News Karnataka Kannada
Friday, April 19 2024
Cricket
ವಿದೇಶ

ಕೊರೋನ ಲಸಿಕೆಯ ಪೇಟೆಂಟ್ ರದ್ದುಪಡಿಸಲು ಅಮೆರಿಕ ಬೆಂಬಲ

Photo Credit :

ಕೊರೋನ ಲಸಿಕೆಯ ಪೇಟೆಂಟ್ ರದ್ದುಪಡಿಸಲು ಅಮೆರಿಕ ಬೆಂಬಲ

ವಾಷಿಂಗ್ಟನ್ : ಸಾಮಾನ್ಯವಾಗಿ ಯಾವುದೇ ದೇಶ ಅಥವಾ ವ್ಯಕ್ತಿ ಅವರು ಕಂಡುಹಿಡಿದ ವಸ್ತುಗಳ ಮೇಲೆ ಹಕ್ಕನ್ನು ಹೊಂದುವ ಪೇಟೆಂಟ್ ಹಾಕಿಕೊಳ್ಳುವುದು ಸಹಜ. ಆದರೆ ಇದೀಗ ಇಡೀ ಪ್ರಪಂಚವನ್ನೇ ಬಾಧಿಸುತ್ತಿರುವ ಕೊರೊನಾದಿಂದ ಮುಕ್ತಿ ಪಡೆಯುವ ಲಸಿಕೆಯ ಪೇಟೆಂಟ್ ಕುರಿತು ಹಲವಾರು ಚರ್ಚೆಗಳು ನಡೆಯುತ್ತಿವೆ. 

 

ಮಹತ್ವದ ಬೆಳವಣಿಗೆಯೊಂದರಲ್ಲಿ ಮಾರಕ ಕೊರೋನಾ ತಡೆಗಟ್ಟುವ ಲಸಿಕೆಯ ಪೇಟೆಂಟ್ ರದ್ದುಪಡಿಸಬೇಕು ಎಂಬ ಬೇಡಿಕೆಗೆ ಅಮೆರಿಕ ಕೂಡ ತನ್ನ ಬೆಂಬಲ ಸೂಚಿಸಿದೆ. ಈ ಹಿಂದೆ ಅಮೆರಿಕ ಈ ಪ್ರಸ್ತಾಪ ವಿರೋಧಿಸಿತ್ತು . ಈಗ ಒಪ್ಪು ತಿರುವ ನಿಲುವು ಕಾರ್ಯರೂಪಕ್ಕೆ ಬಂದರೆ ವಿಶ್ವದ ಬಡ ರಾಷ್ಟ್ರಗ ಗಳಿಗೆ ಲಸಿಕೆ ಉತ್ಪಾದಿಸಲು ಸಾಧ್ಯವಾಗಲಿದೆ . 

 

ಕೊರೋನಾ ಜಾಗತಿಕ ಮಾರಿಯಾಗಿದೆ . ಈ ಸಂದರ್ಭದಲ್ಲಿ ಇದರ ವಿರುದ್ಧ ಸಂಘಟಿತ ಹೋರಾಟದ ಅಗತ್ಯ ಇದೆ ಎಂದು ಅಮೆರಿಕ ಹೇಳಿದೆ . ವಿಶ್ವ ವ್ಯಾಪಾರ ಸಂಘಟನೆ ಇದರ ನೇತೃತ್ವ ವಹಿಸಿದ್ದು , ಪೇಟೆಂಟ್ ರದ್ದುಪಡಿಸುವ ಪ್ರಸ್ತಾಪಕ್ಕೆ ಪ್ರಮಖ ಔಷಧ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿವೆ .

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು