News Karnataka Kannada
Thursday, April 25 2024
Cricket
ವಿದೇಶ

ಕೊವಿಡ್ ಪ್ರಕರಣಗಳ ಸಂಖ್ಯೆ ಹಾಗೂ ಸಾವಿನ ಪ್ರಮಾಣದಲ್ಲಿ ಇಳಿಕೆ

Photo Credit :

ಕೊವಿಡ್ ಪ್ರಕರಣಗಳ ಸಂಖ್ಯೆ ಹಾಗೂ ಸಾವಿನ ಪ್ರಮಾಣದಲ್ಲಿ ಇಳಿಕೆ

ದೆಹಲಿ: ಕಳೆದ 2 ದಿನದಿಂದ ಕೊವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಕೊವಿಡ್ ಸಾವಿನ ಪ್ರಮಾಣದಲ್ಲಿಯೂ ಇಳಿಕೆಯಾಗುತ್ತಿದೆ ಎಂಬ ಸಮಾಧಾನಕರ ಅಂಶವನ್ನು ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಹೇಳಿದ್ದಾರೆ. ದೇಶದ 13 ರಾಜ್ಯಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಕೇಸ್‌ಗಳಿವೆ. 18 ರಾಜ್ಯಗಳಲ್ಲಿ ಕೊವಿಡ್ ಕೇಸ್‌ಗಳು ಇಳಿಕೆಯಾಗುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಮಹಾರಾಷ್ಟ್ರ, ಗುಜರಾತ್, ದೆಹಲಿ, ಮಧ್ಯಪ್ರದೇಶ, ಉತ್ತರಪ್ರದೇಶಲ್ಲಿ ಕೊವಿಡ್ ಕೇಸ್ ಕಡಿಮೆಯಾಗುತ್ತಿವೆ. ಆದರೆ, ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ, ಗೋವಾ, ತಮಿಳುನಾಡಿನಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಲವ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.ಲಸಿಕೆ ನೀಡಿಕೆ ಕುರಿತು ಮಾತನಾಡಿದ ಅವರು, 17.27 ಕೋಟಿ ಡೋಸ್‌ ರಾಜ್ಯಗಳಿಗೆ ವಿತರಿಸಲಾಗಿದೆ. 13.55 ಕೋಟಿ ಮೊದಲ‌ ಡೋಸ್ ನೀಡಲಾಗಿದೆ. 3.72 ಕೋಟಿ ಎರಡನೇ ಡೋಸ್ ನೀಡಲಾಗಿದೆ. 18-44 ವರ್ಷ ವಯಸ್ಸಿನ 25.59 ಲಕ್ಷ ಜನರಿಗೆ ಮೊದಲ ಡೋಸ್‌ ಲಸಿಕೆ ವಿತರಿಸಲಾಗಿದೆ ಎಂದು ತಿಳಿಸಿದ್ದಾರೆ.
ಪಿಎಂ ಕೇರ್ಸ್‌ ಫಂಡ್‌ನಿಂದ 1ಲಕ್ಷ ಆಕ್ಸಿಜನ್ ಕಾನ್ಸಂಟ್ರೇಟರ್‌ ಖರೀದಿಗೆ ನಿರ್ಧರಿಸಲಾಗಿದೆ. ದೇಶದಲ್ಲಿ ಮೆಡಿಕಲ್ ಆಕ್ಸಿಜನ್ ಉತ್ಪಾದನೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಪ್ರೆಷರ್ ಸ್ವಿಂಗ್ ಅಬ್ಸರ್ಪ್‌ಷನ್ ಪ್ಲಾಂಟ್ ಸ್ಥಾಪಿಸಿ ವೈದ್ಯಕೀಯ ಆಮ್ಲಜನಕ ಉತ್ಪಾದನೆ ಹೆಚ್ಚಿಸುತ್ತೇವೆ. ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಆಮದು ಮೂಲಕ ಪೂರೈಕೆ ಮಾಡುತ್ತೇವೆ. ಆಕ್ಸಿಜನ್ ಟ್ಯಾಂಕರ್, ಕಂಟೇನರ್‌ ಆಮದು ಮಾಡಿಕೊಳ್ಳುತ್ತೇವೆ ಎಂದು ಕೇಂದ್ರದ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ದೇಶೀಯವಾಗಿ ಆಕ್ಸಿಜನ್‌ ಟ್ಯಾಂಕರ್‌ಗಳ ಉತ್ಪಾದನೆ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ರೈಲು, ವಾಯು ಮಾರ್ಗದ ಮೂಲಕ ಟ್ಯಾಂಕರ್ ಸಾಗಾಟ ಮಾಡುತ್ತೇವೆ. ವೈದ್ಯಕೀಯ ಆಕ್ಸಿಜನ್ ಟ್ಯಾಂಕರ್ ಸಾಗಾಟ ಅವಧಿ ಇಳಿಕೆ ಮಾಡಲು ಕ್ರಮ ಕೈಗೊಳ್ಳುತ್ತೇವೆ. ಮೆಡಿಕಲ್ ಆಕ್ಸಿಜನ್ ಸಿಲಿಂಡರ್‌ಗಳನ್ನು ಖರೀದಿಸಲಾಗುವುದು. ಆಕ್ಸಿಜನ್ ಟ್ಯಾಂಕರ್‌ಗಳನ್ನು ಜಿಪಿಎಸ್ ಮೂಲಕ ಮಾನಿಟರಿಂಗ್ ಮಾಡಲಾಗುವುದು. ಆಕ್ಸಿಜನ್ ಸಾಗಣೆ, ಹಂಚಿಕೆಗೆ ಸೆಂಟ್ರಲ್ ಕಂಟ್ರೋಲ್ ರೂಂ ಮಾಡಲಾಗುವುದು ಎಂದು ಕೂಡ ಕೇಂದ್ರದ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು