News Karnataka Kannada
Tuesday, April 23 2024
Cricket
ವಿದೇಶ

ಕೋವಿಡ್‌ ನಿರ್ಬಂಧ ತೆಗೆಯುವುದು ಲಸಿಕೆ ಪಡೆಯದವರಿಗೆ ಹಾನಿಕಾರಕ: ಡಬ್ಲ್ಯೂಎಚ್‌ಒ ಮಹಾನಿರ್ದೇಶಕ

Photo Credit :

ಕೋವಿಡ್‌ ನಿರ್ಬಂಧ ತೆಗೆಯುವುದು ಲಸಿಕೆ ಪಡೆಯದವರಿಗೆ ಹಾನಿಕಾರಕ: ಡಬ್ಲ್ಯೂಎಚ್‌ಒ ಮಹಾನಿರ್ದೇಶಕ

ಕೋವಿಡ್‌ ನಿರ್ಬಂಧಗಳನ್ನು ಬೇಗನೆ ತೆಗೆಯುವುದರಿಂದ ಲಸಿಕೆ ಹಾಕಿಸಿಕೊಳ್ಳದವರು ಸಮಸ್ಯೆಗಳನ್ನು ಎದುರಿಸಬೇಕಾಗಿದ್ದು, ಅವರಿಗೆ ಇದು ಹಾನಿಕಾರಕವಾಗಿ ಪರಿಣಮಿಸಲಿದೆ ಎಂದು ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಟೆಡ್ರೊಸ್‌ ಅಧಾನೊಮ್‌ ಘೆಬ್ರೆಯೆಸಸ್‌ ಆತಂಕ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಆಫ್ರಿಕಾ, ಅಮೆರಿಕಾ, ಪಾಶ್ಚಾತ್ಯ ಫೆಸಿಪಿಕ್‌ನಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಕೋವಿಡ್‌ ಎರಡನೇ ಅಲೆಯ ಗಂಭೀರ ಸ್ವರೂಪದ ಪರಿಣಾಮವನ್ನು ಹಲವು ದೇಶಗಳು ಎದುರಿಸುತ್ತಿವೆ. ಇದರ ಮಧ್ಯೆಯೇ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ನೀಡಿರುವ ದೇಶಗಳು ನಿರ್ಬಂಧಗಳನ್ನು ತೆಗೆಯುವ ಪ್ರಯತ್ನದಲ್ಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿಶ್ವದ ಎಲ್ಲ ದೇಶಗಳು ಸೆಪ್ಟೆಂಬರ್‌ ಒಳಗೆ ಕನಿಷ್ಠ ಪಕ್ಷ ಶೇ. 10 ಜನರಿಗೆ ಲಸಿಕೆ ನೀಡಬೇಕು. ವರ್ಷದ ಅಂತ್ಯದ ವೇಳೆ ಶೇ. 30ರಷ್ಟು ಜನರಿಗೆ ಲಸಿಕೆ ನೀಡುವ ಗುರಿ ಹೊಂದಬೇಕು ಎಂದು ಟೆಡ್ರೊಸ್‌ ಕರೆ ನೀಡಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು