News Karnataka Kannada
Tuesday, April 16 2024
Cricket
ವಿದೇಶ

ಕೋವಿಡ್‌ ಗೆ ಮಂಗಳೂರು ವೈದ್ಯೆ ಬಲಿ

Photo Credit :

ಕೋವಿಡ್‌ ಗೆ ಮಂಗಳೂರು ವೈದ್ಯೆ ಬಲಿ

ಮಂಗಳೂರು ; ಇಲ್ಲಿನ ಇಂಡಿಯಾನಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೇರಳ ಮೂಲದ 25 ವರ್ಷದ ಯುವ ವೈದ್ಯೆ ಮಹಾಮಾರಿ ಕರೊನಾ ಸೋಂಕಿಗೆ ಬಲಿಯಾಗಿದ್ದಾರೆ.ಮೃತಳನ್ನು ಡಾ. ಸಿಸಿ ಮಹಾ ಬಶೀರ್​ ಎಂದು ಗುರುತಿಸಲಾಗಿದೆ. ಈಕೆ ಕೇರಳದ ಥಲಸ್ಸೆರಿ ಮೂಲದವಳು. ಮಂಗಳೂರು ನಗರದ ಪಂಪ್ ವೆಲ್ ಬಳಿಯಿರುವ ಇಂಡಿಯಾನ ಆಸ್ಪತ್ರೆ ಹಾಗೂ ದೇರಳಕಟ್ಟೆಯಲ್ಲಿರುವ ಕಣಚೂರು ಆಸ್ಪತ್ರೆಯಲ್ಲಿಯೂ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದ ಮಹಿಳೆಗೆ ಇತ್ತೀಚೆಗಷ್ಟೇ ಕೊರೊನಾ ಸೋಂಕು ತಗುಲಿತ್ತು‌.
ಸೋಂಕು ಹಿನ್ನೆಲೆಯಲ್ಲಿ ಇಂಡಿಯಾನಾ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಉಸಿರಾಟದ ತೊಂದರೆಯಿಂದ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಬೆಳಗ್ಗೆ (ಏಪ್ರಿಲ್​ 27) ಮೃತಪಟ್ಟಿದ್ದಾರೆ. ಅಲ್ಲದೆ, ಸಿಸಿ ಮಹಾ ಬಶೀರ್ ಅವರು 6 ತಿಂಗಳ ಗರ್ಭಿಣಿಯು ಆಗಿದ್ದರು. ಹೊರಗಿನ ಪ್ರಪಂಚಕ್ಕೆ ಬರುವ ಮುನ್ನವೇ ಕರೊನಾ ಅಟ್ಟಹಾಸಕ್ಕೆ ಮಗು ಸಹ ತಾಯಿಯೊಂದಿಗೆ ಮೃತಪಟ್ಟಿದೆ. ಇನ್ನು ಮಹಾ ಬಶೀರ್​ ಅವರಿಗೆ ಎರಡು ದಿನಗಳ ಹಿಂದೆ ಟೆಸ್ಟ್​ ಮಾಡಿದಾಗ ಕರೊನಾ ನೆಗಿಟಿವ್ ವರದಿ ಸಹ ಬಂದಿತ್ತು. ಆದರೆ, ಉಸಿರಾಟದ ತೊಂದರೆ ಮಾತ್ರ ಹಾಗೇ ಇತ್ತು. ಹೀಗಾಗಿ ನಿಧನರಾಗಿದ್ದಾರೆ. ವೈದ್ಯೆಗೆ ಕೇವಲ 8 ತಿಂಗಳ ಹಿಂದಷ್ಟೇ ವಿವಾಹವಾಗಿತ್ತು. ಪತಿ-ಪತ್ನಿ ಇಬ್ಬರೂ ಇಂಡಿಯಾನ ಆಸ್ಪತ್ರೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದರು‌.ಮಹಾ ಬಶೀರ್​ ಮಂಗಳೂರಿನ ದೇರಳಕಟ್ಟೆಯಲ್ಲಿರುವ ಕಣಚೂರು ಮೆಡಿಕಲ್​ ಕಾಲೇಜಿನಲ್ಲಿ ಎಂಡಿ ಅಧ್ಯಯನ ನಡೆಸುತ್ತಿದ್ದರು. ಮಹಾ ಅವರು ಕಾಸರಗೂಡಿನ ಡಾ. ಸಾವಫಾರ್​ ಎಂಬುವರ ಪತ್ನಿ. ಇಂದು ಹುಟ್ಟುರಾದ ಥಲಸ್ಸೆರಿಯ ಜುಮಾ ಮಸೀದಿ ಸ್ಟೇಡಿಯಂನಲ್ಲಿ ಶವಸಂಸ್ಕಾರ ನೆರವೇರಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು