆಸ್ಪತ್ರೆಗಳಲ್ಲಿ ಸಿಟಿಸ್ಕ್ಯಾನ್ ದರವನ್ನು 1500ರೂ.ಗೆ ನಿಗದಿಪಡಿಸಿದ್ದ ಸರ್ಕಾರ, ಇದೀಗ ಖಾಸಗಿ ಆಸ್ಪತ್ರೆಗಳ ಒತ್ತಾಯದಿಂದ ಅದನ್ನು 2500ರೂ.ಗೆ ಏರಿಕೆ ಮಾಡಿದೆ.
ಕೊರೊನಾ ರೋಗಿಗಳಲ್ಲಿ ಶ್ವಾಸಕೋಶ ಸೋಂಕಿನ ಪ್ರಮಾಣ ತಿಳಿಯಲು ಸಿಟಿ ಸ್ಕ್ಯಾನ್ ಮತ್ತು ಎಕ್ಸ್‌ರೇ ಮಾಡಿಸಲಾಗುತ್ತದೆ.ಸಾಮಾನ್ಯ ಸಂದರ್ಭದಲ್ಲಿ 2 ಸಾವಿರ ರೂ.ನಿಂದ 3 ಸಾವಿರ ರೂ. ಇದ್ದ ದರ 6ಸಾವಿರದಿಂದ 8ಸಾವಿರಕ್ಕೆ ಏರಿಕೆಯಾಗಿತ್ತು.ಈ ರೀತಿ ಪ್ರಯೋಗಾಲಯಗಳು ಜನರನ್ನು ಶೋಷಣೆ ಮಾಡುತ್ತವೆ ಎಂಬ ದೂರು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ದರವನ್ನು 1500ರೂ,ಗೆ ಇಳಿಕೆ ಮಾಡಲಾಗಿತ್ತು. ಹಾಗೂ ಸಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಸಿಟಿ ಸ್ಕ್ಯಾನ್ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. ಬಿಪಿಎಲ್ ಕಾರ್ಡ್‌ದಾರರಿಗೆ 1500ರೂ. ನಿಗದಿಪಡಿಸಿ ಆದೇಶ ಹೊರಡಿಸಿದೆ. ಎದೆಯ ಡಿಜಿಟಲ್ ಅಥವಾ ಸಾಮಾನ್ಯ ಸ್ವರೂಪದ ಎಕ್ಸ್‌ರೇಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ, ಎಕ್ಸ್‌ರೇಗೆ ಗರಿಷ್ಠ 250ರೂ. ದರ ನಿಗದಿಪಡಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು