News Karnataka Kannada
Thursday, April 25 2024
Cricket
ವಿದೇಶ

ಕೋವಿಡ್‌ ಕಡಿವಾಣಕ್ಕೆ ಅಮೇರಿಕಾದ 40 ಕಂಪೆನಿಗಳ ಸಿಈಒ ಗಳಿಂದ ಭಾರತಕ್ಕೆ ಸಹಾಯ ಕಾರ್ಯಪಡೆ ರಚನೆ

Photo Credit :

ಕೋವಿಡ್‌ ಕಡಿವಾಣಕ್ಕೆ ಅಮೇರಿಕಾದ 40 ಕಂಪೆನಿಗಳ ಸಿಈಒ ಗಳಿಂದ ಭಾರತಕ್ಕೆ ಸಹಾಯ ಕಾರ್ಯಪಡೆ ರಚನೆ

ವಾಷಿಂಗ್ಟನ್‌: ಅಮೆರಿಕದ ಸುಮಾರು 40 ಪ್ರಮುಖ ಕಂಪನಿಗಳ ಮುಖ್ಯ ಕಾರ್ಯನಿರ್ವ ಹಣಾಧಿಕಾರಿಗಳು (ಸಿಇಒ) ಕೋವಿಡ್‌ ವಿರುದ್ಧದ ಭಾರತದ ಹೋರಾಟಕ್ಕೆ ನೆರವಾಗಲು ಮುಂದಾಗಿದ್ದು, ಈ ಸಂಬಂಧ ಸಂಪನ್ಮೂಲಗಳನ್ನು ಕ್ರೋಡೀಕರಿಸಲು ಜಾಗತಿಕ ಕಾರ್ಯಪಡೆ ರಚಿಸಿದ್ದಾರೆ.ಅಮೆರಿಕದ ವಾಣಿಜ್ಯ ಮಂಡಳಿಯ ‘ಅಮೆರಿಕ–ಇಂಡಿಯಾ ಬಿಸಿನೆಸ್‌ ಕೌನ್ಸಿಲ್‌’ ಮತ್ತು ಅಮೆರಿಕ–ಇಂಡಿಯಾ ಸ್ಟ್ರಾಟಜಿಕ್ ಅಂಡ್ ಪಾರ್ಟನರ್‌ಶಿಪ್ ಒಕ್ಕೂಟ ಮತ್ತು ಬಿಸಿನೆಸ್‌ ರೌಂಡ್‌ ಟೇಬಲ್‌ ಸಂಘಟಿತ ಪ್ರಯತ್ನದೊಂದಿಗೆ ಈ ಜಾಗತಿಕ ಕಾರ್ಯಪಡೆ ರಚಿಸಲು ನಿರ್ಧರಿಸಲಾಯಿತು.
‘ಮುಂದಿನ ದಿನಗಳಲ್ಲಿ ಕಾರ್ಯಪಡೆಯ ಮೂಲಕ 20 ಸಾವಿರ ಆಮ್ಲಜನಕದ ಕಾನ್ಸಂಟ್ರೇಟರ್‌ಗಳನ್ನು ಭಾರತಕ್ಕೆ ಕಳುಹಿಸಲು ಈ ಕಂಪನಿಗಳೊಂದಿಗೆ ಸೋಮವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು’ ಎಂದು ಡೆಲಾಯ್ಟ್‌ ಸಿಇಒ ಪುನೀತ್ ರಂಜನ್ ತಿಳಿಸಿದರು.ಭಾರತದಲ್ಲಿ ಕೋವಿಡ್‌ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಆ ದೇಶಕ್ಕೆ ಅಗತ್ಯವಾದ ಲಸಿಕೆ, ಆಮ್ಲಜನಕ ಮತ್ತು ಇತರೆ ಜೀವರಕ್ಷಕ ಪರಿಕರಗಳ ನೆರವು ಒದಗಿಸುವುದು ಈ ಜಾಗತಿಕ ಕಾರ್ಯಪಡೆಯ ಉದ್ದೇಶ. ಈ ಕಾರ್ಯಪಡೆಗೆ ‘ಗ್ಲೋಬಲ್ ಟಾಸ್ಕ್‌ ಫೋರ್ಸ್‌ ಆನ್ ಪ್ಯಾಂಡಮಿಕ್ ರೆಸ್ಪಾನ್ಸ್‌; ಮೊಬಲೈಜಿಂಗ್ ಫಾರ್ ಇಂಡಿಯಾ‘ ಎಂದು ಹೆಸರಿಡಲಾಗಿದೆ. ಮತ್ತೊಂದು ದೇಶದಲ್ಲಿ ಉದ್ಭವಿಸಿರುವ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟನ್ನು ಪರಿಹರಿಸುವುದಕ್ಕಾಗಿ ಇದೇ ಮೊದಲ ಬಾರಿಗೆ ಅಮೆರಿಕದಲ್ಲಿ ಇಂಥ ಜಾಗತಿಕ ಕಾರ್ಯಪಡೆ ಆರಂಭವಾಗಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು