News Karnataka Kannada
Thursday, April 25 2024
Cricket
ವಿದೇಶ

ಕೋವಿಡ್‌ ನಿಂದ ಗುಣಮುಖರಾಗಿದ್ದರೂ ಮೃತರಾದ ಅವಳಿ ಸಹೋದರರು

Photo Credit :

ಕೋವಿಡ್‌ ನಿಂದ ಗುಣಮುಖರಾಗಿದ್ದರೂ  ಮೃತರಾದ ಅವಳಿ ಸಹೋದರರು

ಲಖನೌ: ಕೋವಿಡ್​ ನಂತರದ ಸಂಕೀರ್ಣತೆಯಿಂದ ಉತ್ತರ ಪ್ರದೇಶದ ಮೀರತ್​ ಮೂಲದ ಅವಳಿ ಸಹೋದರರು ಒಂದೇ ದಿನದಲ್ಲಿ ಸಾವಿಗೀಡಾಗಿರುವ ದಾರುಣ ಘಟನೆ ನಡೆದಿದೆ.ಅವಳಿ ಸಹೋದರರನ್ನು ಜೋಫ್ರೆಡ್​ ವರ್ಘಿಸ್​ ಗ್ರೆಗೊರಿ ಮತ್ತು ರಾಲ್ಫ್ರೆಡ್​ ಜಾರ್ಜ್​ ಗ್ರೆಗೊರಿ ಎಂದು ಗುರುತಿಸಲಾಗಿದೆ. ಕಳೆದ ಏಪ್ರಿಲ್​ 23ರಂದು ಇಬ್ಬರು 24ನೇ ವಸಂತಕ್ಕೆ ಕಾಲಿಟ್ಟಿದ್ದರು.ಮೃತರ ಅಪ್ಪ-ಅಮ್ಮ ಇಬ್ಬರು ಮೀರತ್​ನ ಸೆಂಟ್​ ಥಾಮಸ್​ ಶಾಲೆಯಲ್ಲಿ ಶಿಕ್ಷಕರು. ಸಹೋದರರಿಬ್ಬರು ಮೇ 1ರಂದು ಆನಂದ್​ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಪಾಲಕರು ತಿಳಿಸಿದರು.
ಮಕ್ಕಳ ಸಾವಿನ ಬಗ್ಗೆ ಮಾತನಾಡಿರುವ ತಂದೆ ಗ್ರೆಗೊರಿ ರಾಫೆಲ್​, ನಮ್ಮ ಕುಟುಂಬವೇ ನಾಶವಾಯಿತು. ಸದ್ಯ ನಮ್ಮ ಕುಟುಂಬದಲ್ಲಿ ಉಳಿದಿರುವುದು ಮೂವರೇ. ನನ್ನ ಅವಳಿ ಮಕ್ಕಳಾದ ಜೋಫ್ರೆಡ್​ ವರ್ಘಿಸ್​ ಗ್ರೆಗೊರಿ ಮತ್ತು ರಾಲ್ಫ್ರೆಡ್​ ಜಾರ್ಜ್​ ಗ್ರೆಗೊರಿ ಕರೊನಾ ಎರಡನೇ ಅಲೆಗೆ ಬಲಿಯಾಗಿದ್ದಾರೆ ಎಂದು ಕಣ್ಣೀರಾಕಿದ್ದಾರೆ. ಇಬ್ಬರಿಗೂ ಮೇ 10ರಂದು ನೆಗಿಟಿವ್​ ವರದಿ ಆಗಿತ್ತು. ಆದಾಗ್ಯೂ ಇಬ್ಬರಲ್ಲಿ ಮೇ 13ರಂದು ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ಅದೇ ದಿನ ರಾತ್ರಿ 11 ಗಂಟೆ ಸುಮಾರಿಗೆ ಓರ್ವ ಸಹೋದರ ಮೃತಪಟ್ಟರೆ, ಮೇ 14ರಂದು ಮತ್ತೊರ್ವ ಸಹೋದರ ಕೊನೆಯುಸಿರೆಳೆದಿದ್ದಾನೆ.
ಸಹೋದರರಿಬ್ಬರು ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಆದರೂ ಕರೊನಾ ಸೋಂಕಿಗೆ ಒಳಗಾಗಿದ್ದರು. ಕರೊನಾದಿಂದ ಗುಣಮುಖರಾದರು ಸೋಂಕು ಶ್ವಾಸಕೋಶಕ್ಕೆ ಹರಡಿ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು.ಬೆಳೆದು ಮನೆಗೆ ಆಸರೆಯಾಗಿದ್ದ ಮಕ್ಕಳಿಬ್ಬರ ಮರಣದಿಂದ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಇಷ್ಟೇ ಅಲ್ಲದೆ, ಹಿರಿಯ ಮಗನಿಗೂ ಕರೊನಾ ಪಾಸಿಟಿವ್​ ಆಗಿದ್ದು, ಕುಟುಂಬಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು