News Karnataka Kannada
Saturday, April 20 2024
Cricket
ವಿದೇಶ

ಕೊರೋನ ಮತ್ತು ಆರ್ಥಿಕ ಸಂಕಷ್ಟ ; ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು

Photo Credit :

ಕೊರೋನ ಮತ್ತು ಆರ್ಥಿಕ ಸಂಕಷ್ಟ ; ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು

 

ಚಾಮರಾಜನಗರ ಜೂನ್‌ ೨ : ಕೊರೊನಾ ಮತ್ತು ಲಾಕ್‌ ಡೌನ್‌ ನಿಂದ ಆಗಿರುವ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತೊಂದರೆಗೀಡಾದ ನಾಲ್ಕು ಜನರ ಕುಟುಂಬವೊಂದು ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ವರದಿಯಾಗಿದೆ. ಸಾವಿಗೀಡಾದವರನ್ನು ಗ್ರಾಮದ ಮಹದೇವಸ್ವಾಮಿ(45), ಅವರ ಪತ್ನಿ ಮಂಗಳಮ್ಮ, ಮಕ್ಕಳಾದ ಗೀತಾ ಹಾಗೂ ಶೃತಿ ಎಂದು ಗುರುತಿಸಲಾಗಿದೆ.
ಮೂಕನಹಳ್ಳಿಯ ನಿವಾಸಿ ಮಹಾದೇವ ಸ್ವಾಮಿ ಅವರಿಗೆ ಕೊರೋನಾ ಪಾಸಿಟಿವ್ ಆಗಿ ಹೋಂ ಐಸೊಲೇಷನ್ ನಲ್ಲಿದ್ದು ನಂತರ ಗುಣಮುಖರಾಗಿದ್ದರು. ಆದರೆ ಲಾಕ್‌ ಡೌನ್‌ ಕಾರಣದಿಂದಾಗಿ ಈ ಕಟುಂಬವು ಆರ್ಥಿಕ ಸಂಕಷ್ಟದಲ್ಲಿತ್ತು ಎಂದು ನೆರೆ ಹೊರೆಯವರು ತಿಳಿಸಿದ್ದಾರೆ. ಬುಧವಾರ ಬೆಳಿಗ್ಗೆ ಇವರ ಮನೆಯಿಂದ ಯಾರೂ ಹೊರಬರದಾಗ ಅಕ್ಕ ಪಕ್ಕದವರು ಕಿಟಕಿ ತೆಗೆದು ನೋಡಿದ್ದಾರೆ. ನಾಲ್ವರೂ ಕೂಡ ಮನೆಯ ಮೇಲ್ಚಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡು ಬಂತು. ಚಾಮರಾಜನಗರ ಪೂರ್ವ ಪೋಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸುತಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು