News Karnataka Kannada
Thursday, April 25 2024
ವಿದೇಶ

ಕೋವಿಡ್‌ ಲಸಿಕೆಗಳಿಗೆ ಏಕರೂಪ ದರ ನಿಗದಿ ಕೋರಿ ಪಿಐಎಲ್‌

Photo Credit :

ಕೋವಿಡ್‌ ಲಸಿಕೆಗಳಿಗೆ ಏಕರೂಪ ದರ  ನಿಗದಿ ಕೋರಿ ಪಿಐಎಲ್‌

ಮುಂಬೈ: ಕೋವಿಡ್‌–19 ಲಸಿಕೆಯ ದರವನ್ನು ಪ್ರತಿ ಡೋಸ್‌ಗೆ ₹ 150 ರಂತೆ ಮಾರಾಟ ಮಾಡಲು ಸೀರಂ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ಹಾಗೂ ಭಾರತ್‌ ಬಯೋಟೆಕ್‌ ಕಂಪನಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಬಾಂಬೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ಸಲ್ಲಿಸಲಾಗಿದೆ.ಲಸಿಕೆಯನ್ನು ಉತ್ಪಾದಿಸುವ ಈ ಕಂಪನಿಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ತಾವು ಮಾರಾಟ ಮಾಡಲಿರುವ ಲಸಿಕೆಗೆ ಬೇರೆ ದರಗಳನ್ನು ನಿಗದಿ ಮಾಡಿರುವುದನ್ನು ಸಹ ಅರ್ಜಿದಾರರು ಪ್ರಶ್ನಿಸಿದ್ದಾರೆ.
ವಕೀಲ ಫಯಾಜ್‌ಖಾನ್‌ ಹಾಗೂ ಮೂವರು ಕಾನೂನು ವಿದ್ಯಾರ್ಥಿಗಳು ಈ ಪಿಐಎಲ್‌ ಸಲ್ಲಿಸಿದ್ದು, ‘ಲಸಿಕೆಯನ್ನು ಅಗತ್ಯ ವಸ್ತು ಎಂದೇ ಪರಿಗಣಿಸಬೇಕು. ಹೀಗಾಗಿ, ಉತ್ಪಾದನೆ ನಂತರ ಲಸಿಕೆಯ ಮಾರಾಟ, ವಿತರಣೆಯ ಜವಾಬ್ದಾರಿಯನ್ನು ಖಾಸಗಿ ಕಂಪನಿಗಳಿಗೆ ನೀಡುವುದು ಸರಿಯಲ್ಲ’ ಎಂದು ಪ್ರತಿಪಾದಿಸಿದ್ದಾರೆ.ಈ ಅರ್ಜಿಯ ತುರ್ತು ವಿಚಾರಣೆಯನ್ನು ಮುಖ್ಯನ್ಯಾಯಮೂರ್ತಿ ದೀಪಂಕರ್‌ ದತ್ತಾ ಹಾಗೂ ನ್ಯಾಯಮೂರ್ತಿ ಜಿ.ಎಸ್‌.ಕುಲಕರ್ಣಿ ನೇತೃತ್ವದ ವಿಭಾಗೀಯ ಪೀಠ ನಡೆಸುವ ಸಾಧ್ಯತೆ ಇದೆ. ‘ಕೋವಿಡ್‌–19ನಿಂದಾಗಿ ಸಾಕಷ್ಟು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಔಷಧ ತಯಾರಕ ಕಂಪನಿಗಳು ಜನರ ಮನದಲ್ಲಿ ಭೀತಿಯನ್ನು ತುಂಬುತ್ತಿದ್ದಾರೆ’ ಎಂದೂ ಅರ್ಜಿಯಲ್ಲಿ ದೂರಿದ್ದಾರೆ.‘ಇಡೀ ದೇಶವೇ ಕೋವಿಡ್‌–19 ಪಿಡುಗಿನಿಂದ ತತ್ತರಿಸಿದೆ. ಇಂಥ ಸಂದರ್ಭದಲ್ಲಿ ಲಸಿಕೆಯ ದರವನ್ನು ಸರ್ಕಾರ ನಿಯಂತ್ರಿಸಬೇಕು. ಲಸಿಕೆ ಮಾರಾಟ ಹೆಸರಿನಲ್ಲಿ ಹಗಲು ದರೋಡೆಗೆ ಅವಕಾಶ ನೀಡಬಾರದು’ ಎಂದು ಅರ್ಜಿದಾರರು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು