News Karnataka Kannada
Thursday, April 25 2024
Cricket
ವಿದೇಶ

ಕೋವಿಡ್‌ ಉಲ್ಬಣ, ಅನಿರ್ದಿಷ್ಟಾವಧಿಗೆ ಗಡಿ ಬಂದ್ ಮಾಡಿದ ಆಸ್ಟ್ರೇಲಿಯಾ

Photo Credit :

ಕೋವಿಡ್‌ ಉಲ್ಬಣ, ಅನಿರ್ದಿಷ್ಟಾವಧಿಗೆ ಗಡಿ ಬಂದ್ ಮಾಡಿದ ಆಸ್ಟ್ರೇಲಿಯಾ

ಮೆಲ್ಬರ್ನ್: ಕೋವಿಡ್‌ ಸೋಂಕಿನಿಂದ ದೇಶದ ಪ್ರಜೆಗಳನ್ನು ರಕ್ಷಿಸುವ ದೃಷ್ಟಿಯಿಂದ ಜಗತ್ತಿನ ಜೊತೆಗೆ ಸಂಪರ್ಕ ಕಲ್ಪಿಸುವ ಎಲ್ಲ ಗಡಿಯನ್ನು ಅನಿರ್ದಿಷ್ಟಾವಧಿಗೆ ಬಂದ್ ಮಾಡಲಾಗುವುದು ಎಂದು ಆಸ್ಟ್ರೇಲಿಯಾ ಭಾನುವಾರ ಪ್ರಕಟಿಸಿದೆ.

ಪ್ರಧಾನಿ ಸ್ಕಾಟ್ ಮಾರಿಸನ್‌ ಈ ತೀರ್ಮಾನವನ್ನು ಪ್ರಕಟಿಸಿದ್ದು ಸೋಂಕು ಸ್ಥಿತಿ ಹಿನ್ನೆಲೆಯಲ್ಲಿ ಕಳೆದ ಮಾರ್ಚ್‌ನಿಂದಲೂ ಗಡಿ ಬಂದ್‌ ಆಗಿದೆ. ಕಟ್ಟುನಿಟ್ಟಿನ ನಿಯಮಗಳ ಪಾಲನೆಯೊಂದಿಗೆ ದೇಶದ ಪ್ರಜೆಗಳಿಗಷ್ಟೇ ದೇಶಕ್ಕೆ ಮರಳಲು ಅವಕಾಶವಿದೆ.

ಆಸ್ಟ್ರೇಲಿಯಾ ಭಾರತದಿಂದ ಬರುವ ಎಲ್ಲಾ ಪ್ರಯಾಣಿಕ ವಿಮಾನಗಳ ಸಂಚಾರವನ್ನು ಈಗಾಗಲೇ ರದ್ದುಪಡಿಸಿದೆ. ಭಾರತದಲ್ಲಿ ಕೋವಿಡ್‌ ಸೋಂಕು ಪ್ರಕರಣಗಳ ತೀವ್ರ ಏರಿಕೆ ಹಿನ್ನೆಲೆಯಲ್ಲಿ ಈ ನಿರ್ಬಂಧವು ಮೇ 15ರವರೆಗೂ ಜಾರಿಯಲ್ಲಿರಲಿದೆ.

ಜಗತ್ತಿನೊಂದಿಗೆ ಸಂಪರ್ಕ ಹೊಂದಬೇಕು ಎಂಬ ಹಸಿವು ಆಸ್ಟ್ರೇಲಿಯನ್ನರಲ್ಲಿ ಸದ್ಯ ಇದೆ ಎಂದು ನಾನು ಭಾವಿಸಿಲ್ಲ. ಒಟ್ಟು ಪರಿಸ್ಥಿತಿಯನ್ನು ನಾವು ಜಾಗರೂಕತೆಯಿಂದ ಗಮನಿಸುತ್ತಿದ್ದೇವೆ ಎಂದು ಮಾರಿಸನ್ ತಿಳಿಸಿದರು.

ನಾಗರಿಕರಿಗೆ ಪೂರ್ಣ ಪ್ರಮಾಣದಲ್ಲಿ ಲಸಿಕೆ ನೀಡಿದ ನಂತರವೂ ಜಗತ್ತಿನ ಜೊತೆಗೆ ಮರುಸಂಪರ್ಕ ಹೊಂದುವುದು ಸುರಕ್ಷಿತವೇ ಎಂಬ ಬಗ್ಗೆಯೂ ನಮಗೆ ಅಸ್ಪಷ್ಟತೆಯಿದೆ. ಇದೇ ಕಾರಣದಿಂದ ಅನಿರ್ದಿಷ್ಟಾವಧಿಗೆ ಗಡಿಬಂದ್ ಮಾಡಲಾಗುತ್ತಿದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು