News Karnataka Kannada
Thursday, April 25 2024
Cricket
ವಿದೇಶ

ಕೋವಿಡ್ ರೋಗಿ ಸಾವು; ವೈದ್ಯನಿಗೆ ಧರ್ಮದೇಟು ನೀಡಿದ ಸಂಬಂಧಿಗಳು, ಕ್ರಮಕ್ಕೆ ಆದೇಶಿಸಿದ ಸರ್ಕಾರ

Photo Credit :

ಕೋವಿಡ್ ರೋಗಿ ಸಾವು; ವೈದ್ಯನಿಗೆ ಧರ್ಮದೇಟು ನೀಡಿದ ಸಂಬಂಧಿಗಳು, ಕ್ರಮಕ್ಕೆ ಆದೇಶಿಸಿದ ಸರ್ಕಾರ

ಅಸ್ಸಾಂ : ಕೊರೋನ ಕಾರಣದಿಂದಾಗಿ ದಿನನಿತ್ಯ ದೇಶದಲ್ಲಿ ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದು, ಉಸಿರಾಟದ ತೊಂದರೆಯಿಂದ ಕೊರೋನಾ ರೋಗಿ ಮೃತಪಟ್ಟ ಹಿನ್ನೆಲೆಯಲ್ಲಿ ವೈದ್ಯನ ಮೇಲೆ ಹಲ್ಲೆ ನಡೆದಿರುವ ಘಟನೆ ನಡೆದಿದೆ. 

 

ಸೋಂಕಿತನೊಬ್ಬ ಉಸಿರಾಟ ತೊಂದರೆಯಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಹೂಜೈ ಜಿಲ್ಲೆಯ ವೈದ್ಯರೊಬ್ಬರನ್ನು ಮನಬಂದಂತೆ ಥಳಿಸಲಾಗಿದ್ದು , ಹಲ್ಲೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಕರಣ ಗಂಭೀರ ಸ್ವರೂಪ ಪಡೆದಿದೆ . ಈ ಪ್ರಕರಣ ಸಂಬಂಧ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ . 

 

ಇದೀಗ ತಪ್ಪಿತಸ್ಥರ ಮೇಲೆ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ . ಇದೊಂದುಪ ಎಂದು ಕರೆದಿರುವ ಸಿಎಂ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ . ಪ್ರಕರಣ ಸಂಬಂಧ ಪೊಲೀಸರು 24 ಆರೋಪಿಗಳನ್ನು ಬಂಧಿಸಿದ್ದಾರೆ . 

 

ಮಂಗಳವಾರ ನಡೆದ ಈ ಪ್ರಕರಣದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು , ವೈದ್ಯರು ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ . ಲಭ್ಯ ಮಾಹಿತಿಯ ಪ್ರಕಾರ , ಈ ಘಟನೆ ಮಂಗಳವಾರ ಮಧ್ಯಾಹ್ನ ಎರಡು ಗಂಟೆಗೆ ನಡೆದಿದೆ . ಕೊರೋನಾ ವಾರ್ಡ್‌ನಲ್ಲಿ ದಾಖಲಾಗಿದ್ದ ಪೀಪಲ್ ಪು ಹಳ್ಳಿ ನಿವಾಸಿ ಜಿಯಾಜುದ್ದೀನ್ ಮೃತಪಟ್ಟಿದ್ದರು . ರೋಗಿಯ ಸಾವಿನ ಬಳಿಕ , ಸುಮಾರು 15 ಮಂದಿ ಕುಟುಂಬ ಸದಸ್ಯರು ಜಗಳ ಆರಂಭಿಸಿದ್ದಾರೆ . 

 

ಅಲ್ಲದೇ ಕೈಗೆ ಸಿಕ್ಕ ವಸ್ತುಗಳಿಂದ ವೈದ್ಯರ ಮೇಲೆ ದಾಳಿ ನಡೆಸಿದ್ದಾರೆ . ಗುಂಪಿನಿಂದ ರಕ್ಷಿಸಿಕೊಳ್ಳಲು ಡಾಕ್ಟರ್ ಸೇನಾಪತಿ ಕೋಣೆಯಲ್ಲೇ ಬಂಧಿಸಿಕೊಂಡಿದ್ದಾರೆ . ಹೀಗಿದ್ದರೂ ರೋಗಿಯ ಸಂಬಂಧಿಕರು ದಾಳಿ ಮುಂದುವರೆಸಿ , ಅವರಿಗೆ ಥಳಿಸಿದ್ದಾರೆ . ಹೀಗಿರುವಾಗ ಉಳಿದ ವೈದ್ಯರು ಹಾಗೂ ದಾದಿಯರು ತಮ್ಮ ಜೀವ ಉಳಿಸಿಕೊಳ್ಳಲು ಅಲ್ಲಿಂದ ಓಡಿ ಹೋಗಿದ್ದಾರೆ . ಗಾಯಗೊಂಡಿದ್ದ ಡಾ . ಸೇನಾಪತಿಯನ್ನು ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ.  

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು